Instagram ಮೂಲಕವೂ ಹಣ ಗಳಿಸಬಹುದು, ಅದಕ್ಕೇನು ಮಾಡಬೇಕು?
ಹಣ ಗಳಿಕೆಗೆ ಈಗ ಸಾಕಷ್ಟು ದಾರಿಯಿದೆ. ಒಂದು ವಿಡಿಯೋ ಅಥವಾ ಫೋಟೋ ಮೂಲಕ ನೀವು ಸಾವಿರಾರು ರೂಪಾಯಿ ಗಳಿಸಬಹುದು. ಆದ್ರೆ ಅದು ಹೇಗೆ ಎಂಬುದು ನಿಮಗೆ ತಿಳಿದಿರಬೇಕು. ಇನ್ಸ್ಟಾಗ್ರಾಮ್ ಮೂಲಕ ಹೇಗೆಲ್ಲ ಹಣ ಗಳಿಸಬಹುದು ಎಂಬುದನ್ನು ನಾವಿಂದು ಹೇಳ್ತೇವೆ.
ಇದು ಡಿಜಿಟಲ್ ಯುಗ. ನಿಮಗೆಲ್ಲ ಗೊತ್ತಿರೋ ಹಾಗೆ ಯುಟ್ಯೂಬ್,ಫೇಸ್ಬುಕ್, ಇನ್ಸ್ಟಾಗ್ರಾಮ್ ನೋಡುವವರ ಸಂಖ್ಯೆ ವಿಪರೀತವಾಗಿದೆ. ಜನರಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಸಾಕಷ್ಟು ಮನರಂಜನೆ ಸಿಗ್ತಿದೆ. ಟಿಕ್ ಟಾಕ್ ಭಾರತದಲ್ಲಿ ಬ್ಯಾನ್ ಆಗ್ತಿದ್ದಂತೆ ಇನ್ಸ್ಟಾಗ್ರಾಮ್ ರೀಲ್ಸ್ ಪ್ರಸಿದ್ಧಿಗೆ ಬಂದಿದೆ. ರೀಲ್ಸ್ ಮೂಲಕ ಜನರು ಲಕ್ಷಾಂತರ ರೂಪಾಯಿ ಗಳಿಸ್ತಿದ್ದಾರೆಂದ್ರೆ ನೀವು ನಂಬ್ಲೇಬೇಕು. ಕ್ರಿಕೆಟರ್ ವಿರಾಟ್ ಕೊಹ್ಲಿ, @virat.kohli ಇನ್ಸ್ಟಾಗ್ರಾ ಪೇಜ್ ನಲ್ಲಿ ಸಾಕಷ್ಟು ಹಣ ಗಳಿಸ್ತಿದ್ದಾರೆ. ಅವರು ಒಂದು ಪೋಸ್ಟ್ ಗೆ ಸುಮಾರು 5 ರಿಂದ 6 ಕೋಟಿ ರೂಪಾಯಿ ಗಳಿಸುತ್ತಾರೆ. ಕೊಹ್ಲಿ ಮಾತ್ರವಲ್ಲ ಸೆಲೆಬ್ರಿಟಿಗಳನ್ನು ಹೊರತುಪಡಿಸಿ ಕೆಲ ಜನಸಾಮಾನ್ಯರ ಗಳಿಕೆ ಕೂಡ ಇದ್ರಲ್ಲಿ ಲಕ್ಷದ ಮೇಲಿದೆ. ಇನ್ಸ್ಟಾಗ್ರಾಮ್ ನಲ್ಲಿ ಇಷ್ಟೊಂದು ಹಣ ಯಾರು ಕೊಡ್ತಾರೆ? ಹಾಗೆ ಇಷ್ಟೊಂದು ಹಣ ಗಳಿಸೋದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡ್ಬಹುದು. ನಾವಿಂದು ಇನ್ಸ್ಟಾಗ್ರಾಮ್ ಮೂಲಕ ನೀವು ಹೇಗೆ ಹಣ ಗಳಿಸಬಹುದು ಎಂಬುದನ್ನು ಹೇಳ್ತೇವೆ. ನೀವೂ ಇದನ್ನು ಫಾಲೋ ಮಾಡಿದ್ರೆ ತಿಂಗಳಿಗೆ 20 ಸಾವಿರವಂತೂ ಆರಾಮವಾಗಿ ಗಳಿಸಬಹುದು.
ಇನ್ಸ್ಟಾಗ್ರಾಮ್ (Instagram) ನಲ್ಲಿ ಹಣ (Money) ಗಳಿಸೋದು ಹೇಗೆ? : ಇದನ್ನು ತಿಳಿದುಕೊಳ್ಳುವ ಮೊದಲು ಇನ್ಸ್ಟಾಗ್ರಾಮ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ. ಇನ್ಸ್ಟಾಗ್ರಾಮ್ ಅಕ್ಟೋಬರ್ 6, 2010 ರಂದು ಪ್ರಾರಂಭಿಸಲಾಯಿತು. 2022 ರ ವೇಳೆಗೆ ಒಟ್ಟು 1.4 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಅಧಿಕೃತ ಮಾಹಿತಿಯ ಪ್ರಕಾರ, ಇನ್ಸ್ಟಾಗ್ರಾಮ್ ಇಂದು ವಿಶ್ವದ 4 ನೇ ಅತಿದೊಡ್ಡ ಸಾಮಾಜಿಕ ಮಾಧ್ಯಮವಾಗಿದೆ. ಕೆಲವು ವರ್ಷಗಳಲ್ಲಿ ಇದು ನಂಬರ್ ಒನ್ ಪ್ಲಾಟ್‌ಫಾರ್ಮ್ (Platform) ಆಗಲಿದೆ.ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬಳಕೆದಾರರನ್ನು ಹೊಂದಿರುವ ಇನ್ಸ್ಟಾಗ್ರಾಮ್ ನಲ್ಲಿ ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳ ಪ್ರಚಾರ ಮಾಡುತ್ತವೆ. ಈ ಪ್ರಚಾರಕ್ಕೆ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುತ್ತದೆ. ಅವರ ಒಂದು ಪೋಸ್ಟ್ ಗೆ ಕಂಪನಿಗಳು ಹಣ ನೀಡುತ್ತವೆ. ಇದು ಸೆಲೆಬ್ರಿಟಿ ವಿಷ್ಯವಾಯ್ತು, ಇನ್ನು ಜನಸಾಮಾನ್ಯರು ಹಣ ಗಳಿಸಬೇಕೆಂದ್ರೆ ಫಾಲೋವರ್ಸ್ ಸಂಖ್ಯೆ ಹೆಚ್ಚಿರಬೇಕು. ಹೆಚ್ಚು ಫಾಲೋವರ್ಸ್ ಹೊಂದಿರುವವರು ಹೆಚ್ಚೆಚ್ಚು ಗಳಿಸ್ತಾರೆ. ಉದಾಹರಣೆಗೆ 1 ಕೆ ಫಾಲೋವರ್ಸ್ ಹೊಂದಿರುವವರು ಒಂದು ಪೋಸ್ಟ್ ಗೆ 7 ಸಾವಿರಿಂದ 10 ಸಾವಿರ ಗಳಿಸಬಹುದು. ಅದೇ 500 ಕೆ ಫಾಲೋವರ್ಸ್ ಹೊಂದಿರುವ ಜನರು 1 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಗಳಿಸ್ತಾರೆ. ಹೆಚ್ಚು ಫಾಲೋವರ್ಸ್ ಬರ್ತಿದ್ದಂತೆ ಅನೇಕ ಕಂಪನಿಗಳು ಜಾಹೀರಾತು ನೀಡಲು ನಿಮ್ಮ ಬಳಿ ಬರುತ್ವೆ. ಅದರ ಮೂಲಕವೂ ನೀವು ಹಣ ಗಳಿಸಬಹುದು.
ಇನ್ಸ್ಟಾಗ್ರಾಮ್ ನಲ್ಲಿ ಹಣ ಗಳಿಸುವ ವಿಧಾನ : ಇನ್ಸ್ಟಾಗ್ರಾಮ್ ನಲ್ಲಿ ಹಣವನ್ನು ಬೇರೆ ಬೇರೆ ವಿಧಾನದ ಮೂಲಕ ಗಳಿಸಬಹುದು.
ಸ್ಪಾನ್ಸರ್ ಪೋಸ್ಟ್ : ಇನ್ಸ್ಟಾಗ್ರಾಮ್ ಪೋಸ್ಟ್, ಸ್ಟೋರಿ ಅಥವಾ ರೀಲ್‌ನೊಂದಿಗೆ ನೀವು ಬೇರೊಬ್ಬರ ಬ್ರ್ಯಾಂಡ್ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಿದಾಗ ಅದಕ್ಕೆ ಪ್ರತಿಯಾಗಿ ಅವರು ನಿಮಗೆ ಹಣವನ್ನು ನೀಡುತ್ತಾರೆ. ಇದನ್ನು ಪ್ರಾಯೋಜಿತ ಪೋಸ್ಟ್ ಎಂದು ಕರೆಯಲಾಗುತ್ತದೆ. ಫ್ಯಾಶನ್‌ಗೆ ಸಂಬಂಧಿಸಿದ ವಿಷಯವನ್ನು ಪೋಸ್ಟ್ ಮಾಡುವ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು, ಆ ಖಾತೆಯಲ್ಲಿ 1 ಲಕ್ಷ ಫಾಲೋವರ್ಸ್ ಇದ್ದರೆ ಫ್ಲಿಪ್‌ಕಾರ್ಟ್ ಅಥವಾ ಬೇರೆ ಕಂಪನಿಗಳ ಬ್ರ್ಯಾಂಡ್‌ಗಳನ್ನು ಜಾಹೀರಾತು ಮಾಡುವ ಮೂಲಕ ನೀವು 25,000 ಸಾವಿರ ರೂಪಾಯಿವರೆಗೆ ಗಳಿಸಬಹುದು.
ದುಡ್ಡೇ ದೊಡ್ಡಪ್ಪ..! ಒಂದೂವರೆ ಲಕ್ಷಕ್ಕೆ Instagram ಖಾತೆಗೆ ಬ್ಲ್ಯೂಟಿಕ್, 10 ಸಾವಿರ ರೂಪಾಯಿಗೆ 10 ಲಕ್ಷ ವೀವ್ಸ್!
ಅಂಗಸಂಸ್ಥೆ ಮಾರ್ಕೆಟಿಂಗ್ : ಅಂಗಸಂಸ್ಥೆ ಮಾರ್ಕೆಟಿಂಗ್ ಸುಲಭವಾದ ಮಾರ್ಗವಾಗಿದೆ. ಇದರಲ್ಲಿ ನೀವು ಯಾವುದೇ ಇ-ಕಾಮರ್ಸ್ ಕಂಪನಿಯ ಉತ್ಪನ್ನಗಳನ್ನು ಪ್ರಚಾರ ಮಾಡಬೇಕು. Amazon, Flipkart, eBay, Myntra ಇತ್ಯಾದಿ ಕಂಪನಿ ಉತ್ಪನ್ನ ಪ್ರಚಾರ ಮಾಡ್ಬೇಕು, ನೀವು ಹಾಕಿದ ಲಿಂಕ್ ಮೂಲಕ ಬಳಕೆದಾರರು ವಸ್ತು ಖರೀದಿ ಮಾಡಿದ್ರೆ ನಿಮಗೆ ಹಣ ಸಿಗುತ್ತದೆ.
ನಿಮ್ಮ ವಸ್ತುವಿನ ಮಾರಾಟ : ನೀವು ಯಾವುದೇ ವಸ್ತುವನ್ನು ತಯಾರಿಸುತ್ತಿದ್ದರೆ ಅಥವಾ ನಿಮ್ಮದೆ ಬ್ಯುಸಿನೆಸ್ ಇದ್ದರೆ ನೀವು ಆ ವಸ್ತುಗಳ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಾಕಿ ಮಾರಾಟ ಮಾಡಬಹುದು. ಉತ್ಪನ್ನವನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸಿ ಖರೀದಿ ಮಾಡ್ತಾರೆ.
ಬರೀ ಬಟ್ಟೆ ಅಂಗಡಿ ಮಾತ್ರವಲ್ಲ, ಈಸಿಯಾಗಿ ಶುರು ಮಾಡ್ಬಹುದು ಈ ಬ್ಯುಸಿನೆಸ್
ಸೇಲ್ ಇನ್ಸ್ಟಾಗ್ರಾಮ್ ಅಕೌಂಟ್ : ಇದು ಕೂಡ ಇತ್ತೀಚಿಗೆ ಪ್ರಸಿದ್ಧಿ ಪಡೆದಿದೆ. ಜನರು ಇನ್ಸ್ಟಾಗ್ರಾಮ್ ಅಕೌಂಟ್ ಸಿದ್ಧಪಡಿಸಿ ಒಂದಿಷ್ಟು ಫಾಲೋವರ್ಸ್ ಆದ್ಮೇಲೆ ಅದನ್ನು ಮಾರಾಟ ಮಾಡ್ತಾರೆ. ಈ ಮೂಲಕ ಲಕ್ಷಾಂತರ ರೂಪಾಯಿ ಗಳಿಸ್ತಾರೆ.