2024ರಲ್ಲಿ ಜನ ಟ್ವಿಚ್‌ನಲ್ಲಿ ವ್ಯಯಿಸಿದ ಸಮಯ ಇಷ್ಟೊಂದಾ?

ಟ್ವಿಚ್‌ನಲ್ಲಿ 2024ರಲ್ಲಿ ಜನರು ಒಟ್ಟು 20.35 ಬಿಲಿಯನ್ ಗಂಟೆಗಳನ್ನು ಕಳೆದಿದ್ದಾರೆ, ಇದು 2 ಮಿಲಿಯನ್ ವರ್ಷಗಳಿಗೆ ಸಮ.

How Many Hours Did People Spend on Twitch live streaming in 2024

ಸಾಮಾನ್ಯವಾಗಿ ಬಹುತೇಕರು ಸಮಯ ಸಿಕ್ಕಾಗಲೆಲ್ಲಾ ಮೊಬೈಲ್‌ ಕೈಯಲ್ಲಿಡಿದು ಏನಾದರೊಂದು ನೋಡುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳು ಜನರಿಗೆ ಭರಾಪೂರ ಮನೋರಂಜನೆ ನೀಡುತ್ತಿರುವುದರಿಂದ ಸಮಯ ಹೇಗೆ ಕಳೆಯುವುದು ಎಂಬ ಚಿಂತೆ ಈಗ ಯಾರನ್ನೂ ಕೂಡ ಕಾಡುತ್ತಿಲ್ಲ, ಜನರ ಈ ಸಾಮಾಜಿಕ ಜಾಲತಾಣಗಳ ಕ್ರೇಜ್‌ನಿಂದ ಅನೇಕ ಸೋಶಿಯಲ್ ಮೀಡಿಯಾ ಸ್ಟಾರ್‌ಗಳು ಲಕ್ಷ ಕೋಟ್ಯಾಧಿಪತಿಗಳಾಗುತ್ತಿದ್ದಾರೆ. ಹೀಗಿರುವಾಗ ಲೈವ್‌ ಸ್ಟ್ರೀಮಿಂಗ್‌ ಹಾಗೂ ವೀಡಿಯೋ ಗೇಮ್‌ಗೆ  ಫೇಮಸ್ ಆಗಿರುವ ಸೋಶಿಯಲ್ ಮೀಡಿಯಾ ಸೈಟ್ ಟ್ವಿಚ್‌ನಲ್ಲಿ ಕಳೆದ 2024ರ ವರ್ಷದಲ್ಲಿ ಜನ ಎಷ್ಟು ಸಮಯವನ್ನು ಕಳೆದಿದ್ದಾರೆ ಎಂದು ತಿಳಿದರೆ ಅಚ್ಚರಿಯ ಜೊತೆ ಶಾಕ್‌ಗೊಳಗಾಗುವುದು ಮಾತ್ರ ಖಚಿತ. ಏಕೆಂದರೆ ಅಷ್ಟೊಂದು ಸಮಯವನ್ನು ಬಳಕೆದಾರರು ಅಲ್ಲಿ ಕಳೆದಿದ್ದಾರೆ. 

ಅಮೇಜಾನ್‌ ಮಾಲೀಕತ್ವದ ಸೋಶಿಯಲ್ ಮೀಡಿಯಾ ಸೈಟ್ ಆಗಿರುವ ಟ್ವಿಚ್‌ ವೀಕ್ಷಕರಿಗೆ ಹಲವರು ಮನೋರಂಜನೆಗಳನ್ನು ತನ್ನ ಸೈಟ್‌ನಲ್ಲಿ ನೀಡುತ್ತದೆ. ವೀಡಿಯೋ ಗೇಮ್, ಕುಕ್ಕಿಂಗ್, ಟ್ರಾವೆಲ್, ಕಲೆ , ಕ್ರೀಡೆ, ಮ್ಯೂಸಿಕ್ ಸೇರಿದಂತೆ ಹಲವು ಮನೋರಂಜನೆಗಳನ್ನು ನೀಡುವುದರಿಂದ ಸಹಜವಾಗಿಯೇ ಜನ ಇದರಲ್ಲಿ ತಮ್ಮ ಸಮಯವನ್ನು ವ್ಯಯ ಮಾಡಿದ್ದಾರೆ. 2024ರ ವರ್ಷದಲ್ಲಿ ಈ ಸೈಟ್‌ನಲ್ಲಿ ಜನ ಕಳೆದ ಸಮಯವನ್ನು ಒಟ್ಟುಗೂಡಿಸಿದರೆ ಬರೋಬ್ಬರಿ20.35 ಬಿಲಿಯನ್‌ ಗಂಟೆಗಳಾಗಿದ್ದು, ಇದು 2 ಮಿಲಿಯನ್ ವರ್ಷಗಳ ಅವಧಿಗೆ ಸಮವಾಗಿದೆ. ಸ್ವತಃ ಟ್ವಿಚ್‌ ಈ ಮಾಹಿತಿ ನೀಡಿದೆ. ಈ ವಿಚಾರ ತಿಳಿದ ಜನ ಶಾಕ್ ಆಗಿದ್ದು, ಬಹುಶಃ ಪ್ರಪಂಚದಲ್ಲಿ ನಿರುದ್ಯೋಗ ಸಮಸ್ಯೆ ತುಂಬಾ ಹೆಚ್ಚಾಗಿರಬೇಕು ಎಂದು ವಿಡಂಬನೆ ಮಾಡಿದ್ದಾರೆ.

ಭಾರತದಲ್ಲೂ ಇತ್ತೀಚೆಗೆ ಈ ಟ್ವಿಚ್ ಫೇಮಸ್ ಆಗುತ್ತಿದೆ. ವೀಡಿಯೋ ಗೇಮಿಂಗ್‌ ಪ್ರಿಯರು ಬಹುತೇಕರು ಈ ಟ್ವಿಚ್ ಅನ್ನು ಬಹುವಾಗಿ ಇಷ್ಟಪಡುತ್ತಿದ್ದಾರೆ. ಗೇಮಿಂಗ್ ವಿಚಾರಕ್ಕೆ ಸಂಬಂಧಿಸಿದ ಲೇಖಕರು ಆಗಿರುವ ನಾಥನ್ ಗ್ರೇಸನ್ ಅವರು ಈ ಟ್ವಿಚ್‌ ಯಾಕೆ ಜನರನ್ನು ಇಷ್ಟೊಂದು ಸೆಳೆಯುತ್ತಿದೆ ಎಂಬುದನ್ನು ವಿವರಿಸಿದ್ದಾರೆ.  ಮಂಚದ ಮೇಲೆ ಕುಳಿತು ಸ್ನೇಹಿತ ವಿಡಿಯೋ ಗೇಮ್ ಆಡುವುದನ್ನು ನೋಡುವುದಕ್ಕೆ ಇದನ್ನು ನಾಥನ್ ಗ್ರೇಸನ್‌ ಹೋಲಿಸಿದ್ದು,. ನೀವು ಆಡುತ್ತಿಲ್ಲ, ಆದರೆ ನೀವು ಅನುಭವವನ್ನು ಹಂಚಿಕೊಳ್ಳುತ್ತಿದ್ದೀರಿ ಎಂದಿದ್ದಾರೆ. ಇದೊಂದು ಸಾಮಾಜಿಕ ಅನುಭವ, ನೀವು ಏನು ಮಾಡುತ್ತೀರೋ ಅದಕ್ಕೆ ತುಂಬಾ ಬಣ್ಣವನ್ನು ನೀಡುತ್ತದೆ. ವರ್ಷಗಳು ಕಳೆದಂತೆ ನಿಮಗೆ ಆ ಗೇಮ್‌ನ ಬಗ್ಗೆ ನೆನಪಿರುವುದಿಲ್ಲ, ಆದರೆ ನಿಮ್ಮ ಸ್ನೇಹಿತರ ಜೊತೆ ಕಳೆದ ಸಮಯದ ಬಗ್ಗೆ ನೆನಪಿರುವುದು ಎಂದು ನಾಥನ್ ವಿವರಿಸಿದ್ದಾರೆ. 

ಟ್ವಿಚ್, ಇದರಲ್ಲಿರು ಚಾಟ್ ಅನ್ನು ಅನುಭವದ ಅಗತ್ಯ ಭಾಗ ಎಂದು ತಿಳಿಸಿದೆ. ಈ ಸಂವಾದಾತ್ಮಕ ವೈಶಿಷ್ಟ್ಯವು ಸ್ಟ್ರೀಮರ್ ಮತ್ತು ಇತರ ವೀಕ್ಷಕರು ನೋಡಬಹುದಾದ ಸರಿಯಾದ ಸಮಯದ ಸಂದೇಶಗಳನ್ನು ಕಳುಹಿಸಲು ವೀಕ್ಷಕರಿಗೆ ಅನುಮತಿಸುತ್ತದೆ. ಆದರೂ ಟ್ವಿಚ್ ವೀಡಿಯೋ ಗೇಮ್‌ ಸ್ಟೀಮಿಂಗ್ ಕಾರಣಕ್ಕೆ ಫೇಮಸ್ ಆಗಿದ್ದು,  ಅದರಲ್ಲಿರುವ ಗ್ರ್ಯಾಂಡ್ ಥೆಫ್ಟ್ ಆಟೋ ವಿ 2024ರಲ್ಲಿ ಜಗತ್ತಿನಾದ್ಯಂತ ತುಂಬಾ ಜನ ವೀಕ್ಷಿಸಿದ ಕೆಟಗರಿಯಾಗಿದೆ. ಹಾಗೆಯೇ ಉತ್ತರ ಅಮೆರಿಕಾದಲ್ಲಿ  ಜನ ಹೆಚ್ಚು ವೀಕ್ಷಿಸಿದ ಕೆಟಗರಿ ಕೇವಲ 'ಜಸ್ಟ್ ಚಾಟಿಂಗ್' ಆಗಿದೆ. ಅದೇನೆ ಇರಲಿ ಜನ ಇಷ್ಟೊಂದು ಸಮಯವನ್ನು ಈ ತಾಣದಲ್ಲಿ ವ್ಯಯಿಸಿದ್ದಾರೆ ಎಂದರೆ ನಿಜಕ್ಕೂ ವಿಚಿತ್ರ ಎನಿಸುವುದು ಈ ಬಗ್ಗೆ ನಿಮ್ಮೆ ಅಭಿಪ್ರಾಯವೇನು?

Latest Videos
Follow Us:
Download App:
  • android
  • ios