Asianet Suvarna News Asianet Suvarna News

ದೀಪಾವಳಿಗೆ ಏನಾದ್ರೂ ಖರೀದಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ನೋ ಕಾಸ್ಟ್ ಇಎಂಐ ಬಗ್ಗೆ ನಿಮ್ಗೆ ತಿಳಿದಿರಲಿ

ಹಬ್ಬ ಅಂದ್ರೆ ಏನಾದ್ರೂ ಖರೀದಿಸುವ ಸಂಭ್ರಮ ಇದ್ದೇಇರುತ್ತೆ.ಅದ್ರಲ್ಲೂ ಬೆಳಕಿನ ಹಬ್ಬ ದೀಪಾವಳಿಗೆ ಮನೆಗೆ ಅಗತ್ಯವಾದ ಸಾಮಗ್ರಿ ಇಲ್ಲವೇ ಕಾರ್, ಬೈಕ್ ಸೇರಿದಂತೆ ಹೊಸ ವಾಹನಗಳನ್ನು ಖರೀದಿಸುವ ಭರಾಟೆ ಜೋರಾಗಿಯೇ ಇರುತ್ತದೆ. ಹೀಗಿರುವಾಗ ವಿವಿಧ ಕಂಪನಿಗಳು ಹಾಗೂ ಆನ್ ಲೈನ್ ವ್ಯಾಪಾರಿಗಳು ಖರೀದಿ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸುತ್ತಿವೆ. ಅದ್ರಲ್ಲಿ ನೋ ಕಾಸ್ಟ್ ಇಎಂಐ ಅಥವಾ ಶೂನ್ಯ ವೆಚ್ಚದ ಇಎಂಐ ಕೂಡ ಸೇರಿದೆ. ಹಾಗಾದ್ರೆ ನೋ ಕಾಸ್ಟ್ ಇಎಂಐ ಅಂದ್ರೆ ಏನು? ಇಲ್ಲಿದೆ ಮಾಹಿತಿ.

No Cost EMI Does It Really Come At Zero Cost
Author
First Published Oct 11, 2022, 3:50 PM IST

ಬೆಂಗಳೂರು (ಅ.11): ದೀಪಾವಳಿ ಹತ್ತಿರ ಬರುತ್ತಿದೆ. ಹೀಗಿರುವಾಗ ಹಬ್ಬದ ಸೀಸನ್  ಲಾಭ ಪಡೆಯಲು ಅನೇಕ ಕಂಪನಿಗಳು ಹಾಗೂ ಆನ್ ಲೈನ್ ವ್ಯಾಪಾರಿಗಳು ಈಗಾಗಲೇ ವಿವಿಧ ವಸ್ತುಗಳ ಖರೀದಿ ಮೇಲೆ ಆಕರ್ಷಕ ಆಫರ್ ಗಳನ್ನು ಘೋಷಿಸಿಸುತ್ತಿದ್ದಾರೆ. ಇದರಲ್ಲಿ ಶೂನ್ಯ ವೆಚ್ಚದ ಅಥವಾ ನೋ ಕಾಸ್ಟ್ ಇಎಂಐ ಯೋಜನೆಗಳು ಕೂಡ ಸೇರಿವೆ. ಅನೇಕರು ಗೃಹೋಪಯೋಗಿ ಸಾಮಗ್ರಿಗಳು, ಹೊಸ ವಾಹನಗಳು, ಬೈಕ್ ಗಳು ಹಾಗೂ ಗಜೆಟ್ ಗಳನ್ನು ಖರೀದಿಸಲು ಹಬ್ಬದ ಸೀಸನ್ ವಿಶೇಷ ಮಾರಾಟದ ತನಕ ಕಾಯುತ್ತಾರೆ. ಏಕೆಂದ್ರೆ ಎಲ್ಲ ಕಂಪನಿಗಳು ಹಾಗೂ ವ್ಯಾಪಾರಿಗಳು ಈ ಸಮಯದಲ್ಲಿ ಆಕರ್ಷಕ ಆಫರ್ ಗಳನ್ನು ನೀಡೋದು ಕಾಮನ್. ಹೀಗಿರುವಾಗ ಈ ನೋ ಕಾಸ್ಟ್ ಇಎಂಐ ಅಂದ್ರೆ ಏನು? ಎಂಬ ಪ್ರಶ್ನೆ ಅನೇಕ ಗ್ರಾಹಕರನ್ನು ಕಾಡಬಹುದು. ಈ ಹಿಂದೆ ಬರೀ ಬ್ಯಾಂಕ್ ಅಥವಾ ಇತರ ಸಾಲಗಳ ಮರುಪಾವತಿಗೆ ಸೀಮಿತವಾಗಿದ್ದ ಇಎಂಐ ಎಂಬ ಕಾನ್ಸೆಪ್ಟ್  ಇಂದು ಮೊಬೈಲ್ ನಿಂದ ಹಿಡಿದು ಇತರ ಯಾವುದೇ ವಸ್ತುಗಳ ಖರೀದಿಗೂ ಕಾಲಿಟ್ಟಿದೆ. ಗೃಹೋಪಯೋಗಿ ಸಾಮಗ್ರಿ, ಮೊಬೈಲ್ ಹೀಗೆ ಯಾವುದೇ ವಸ್ತು ಖರೀದಿಗೆ ನಿಮ್ಮ ಬಳಿ ಹಣವಿಲ್ಲದಿದ್ದಾಗ ನೀವು ಇಎಂಐ ಮೂಲಕ ಅದನ್ನು ಖರೀದಿಸಬಹುದು. ಪ್ರತಿ ತಿಂಗಳು ಇಎಂಐ ಭರಿಸುವ ಮೂಲಕ ಆ ಸಾಮಗ್ರಿಯ ಪೂರ್ಣ ಹಣವನ್ನು ಪಾವತಿಸಬಹುದು. ಆದ್ರೆ ಈ ಇಎಂಐ ಮೇಲೆ ಬಡ್ಡಿ ಪಾವತಿಸಬೇಕು. ಆದ್ರೆ ನೋ ಕಾಸ್ಟ್ ಅಥವಾ ಝೀರೋ ಕಾಸ್ಟ್ ಇಎಂಐ ಮೇಲೆ ಯಾವುದೇ ಬಡ್ಡಿ ಅಥವಾ ಶುಲ್ಕ ವಿಧಿಸೋದಿಲ್ಲ. 

ನೋ ಕಾಸ್ಟ್ ಇಎಂಐ ಗ್ರಾಹಕರಿಗೆ ವಿವಿಧ ಉತ್ಪನ್ನಗಳನ್ನು ಕಂತುಗಳಲ್ಲಿ ಹಣ ಪಾವತಿಸಿ ಯಾವುದೇ ಹೆಚ್ಚುವರಿ ಬಡ್ಡಿ ಅಥವಾ ಶುಲ್ಕಗಳನ್ನು ಪಾವತಿಸದೆ ಖರೀದಿಸಲು ಅವಕಾಶ ಕಲ್ಪಿಸುತ್ತದೆ. ಹೀಗಾಗಿ ಗೃಹೋಪಯೋಗಿ ಸಾಮಗ್ರಿಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಗಜೆಟ್ ಗಳ ಖರೀದಿಗೆ ಅನೇಕರು ನೋ ಕಾಸ್ಟ್ ಇಎಂಐ ಆಯ್ಕೆ ಮಾಡುತ್ತಾರೆ. ಆದ್ರೆ ಈ ಯೋಜನೆಯಡಿ ಯಾವುದೇ ಸಾಮಗ್ರಿಗಳನ್ನು ಖರೀದಿಸುವ ಮುನ್ನ ನಿಮಗೆ ಕೆಲವೊಂದು ವಿಚಾರಗಳು ತಿಳಿದಿರೋದು ಅಗತ್ಯ.

ಹಣ ತಪ್ಪಾಗಿ ಬೇರೆ ಯಾರದ್ದೋ ಖಾತೆಗೆ ವರ್ಗಾವಣೆ ಆಗಿದೆಯಾ? ಡೋಂಟ್ ವರಿ, ಹೀಗೆ ಮಾಡಿ

ನೀವು ನೋ ಕಾಸ್ಟ್ ಇಎಂಐ ಅಡಿ ಸಾಮಗ್ರಿಗಳನ್ನು ಖರೀದಿಸಿದಾಗ ನಿಮಗೆ ಯಾವುದೇ ಹೆಚ್ಚುವರಿ ಬಡ್ಡಿ ಅಥವಾ ಶುಲ್ಕವನ್ನು ವಿಧಿಸೋದಿಲ್ಲ. ಅಂದ್ರೆ ನಿಮ್ಮ ತಿಂಗಳ ಇಎಂಐ ಮೇಲೆ ಯಾವುದೇ ಬಡ್ಡಿಯಿಲ್ಲ. ಅಲ್ಲದೆ, ನೀವು ಆ ಉತ್ಪನ್ನದ ನೈಜ ಬೆಲೆಯನ್ನಷ್ಟೇ ಪಾವತಿಸುತ್ತೀರಿ. ಈ ಬೆಲೆಯನ್ನೇ ವಿಭಾಗಿಸಿ ಇಎಂಐಗಳ ಮೂಲಕ ಪಾವತಿಸುತ್ತೀರಿ. ಆದ್ರೆ ನಿಮಗೆ ಬೆಲೆ ಮೇಲೆ ಯಾವುದೇ ಡಿಸ್ಕೌಂಟ್ ಸೌಲಭ್ಯ ಸಿಗೋದಿಲ್ಲ. 

ಅನೇಕ ಬ್ಯಾಂಕುಗಳು ನೋ ಕಾಸ್ಟ್ ಇಎಂಐ ಸೌಲಭ್ಯಗಳನ್ನು ವಿಭಿನ್ನ ಆಯ್ಕೆಗಳ ಮೂಲಕ ಒದಗಿಸುತ್ತಿವೆ. ಇನ್ನೂ ಕೆಲವು ಬ್ಯಾಂಕ್ ಗಳು ಕೆಲವೊಂದು ಉತ್ಪನ್ನಗಳ ಮೇಲೆ ಝೀರೋ ಡೌನ್ ಪೇಮೆಂಟ್ ಸೌಲಭ್ಯವನ್ನು ಕೂಡ ಕಲ್ಪಿಸಿವೆ. ಹೀಗಾಗಿ ಇಂಥ ಸಂದರ್ಭಗಳಲ್ಲಿ ನೀವು ಯಾವುದೇ ಹಣವನ್ನು ಮುಂಗಡವಾಗಿ ಪಾವತಿಸಬೇಕಾಗಿಲ್ಲ. ನೀವು ಸುಲಭವಾಗಿ ಮಾಸಿಕ ಕಂತುಗಳನ್ನು ಪಾವತಿಸಿದ್ರೆ ಸಾಕು. ಇನ್ನೂ ಕೆಲವು ಬ್ಯಾಂಕ್ ಗಳು ಕನಿಷ್ಠ ಡೌನ್ ಪೇಮೆಂಟ್ ಪಾವತಿಸುವಂತೆ ಹೇಳುತ್ತವೆ. ಉಳಿದ ಹಣವನ್ನು ಇಎಂಐಗಳ ಮೂಲಕ ಪಾವತಿಸಬಹುದು. 

The Worlds Highest ATM: ಆಕಾಶದಿಂದಲೇ ಹಣ ವಿತ್‌ಡ್ರಾ ಮಾಡಿದಂತೆ ಅನಿಸ್ಬಹುದು!

ನೋ ಕಾಸ್ಟ್ ಇಎಂಐ ಸ್ಕೀಮ್ ಅನ್ನು ಅನೇಕರು ಗೃಹೋಪಯೋಗಿ ಸಾಮಗ್ರಿಗಳು ಅಥವಾ ಹೊಸ ಗಜೆಟ್ ಗಳ ಖರೀದಿಗೆ ಬಳಸಿಕೊಳ್ಳುತ್ತಾರೆ. ಆದ್ರೆ ಖರೀದಿ ಮಾಡುವ ಮುನ್ನ ಈ ಯೋಜನೆ ಕುರಿತ ಕೆಲವು ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಟರ್ಮ್ಸ್ ಹಾಗೂ ಕಂಡೀಷನ್ಸ್ ಓದಿದ ಬಳಿಕವೇ ನೋ ಕಾಸ್ಟ್ ಇಎಂಐಯಲ್ಲಿ ವಸ್ತುಗಳನ್ನು ಖರೀದಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸಿ. 

Follow Us:
Download App:
  • android
  • ios