Asianet Suvarna News Asianet Suvarna News

Earn Money: ಈ ಸೈಟಿಗೆ ವಾಯ್ಸ್ ಓವರ್ ಕೊಟ್ಟು, ಕೈ ತುಂಬಾ ಹಣ ಗಳಿಸಿ

ಹಣಗಳಿಸಲು ನಾನಾ ವಿಧಗಳಿವೆ. ಅದ್ರ ಬಗ್ಗೆ ಸರಿಯಾದ ಜ್ಞಾನವಿರಬೇಕು. ನಿಮ್ಮ ಧ್ವನಿ ಸುಮಧುರವಾಗಿದ್ದರೆ ಅಥವಾ ಭಾವನೆಗಳಿಗೆ ತಕ್ಕಂತೆ ಧ್ವನಿ ಬದಲಿಸುವ ಕಲೆ ಗೊತ್ತಿದ್ದರೆ ನೀವೂ ಮನೆಯಲ್ಲೇ ಕುಳಿತು ಹಣ ಗಳಿಸಬಹುದು. ಅದು ಹೇಗೆ ಗೊತ್ತಾ?
 

How To Earn Money From Voice Over to reputed website roo
Author
First Published Jun 22, 2023, 5:14 PM IST

ಮನೆಯಲ್ಲೇ ಕುಳಿತು ಹಣಗಳಿಸಲು ನಾನಾ ವಿಧಗಳಿವೆ. ಈಗಿನ ದಿನಗಳಲ್ಲಿ ಆನ್ಲೈನ್ ಜಾಬ್ ಸಂಖ್ಯೆ ಹೆಚ್ಚಾಗಿದೆ. ನೀವು ಕೂಡ ಮನೆಯಲ್ಲಿಯೇ ಕುಳಿತು ನಿಮ್ಮ ಬಿಡುವಿನ ಸಮಯದಲ್ಲಿ ಹಣ ಗಳಿಸಬಹುದು. ನಾವಿಂದು ನಿಮ್ಮ ಧ್ವನಿ ಮಾರಾಟದ ಮೂಲಕ ನೀವು ಹೇಗೆ ಹಣ ಗಳಿಸಬಹುದು ಎಂಬುದನ್ನು ಹೇಳ್ತೇವೆ. ಇದಕ್ಕೆ ವೈಸ್ ಓವರ್ ಜಾಬ್ ಅಂತಾ ಕರೀತಾರೆ.

ವಾಯ್ಸ್ ಓವರ್ (Voice Over) ಎಂದರೇನು? : ವಾಯ್ಸ್ ಓವರ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಟಿವಿ, ರೆಡಿಯೋ ಸೇರಿದಂತೆ ಸಾಮಾಜಿಕ ಜಾಲತಾಣ (Social Network) ದಲ್ಲಿ ಸುಮಧುರ  ಧ್ವನಿಯನ್ನು ನೀವು ಕೇಳಿರ್ತೀರಿ. ಈಗಿನ ದಿನಗಳಲ್ಲಿ ಯುಟ್ಯೂಬ್ ಚಾನೆಲ್ ಗಳು ಹೆಚ್ಚಾಗಿದ್ದು, ಮಕ್ಕಳ ವಿಡಿಯೋದಿಂದ ಹಿಡಿದು ದೊಡ್ಡವರ ವಿಡಿಯೋದವರೆಗೆ ಎಲ್ಲ ವಿಡಿಯೋಕ್ಕೂ ಬ್ಯಾಗ್ ಗ್ರೌಂಡ್ ವೈಸ್ ಬರ್ತಿರುತ್ತದೆ. ಅದನ್ನೇ ವಾಯ್ ಓವರ್ ಎನ್ನುವುದು. ಅಕ್ಷರಕ್ಕೆ ಧ್ವನಿ ನೀಡಿ ಅದನ್ನು ಎಡಿಟ್ ಮಾಡಿ, ವಿಡಿಯೋ ಸೇರಿಸಿ ನಿಮ್ಮ ಮುಂದಿಡಲಾಗುತ್ತದೆ. ಹಲವಾರು ಕಂಪನಿಗಳಿವೆ ಮತ್ತು ಅವರ ಪ್ರಾಜೆಕ್ಟ್ ಗೆ ನೀವೂ ಕೂಡ ನಿಮ್ಮ ಧ್ವನಿಯನ್ನು ನೀಡಬಹುದು. ನಿಮ್ಮ ಧ್ವನಿ ಚೆನ್ನಾಗಿದ್ದು, ನೀವೂ ವೈಸ್ ಓವರ್ ನೀಡಬಲ್ಲಿರಿ ಎಂದಾದ್ರೆ ಮನೆಯಲ್ಲೇ ಕುಳಿತು ಕಂಪನಿಗಳ ಜೊತೆ ಟೈ ಅಪ್ ಆಗಿ ನೀವು ಹಣ ಸಂಪಾದನೆ ಮಾಡಬಹುದು.

ಅನೇಕ ದೊಡ್ಡ ಕಂಪನಿಗಳು ತಮ್ಮ ಫೈಬರ್ ನಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್  ಗಾಗಿ ಹುಡುಕುತ್ತಿರುತ್ತವೆ. ನೀವು ಫ್ರೀಲ್ಯಾನ್ಸಿಂಗ್ ವಾಯ್ಸ್ ಓವರ್‌ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಮೂಲಕ ಮನೆಯಲ್ಲಿ ಕುಳಿತು ಗಂಟೆಗೆ ಇಷ್ಟರಂತೆ ಹಣ ಗಳಿಸಬಹುದು. ವೈಸ್ ಓವರ್ ಗೆ ಕಂಪನಿಗಳು ನೀಡುವ ಶುಲ್ಕ ಬೇರೆಬೇರೆಯಾಗಿರುತ್ತದೆ.

Personal Finance: ಖಾತೆಯೊಂದು, ಮೂರು ಲಾಭ ನೀಡುವ SBI ಈ ಖಾತೆ ವಿಶೇಷವೇನು?

ಫ್ರೀಲ್ಯಾನ್ಸಿಂಗ್ ವೈಸ್ ಓವರ್ ಆರ್ಟಿಸ್ಟ್ ಆಗೋದು ಹೇಗೆ? : 
* ಮೊದಲನೆಯದಾಗಿ  ಉತ್ತಮ ಪ್ರೊಫೈಲ್ ಅನ್ನು ರಚಿಸಿ.
* ನಂತರ  20 ರಿಂದ 30 ಸೆಕೆಂಡುಗಳವರೆಗೆ ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿ ಆ ಆಡಿಯೊವನ್ನು ನಿಮ್ಮ ಪ್ರೊಫೈಲ್‌ನಲ್ಲಿ ಹಾಕಿ.
*  ಕಂಪನಿಯು ನಿಮ್ಮ ವಾಯ್ಸ್ ಓವರ್ ಪ್ರೊಫೈಲ್ ಅನ್ನು ನೋಡಿದಾಗಲೆಲ್ಲಾ ನೀವು ನೀಡಿರುವ ಆಡಿಯೋಗಳನ್ನು ಪರಿಶೀಲಿಸುತ್ತದೆ. ನಿಮ್ಮ ವೈಸ್ ಓವರ್ ಅವರಿಗೆ ಸೂಕ್ತವೆನ್ನಿಸಿದ್ರೆ ನಿಮ್ಮನ್ನು ಸಂರ್ಪಕಿಸುತ್ತದೆ.  
* ವೈಸ್ ಓವರ್ ಕೆಲಸ ಬೇಕೆಂದ್ರೆ ನೀವು ಉತ್ತಮ ಧ್ವನಿಯನ್ನು ರೆಕಾರ್ಡ್ ಮಾಡಿ ಹಾಕಬೇಕಾಗುತ್ತದೆ.  
* ಒಮ್ಮೆ ನಿಮ್ಮ ವೈಸ್ ಪರಿಚಿತವಾದ್ರೆ ನಿಮಗೆ ಕೆಲಸ ಹುಡುಕುವುದು ಕಷ್ಟವಾಗುವುದಿಲ್ಲ.

ಈ ಸೈಟ್ ಮೂಲಕ ನೀವು ಹಣ ಗಳಿಸಿ :
ವಾಯ್ಸ್ ಓವರ್ 123  :
 ವೈಸ್ ಓವರ್ 123 ಒಂದು ವೆಬ್‌ಸೈಟ್ ಆಗಿದೆ.  ಇಲ್ಲಿ ನೀವು ಯಾವುದೇ ಹಣವನ್ನು ಹೂಡಿಕೆ ಮಾಡಬೇಕಾಗಿಲ್ಲ. ನೀವು ನಿಮ್ಮ ಧ್ವನಿಯನ್ನು ರೆಕಾರ್ಡ್  ಮಾಡಿ ಈ ವೆಬ್ ಸೈಟ್ ಗೆ ಪೋಸ್ಟ್ ಮಾಡಬೇಕು. ಅದಕ್ಕಾಗಿ ನಿಮ್ಮ ಖಾತೆಯನ್ನು ತೆರೆಯಬೇಕು. ಅಲ್ಲಿಗೆ ಭೇಟಿ ನೀಡುವ ಕಂಪನಿಗಳು ನಿಮ್ಮ ವೈಸ್ ಪರೀಕ್ಷೆ ಮಾಡಿ, ಇಷ್ಟವಾದ್ರೆ ನಿಮ್ಮನ್ನು ಸಂಪರ್ಕಿಸಿ, ಕೆಲಸ ನೀಡುತ್ತದೆ. 

Personal Finance : ಇಎಸ್ಐ ಕಾರ್ಡ್‌ನಿಂದ ಇದೆ ಇಷ್ಟು ಲಾಭ

ಕಾರ್ಟೂನ್‌ನಲ್ಲಿ ವಾಯ್ಸ್ ಓವರ್ ವರ್ಕ್ ಮಾಡುವ ಮೂಲಕವೂ ಹಣ ಗಳಿಸಬಹುದು :  ಕಾರ್ಟೂನ್ ವೈಸ್ ಓವರ್ ಕೊಡೋದು ನಿಮಗೆ ಇಷ್ಟವಾಗಿದ್ದರೆ ನೀವೂ ಈ ಕೆಲಸ ಮಾಡಬಹುದು. ಇದ್ರಿಲ್ಲಿ ವೆರೈಟಿ ಸೌಂಡ್ ಗಳನ್ನು ಮಾಡಬೇಕಾಗುತ್ತದೆ. ಸಣ್ಣಪುಟ್ಟ ಕಾರ್ಟೂನ್ ಗೆ ವೈಸ್ ನೀಡುವ ಮೂಲಕ ಅನುಭವಪಡೆದು ನಂತ್ರ ದೊಡ್ಡ ದೊಡ್ಡ ಕಾರ್ಟೂನ್ ಗೆ ನೀವು ವೈಸ್ ನೀಡಲು ಶುರು ಮಾಡಬಹುದು. ಇದ್ರಲ್ಲೇ ನೀವು 30 ರಿಂದ 40 ಸಾವಿರ ರೂಪಾಯಿ ಗಳಿಸಬಹುದು ಅಂದ್ರೆ ನಿಮಗೆ ಅಚ್ಚರಿಯಾಗಬಹುದು. 

ಇದಲ್ಲದೆ ನೀವು ವೈಸ್ ಡಾಟ್ ಕಾಮ್, ಸಾಮಾಜಿಕ ಜಾಲತಾಣಗಳಲ್ಲಿ ವೈಸ್ ನೀಡುವ ಮೂಲಕವೂ ಹಣ ಗಳಿಕೆ ಮಾಡಬಹುದು. ನಿಮ್ಮ ವೈಸ್ ಬದಲಿಸುವ ಶೈಲಿ ನಿಮಗೆ ತಿಳಿದಿದ್ದರೆ ಹೆಚ್ಚೆಚ್ಚು ಆಫರ್ ಗಳನ್ನು ನೀವು ಪಡೆಯಬಹುದು. 

Follow Us:
Download App:
  • android
  • ios