*ಕ್ಲೇಮ್ ಮಾಡದ ಪಾಲಿಸಿ ಮಾಹಿತಿ ಎಲ್ ಐಸಿ ವೆಬ್ ಸೈಟ್ ನಲ್ಲಿ ಲಭ್ಯ*ಕೆವೈಸಿ,ಅಗತ್ಯ ದಾಖಲೆ ಸಲ್ಲಿಸಿ ಪಾಲಿಸಿ ಕ್ಲೇಮ್ ಮಾಡಬಹುದು*ಕ್ಲೇಮ್ ಮಾಡದ 1000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಿವರ ಲಭ್ಯ

Business Desk:ಭಾರತೀಯ ಜೀವ ವಿಮಾ ನಿಗಮದ (LIC) ಐಪಿಒ (IPO) ಕೆಲವೇ ದಿನಗಳಲ್ಲಿ ನಡೆಯಲಿದೆ. ಎಲ್ಐಸಿ ಪಾಲಿಸಿದಾರರಿಗೆ (Policyholders) ಐಪಿಒನಲ್ಲಿ ಶೇ.5ರಷ್ಟು ಷೇರುಗಳನ್ನು (Shares) ಮೀಸಲಿಡಲಾಗಿದೆ. ಆದ್ರೆ ಎಷ್ಟೋ ಮಂದಿ ಎಲ್ಐಸಿ ಪಾಲಿಸಿ ಮಾಡಿಸಿ ಒಂದಿಷ್ಟು ಪ್ರೀಮಿಯಂ (Premium) ಪಾವತಿಸಿರುತ್ತಾರೆ. ಆದ್ರೆ ಆ ಬಳಿಕ ಪಾವತಿಸೋ ಗೋಜಿಗೆ ಹೋಗಿರೋದಿಲ್ಲ. ನೀವು ಕೂಡ ಹೀಗೆ ಪಾಲಿಸಿ ಪ್ರೀಮಿಯಂ ಪಾವತಿಸದೆ ಡ್ಯೂ (Due) ಇಟ್ಟುಕೊಂಡಿದ್ರೆ ಅಥವಾ ಕ್ಲೇಮ್ (Claim) ಮಾಡದಿದ್ರೆ ನಿಮ್ಮ ಪಾಲಿಸಿ ಮಾಹಿತಿಗಳನ್ನು ಹಂಚಿಕೊಳ್ಳೋ ಮೂಲಕ ಆನ್ ಲೈನ್ ನಲ್ಲಿ ಚೆಕ್ ಮಾಡ್ಬಹುದು. 

ಮೃತ ಕುಟುಂಬ ಸದಸ್ಯನ ಪಾಲಿಸಿ ಕ್ಲೇಮ್, ಮೆಚ್ಯುರಿಟಿ ಕ್ಲೇಮ್ (Maturity claim), ಪ್ರೀಮಿಯಂ ರೀಫಂಡ್ಸ್ ಇವೆಲ್ಲವನ್ನೂ ವೆಬ್ಸೈಟ್ ನಲ್ಲಿ ಪಾಲಿಸಿ ಮಾಹಿತಿ ನಮೂದಿಸೋ ಮೂಲಕ ಚೆಕ್ ಮಾಡೋ ಜೊತೆಗೆ ಕ್ಲೇಮ್ ಕೂಡ ಮಾಡಬಹುದು. ಎಷ್ಟೋ ಸಂದರ್ಭಗಳಲ್ಲಿ ಕುಟುಂಬ ಸದಸ್ಯ ಮರಣ ಹೊಂದಿರುತ್ತಾನೆ. ಆತನ ಹೆಸರಿನಲ್ಲಿರೋ ಎಲ್ ಐಸಿ ಪಾಲಿಸಿ ಬಗ್ಗೆ ಕುಟುಂಬದ ಇತರ ಸದಸ್ಯರಿಗೆ ಮಾಹಿತಿಯಿರೋದಿಲ್ಲ. ಹೀಗಾಗಿ ಆ ಪಾಲಿಸಿ ಕ್ಲೇಮ್ ಆಗಿರೋದಿಲ್ಲ. ಹಾಗೆಯೇ ಕೆಲವರು ಪಾಲಿಸಿ ಮೆಚ್ಯುರಿಟಿಯಾಗಿದ್ರೂ ಕ್ಲೇಮ್ ಮಾಡಿಕೊಂಡಿರೋದಿಲ್ಲ. ಇನ್ನೂ ಕೆಲವರು ಪ್ರೀಮಿಯಂ ಸರಿಯಾಗಿ ಪಾವತಿಸಿಯೇ ಇರೋದಿಲ್ಲ. ಈ ರೀತಿ ಪಾಲಿಸಿದಾರರಿಂದ ಕ್ಲೇಮ್ ಆಗದ ಪಾಲಿಸಿಗಳು ಎಲ್ಐಸಿ ಅನ್ ಕ್ಲೇಮ್ಡ್ ಫಂಡ್ ಗೆ ಹೋಗುತ್ತದೆ. ಕ್ಲೇಮ್ ಮಾಡದ 1000ರೂ. ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ವಿವರವನ್ನು ಎಲ್ಐಸಿ ವೆಬ್ ಸೈಟ್ನಲ್ಲಿ ಪ್ರಕಟಿಸಬೇಕು. ಪಾಲಿಸಿ ಹೊಂದಿರೋರು ವೆಬ್ ಸೈಟ್ ನಲ್ಲಿ ಕ್ಲೇಮ್ ಆಗದ ಪಾಲಿಸಿ ವಿವರಗಳನ್ನು ಪರಿಶೀಲಿಸಿ ಕ್ಲೇಮ್ ಮಾಡಬಹುದು.

LIC Profit:ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ಜೀವ ವಿಮಾ ನಿಗಮದ ಲಾಭ 235 ಕೋಟಿ ರೂ.

ಯಾವೆಲ್ಲ ಮಾಹಿತಿ ಬೇಕು?
ಕ್ಲೇಮ್ ಆಗದ ಪಾಲಿಸಿ ಬಗ್ಗೆ ತಿಳಿಯಲು ಕೆಲವು ಮಾಹಿತಿಗಳು ಅಗತ್ಯ. ಎಲ್ಐಸಿ ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಜನ್ಮದಿನಾಂಕ, ಪ್ಯಾನ್ ಕಾರ್ಡ್ ಮಾಹಿತಿಯನ್ನು ಎಲ್ಐಸಿ ವೆಬ್ ಸೈಟ್ನಲ್ಲಿ ನಮೂದಿಸಬೇಕು.

ಚೆಕ್ ಮಾಡೋದು ಹೇಗೆ?
ಎಲ್ಐಸಿ ಪಾಲಿಸಿದಾರರು ಅಥವಾ ಪ್ರಯೋಜನ ಪಡೆಯಲು ಬಯಸೋ ವ್ಯಕ್ತಿ ಕ್ಲೇಮ್ ಆಗದ ಪಾಲಿಸಿ ಮಾಹಿತಿ ಪಡೆಯಲು ಎಲ್ಐಸಿ ಅಧಿಕೃತ ವೆಬ್ ಸೈಟ್ಗೆ https://licindia.in ಭೇಟಿ ನೀಡಬೇಕು. ಎಲ್ಐಸಿ ವೆಬ್ ಸೈಟ್ನಿಂದ ಮಾಹಿತಿ ಪಡೆಯೋದು ಹೇಗೆ ಎಂಬ ಬಗ್ಗೆ ಹಂತ ಹಂತವಾಗಿ ಈ ಕೆಳಗೆ ವಿವರಿಸಲಾಗಿದೆ.
ಹಂತ 1: ಎಲ್ಐಸಿ ಅಧಿಕೃತ ವೆಬ್ ಸೈಟ್ https://licindia.in/ ಭೇಟಿ ನೀಡಿ. 
ಹಂತ 2: ಆ ಬಳಿಕ ಮುಖಪುಟದಲ್ಲಿ ಕೆಳಭಾಗದಲ್ಲಿರೋ ಎಲ್ಐಸಿ ಅನ್ ಕ್ಲೇಮ್ಡ್ (unclaimed) ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ 3: ಎಲ್ಐಸಿ ಪಾಲಿಸಿ ಸಂಖ್ಯೆ, ಪಾಲಿಸಿದಾರರ ಹೆಸರು, ಜನ್ಮದಿನಾಂಕ ಹಾಗೂ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ. ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ಬಳಿಕ 'Submit'ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಾಲಿಸಿಗೆ ಸಂಬಂಧಿಸಿ ಕ್ಲೇಮ್ ಆಗದ ಹಣವಿದ್ರೆ ಆ ಮಾಹಿತಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಭಾರತೀಯ ಜೀವ ವಿಮಾ ನಿಗಮ ಪ್ರತಿ ಆರು ತಿಂಗಳಿಗೊಮ್ಮೆ ಈ ಮಾಹಿತಿಗಳನ್ನು ನವೀಕರಿಸುತ್ತದೆ.

LIC IPO: ಎಲ್ ಐಸಿ ಪಾಲಿಸಿದಾರರು ಐಪಿಒನಲ್ಲಿ ಪಾಲ್ಗೊಳ್ಳಲು ತಪ್ಪದೇ ಈ ಒಂದು ಕೆಲ್ಸ ಮಾಡ್ಬೇಕು!

ಕ್ಲೇಮ್ ಮಾಡೋದು ಹೇಗೆ?
ಒಂದು ವೇಳೆ ಎಲ್ಐಸಿ ವೆಬ್ ಸೈಟ್ ನಲ್ಲಿ ನಿಮಗೆ ಸಂಬಂಧಿಸಿದ ಯಾವುದೇ ಪಾಲಿಸಿಯ ಕ್ಲೇಮ್ ಆಗದ ಮೊತ್ತ ಕಂಡುಬಂದ್ರೆ ಸಮರ್ಪಕ ಕೆವೈಸಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿ ಹಣವನ್ನು ಪಡೆಯಬಹುದು. ಆದ್ರೆ ನೆನಪಿಡಿ, ವಿಮಾ ಪಾಲಿಸಿಗೆ ಸಂಬಂಧಿಸಿದ ಯಾವುದೇ ಪಾವತಿಗಳಿದ್ರೂ ಅದು ನೇರವಾಗಿ ಪಾಲಿಸಿದಾರನ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ. 

ಕ್ಲೇಮ್ ಆಗದ ಹಣ ಏನಾಗುತ್ತೆ?
ಒಂದು ವೇಳೆ 10 ವರ್ಷಕ್ಕಿಂತ ಹೆಚ್ಚು ಸಮಯ ಯಾವುದೇ ಹಣ ಕ್ಲೇಮ್ ಆಗದೆ ಉಳಿದಿದ್ರೆ ಆ ಮೊತ್ತವನ್ನು ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾವಣೆ ಮಾಡಲಾಗುತ್ತದೆ. ಇಂಥ ನಿಧಿಗಳನ್ನು ನಿಯಮಗಳಿಗನುಸಾರ ಹಿರಿಯ ನಾಗರಿಕರ ಕಲ್ಯಾಣಕ್ಕೆ ಬಳಸಲಾಗುತ್ತದೆ.