Asianet Suvarna News Asianet Suvarna News

ಬಾಡಿಗೆ, ಸ್ಲಂನಲ್ಲಿರುವವರ ಮನೆ ಕನಸು ನನಸಾಗಿಸಲು ಹೊಸ ಯೋಜನೆ,ನಿರ್ಮಲಾ ಸೀತಾರಾಮ್ ಘೋಷಣೆ!

ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ಫ್ರಿ ಘೋಷಣೆಗಳಿಲ್ಲ. ಆದರೆ ಮಧ್ಯಮವರ್ಗದ ಜನರ ಮನೆ ಕನಸು ನನಸು ಮಾಡಲು ಹೊಸ ಯೋಜನೆ ಘೋಷಿಸಿದ್ದಾರೆ. ಬಾಡಿಗೆ ಮನೆ, ಸ್ಲಂ, ಅನಧಿಕೃತ ಕಾಲೋನಿಗಳಲ್ಲಿರುವ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಯೋಜನೆ ಬಂಪರ್ ಕೊಡುಗೆಯಾಗಿದೆ.
 

Housing for Middle class scheme to launch for affordable home to buy or built says FM nirmala sitharaman ckm
Author
First Published Feb 1, 2024, 1:09 PM IST

ನವದೆಹಲಿ(ಫೆ.01) ಕೇಂದ್ರ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಈ ಬಜೆಟ್‌ನಲ್ಲಿ ಫ್ರೀ, ಜನಪ್ರಿಯ ಘೋಷಣೆಗಳಿಲ್ಲ. ಮಧ್ಯಂತರ ಬಜೆಟ್ ಕಾರಣ ಚೊಕ್ಕವಾಗಿ ವರ್ಷದ ಆಯವ್ಯಯ ಮಂಡಿಸಿದ್ದಾರೆ. ಆದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಬಹುದಿನಗಳ ಕನಸು ನನಸಾಗಿಸಲು ಈ ಬಜೆಟ್ ಪುಷ್ಠಿ ನೀಡಿದೆ. ಪ್ರಮುಖವಾಗಿ ಬಾಡಿಗೆ ಮನೆ, ಸ್ಲಂ, ಅನಧಿಕೃತ ಕಾಲೋನಿಗಳಲ್ಲಿ ವಾಸವಿರುವ ಮಧ್ಯಮ ವರ್ಗದ ಕುಟುಂಬಗಳ ಮನೆ ಖರೀದಿ ಅಥವಾ ಮನೆ ಕಟ್ಟಲು ಹೊಸ ಯೋಜನೆ ಘೋಷಿಸಲಾಗುತ್ತದೆ ಎಂದು ನಿರ್ಮಾ ಸೀತಾರಾಮನ್ ಹೇಳಿದ್ದಾರೆ. 

ಮಧ್ಯಮ ವರ್ಗದ ಕುಟುಂಬಗಳಿಗೆ ಹೌಸಿಂಗ್ ಸ್ಕೀಮ್ ಯೋಜನೆಯಡಿ ಮನೆ ಕಟ್ಟುವ ಅಥವಾ ಖರೀದಿಸಲು ಕೇಂದ್ರ ಸರ್ಕಾರ ನೆರವು ನೀಡಲಿದೆ. ಕೈಗೆಟುಕುವ ದರದಲ್ಲಿ ಮನೆ ಖರೀದಿ ಅಥವಾ ಮನೆ ಕಟ್ಟಲು ಈ ಬಾರಿಯ ಬಜೆಟ್‌ನಲ್ಲಿ ಕೆಲ ಅನುಕೂಲತೆಗಳನ್ನು ಮಾಡಲಾಗಿದೆ. ಪ್ರಧಾನಿ ಮಂತ್ರಿ ಅವಾಸ್ ಯೋಜನೆ ಗ್ರಾಮೀಣ ಹಾಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆ ನಗರ ಯೋಜನೆಗಳ ಮೂಲಕ ಈ ಮನೆ ಕನಸು ನನಸಾಗಿಸಲು ಯೋಜನೆ ರೂಪಿಸಲಾಗಿದೆ.

ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ

ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ ಯೋಜನೆಯಡಿ ಈಗಾಗಲೇ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮುಂದಿನ 5 ವರ್ಷದಲ್ಲಿ 2 ಕೋಟಿ ಮನೆ ನಿರ್ಮಾಣವಾಗಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ ಹಣಕಾಸನ್ನು ಶೇಕಡಾ 66ರಿಂದ 79,000 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.

79,000 ಕೋಟಿ ರೂಪಾಯಿ ಮೊತ್ತದ ಪೈಕಿ 25,103 ಕೋಟಿ ರೂಪಾಯಿ ಹಣವನ್ನು ಪ್ರಧಾನಮಂತ್ರಿ ಅವಾಸ್ ನಗರ ಯೋಜನೆಗೆ ಮೀಸಲಿಡಲಾಗಿದೆ. ಇನ್ನುಳಿದ ಹಣವನ್ನು ಪ್ರಧಾನ ಮಂತ್ರಿ ಗ್ರಾಮೀಣ ಯೋಜನೆಗೆ ಮೀಸಲಿಡಲಾಗಿದೆ. ಸದ್ಯ ಮಂಡಿಸಿರುವುದು ಮಧ್ಯಂತರ ಬಜೆಟ್‌ಗೆ ಪೂರಕವಾಗಿ ಹೊಸ ಸರ್ಕಾರ ರಚಿಸಿ ಬಜೆಟ್ ಮಂಡಿಸಲಾಗುತ್ತದೆ ಎಂದು ನಿರ್ಮಾಲ ಸೀತಾರಾಮನ್ ಹೇಳಿದ್ದಾರೆ. ಈ ಮೂಲಕ ಮೂರನೆ ಬಾರಿ ಪ್ರಧಾನಿ ಮೋದಿ ಸರ್ಕಾರ ರಚನೆ ಭರವಸೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಳೆದ 10 ವರ್ಷದಲ್ಲಿ ಅವಾಸ್ ಯೋಜನೆಯಲ್ಲಿ ಆಗಿರು ತ್ವರಿತ ಬೆಳವಣಿಗೆ ವೇಗವನ್ನು ಹೆಚ್ಚಿಸಲು ಇದೀಗ ಮಧ್ಯಮಂತ್ರ ಬಜೆಟ್‌ನಲ್ಲಿ ಹಣಕಾಸು ಏರಿಕೆ ಸೇರಿದಂತೆ ಕೆಲ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.

50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?

Follow Us:
Download App:
  • android
  • ios