05:06 PM (IST) Feb 01

ಕರ್ನಾಟಕ ರೈಲ್ವೆ ಅಭಿವೃದ್ಧಿಗೆ 7524 ಕೋಟಿ!

ಕರ್ನಾಟಕದಲ್ಲಿ ರೈಲ್ವೆ ಯೋಜನೆಗಳಿಗಾಗಿ 7524 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 2009 ರಿಂದ 2014ರ ಬಜೆಟ್‌ಗೆ ಹೋಲಿಸಿದರೆ, ಈ ಬಾರಿಯ ಬಜೆಟ್‌ನಲ್ಲಿ 805 ಕೋಟಿ ರೂಪಾಯಿ ಏರಿಕೆಯಾಗಿದೆ.

05:01 PM (IST) Feb 01

ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸಲು ಮುಂದಾದ ಕೇಂದ್ರ ಸರ್ಕಾರ!

2014ಕ್ಕೂ ಮುನ್ನ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ದೇಶದ ಆರ್ಥಿಕತೆಯನ್ನು ಯಾವ ರೀತಿ ದುರಪಯೋಗಪಡಿಸಿಕೊಂಡಿತ್ತು ಎನ್ನುವುದನ್ನು ತಿಳಿಸುವ ನಿಟ್ಟಿನಲ್ಲಿ ಶ್ವೇತ ಪತ್ರ ಹೊರಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಶ್ವೇತ ಪತ್ರ ಹೊರಡಿಸಲಿದೆ ಕೇಂದ್ರ!

04:06 PM (IST) Feb 01

ಬಜೆಟ್ ಮಂಡನೆ ವೇಳೆ ಚೆಸ್ ತಾರೆ ಆರ್ ಪ್ರಜ್ಞಾನಂದನ್‌ ನೆನಪಿಸಿಕೊಂಡಿದ್ದೇಕೆ

ಭಾರತದ ನಂ.1 ಚೆಸ್ ಪಟು ಎನಿಸಿಕೊಂಡಿರುವ ಆರ್ ಪ್ರಜ್ಞಾನಂದ ಕಳೆದ ವರ್ಷ ವಿಶ್ವ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದರು.

ಇಲ್ಲಿದೆ ಲಿಂಕ್ಸ್

02:42 PM (IST) Feb 01

ರಕ್ಷಣಾ ಕ್ಷೇತ್ರಕ್ಕೆ ಸಿಂಹಪಾಲು, 6.25 ಲಕ್ಷ ಕೋಟಿ ರೂಪಾಯಿ ಹಂಚಿಕೆ!

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅತೀ ಹೆಚ್ಚಿನ ಮೊತ್ತ ಹಂಚಿಕೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇಕಡಾ 1.5 ರಷ್ಟು ಹೆಚ್ಚಳ ಮಾಡಲಾಗಿದೆ. ಬರೋಬ್ಬರಿ 6.25 ಲಕ್ಷ ಕೋಟಿ ರೂಪಾಯಿ ಹಣದಲ್ಲಿ ಗಡಿಯಲ್ಲಿ ಫೆನ್ಸಿಂಗ್, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ರಕ್ಷಣಾ ಕ್ಷೇತ್ರಕ್ಕೆ ಬಜೆಟ್ ಕೊಡುಗೆ ಏನು?

ಇಲ್ಲಿದೆ ಲಿಂಕ್

02:09 PM (IST) Feb 01

ಯಾವ ಸಚಿವಾಲಯಕ್ಕೆ ಎಷ್ಟು ಅನುದಾನ?

ಇದು ಮಧ್ಯಂತರ ಬಜೆಟ್ ಆಗಿದ್ದು, ನಿರ್ಮಲಾ ಸೀತರಾಮನ್ ತಮ್ಮ ಭಾಷಣದಲ್ಲಿ ಜುಲೈನಲ್ಲಿ ಮತ್ತೆ ಬಜೆಟ್ ಮಂಡಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈಗ ಯಾವ ಸಚಿವಾಲಯಕ್ಕೆಷ್ಟು ಅನುದಾನ ಸಿಕ್ಕಿದೆ? 

02:04 PM (IST) Feb 01

ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ!

ನಿರ್ಮಾಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿ ಮಾತನಾಡಿದ್ದಾರೆ. ಇದೇ ವೇಳೆ ಸಮಾಜ ಪ್ರತಿಯೊಬ್ಬರಿಗೂ ಅನಕೂಲ ಮಾಡಿಕೊಡುವ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್‌ಗೆ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:47 PM (IST) Feb 01

ಮಹಿಳಾ ಸಬಲೀಕರಣಕ್ಕೆ ನಿರ್ಮಲಾ ಒತ್ತು, ನಾರಿಗೆ ಶಕ್ತಿ ತುಂಬಲು ಕಸರತ್ತು

ಕೇಂದ್ರ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ್ದು, ಮಹಿಳೆಯರಿಗೆ ಸಂಬಂಧಿಸಿ ಯಾವುದೇ ಹೊಸ ಯೋಜನೆ ಘೋಷಣೆಯಾಗಿಲ್ಲ. ಅದರೆ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:27 PM (IST) Feb 01

ಪಿಎಂ ಗತಿ ಶಕ್ತಿಗೆ ಇನ್ನಷ್ಟು ಪವರ್‌

ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ 2.55 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರೊಂದಿಗೆ ಮೂರು ಪ್ರಮುಖ ರೈಲ್ವೆ ಕಾರಿಡಾರ್‌ ಯೋಜನೆಗಳನ್ನು ಪ್ರಕಟ ಮಾಡಿದೆ.

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

01:11 PM (IST) Feb 01

ಲಕ್ಷದ್ವೀಪಕ್ಕೆ ಸರ್ಕಾರದ ಹೂಡಿಕೆ!

ಲಕ್ಷದ್ವೀಪವನ್ನು ಆಕರ್ಷಕ ಹಾಗೂ ಭಾರತೀಯ ಪ್ರವಾಸಿಗರ ತಾಣವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮಾಲ್ಡೀವ್ಸ್‌ ಜೊತೆಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲಿಯೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಘೋಷಣೆ ಮಾಡಿದೆ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:52 PM (IST) Feb 01

ಆದಾಯ ತೆರಿಗೆ ವಿಚಾರದಲ್ಲಿಲ್ಲ ಯಾವುದೇ ರಿಲೀಫ್‌!

ಪಂಚರಾಜ್ಯ ಚುನಾವಣೆ, ರಾಮ ಮಂದಿರ ಉದ್ಘಾಟನೆ ಬಳಿಕ ಮುಂಬರುವ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿರುವ ಮೋದಿ ಸರ್ಕಾರ, ಮಧ್ಯಂತರ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಆದಾಯ ತೆರಿಗೆ ವಿಚಾರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಿಲ್ಲ.

ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

12:40 PM (IST) Feb 01

50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?

ಕೇಂದ್ರ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಜನಪ್ರಿಯ ಯೋಜನೆಗಳಿಲ್ಲದಿದ್ದರೂ ರಾಜ್ಯಗಳಿಗೆ ನೀಡಿರುವ ಕೆಲ ಕೊಡುಗೆಗಳನ್ನು ಮುಂದುವರಿಸಲಾಗಿದೆ. ಫಸ್ಟ್ ಡೆವಲಪ್‌ಮೆಂಟ್ ಇಂಡಿಯಾ ಅಡಿಯಲ್ಲಿ 50 ವರ್ಷ ಬಡ್ಡಿ ರಹಿತ ಸಾಲ ಯೋಜನೆಯನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರಿಂದ ರಾಜ್ಯಕ್ಕೀರುವ ಲಾಭವೇನು?

ಸುದ್ದಿಗೆ ಇಲ್ಲಿ ಕ್ಲಿಕ್ಕಿಸಿ

12:38 PM (IST) Feb 01

ಜಗತ್ತಿನ ಆರ್ಥಿಕ ಶಕ್ತಿಯಾಗಲು ಪೂರಕ ಬಜೆಟ್: ಆರ್ ಆಶೋಕ್

ಬಡವರ ಪರವಾದ, ಅಭಿವೃದ್ಧಿಗೆ ಪೂರಕವಾದ, ತಂತ್ರಜ್ಞಾನ ಬಳಕೆಗೆ ಅನುಕೂಲಕರವಾದ, ಭಾರತದ ಏಳ್ಗೆಯ ಪರವಾದ ಬಜೇಟ್. ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ವೇದಿಕೆ ನಿರ್ಮಿಸಿದೆ ಈ ಬಜೆಟ್ 

- ಆರ್. ಅಶೋಕ್, ವಿಪಕ್ಷ ನಾಯಕ

12:33 PM (IST) Feb 01

ನಗರಗಳ ಸಾರಿಗೆ ವ್ಯವಸ್ಥೆ ಸುಧಾರಿಸಲು ಹೆಚ್ಚಿನ ಒತ್ತು

ಜನಸಂದಣೆ ಹೆಚ್ಚಾಗಿರುವ ನಗರಗಳಲ್ಲಿ ಸಾರಿಗೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲ್ಲಿದ್ದು, ಮೆಟ್ರೋ ರೈಲ್ವೆ ಮಾರ್ಗ ವಿಸ್ತರಣೆ ಮಾಡುವುದಾಗಿ ವಿತ್ತ ಸಚಿವರು ಘೋಷಿಸಿದ್ದಾರೆ. ಅಲ್ಲದೇ ವಂದೇ ಭಾರತ್ ಬೋಗಿಗಳಂತೆ ರೈಲ್ವೆ ಭೋಗಿಗಳ ಅಭಿವೃದ್ಧಿಗೆ ಗಮನ ಹರಿಸುವ ಭರವಸೆ ನೀಡಿದ್ದಾರೆ. 

12:29 PM (IST) Feb 01

ಸೀ ಫುಡ್ ರಫ್ತು ಡಬಲ್, ಮೀನುಗಾರಿಕೆಗೆ ಮಹತ್ವ

ಮತ್ಸ್ಯಸಂಪದ: ಸಾಗರೋತ್ಪನ್ನಗಳ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದ್ದು, ಸೀ ಫುಡ್‌ ಅಭಿವೃದ್ಧಿಗೆ ಒತ್ತು ನೀಡುವುದಾಗಿ ನಿರ್ಮಲಾ ಘೋಷಿಸಿದ್ದಾರೆ. 2014ರ ನಂತರ ಸೀ ಫುಡ್​​ ರಫ್ತು ಡಬಲ್​ ಆಗಿದ್ದು, ಮೀನುಗಾರಿಕೆಯಲ್ಲಿ 55 ಲಕ್ಷ ಹೊಸ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದಾರೆ. 

12:27 PM (IST) Feb 01

ಸರ್ವೈಕಲ್ ಕ್ಯಾನ್ಸರ್ ತಡೆಗೆ ಮದ್ದು

ಯು ವಿನ್​​ ಪ್ಲಾಟ್​ಫಾರ್ಮ್​​ ಮೂಲಕ ತಾಯಂದಿರಿಗೆ, ನವಜಾತ ಶಿಶುಗಳಿಗೆ ಆರೈಕೆ.
ಆರೋಗ್ಯ ಸೇವೆ ಹೊಸ ಆಸ್ಪತ್ರೆ, ಹೊಸ ವಿಭಾಗಗಳ ಸೃಷ್ಠಿ. 
ಹೆಣ್ಣುಮಕ್ಕಳಿಗೆ ಸರ್ವೈಕಲ್​​ ಕ್ಯಾನ್ಸರ್​​ ತಡೆಯಲು ವ್ಯಾಕ್ಸಿನೇಷನ್.​ 
9ರಿಂದ 14 ವರ್ಷದ ಬಾಲಕಿಯರಿಗೆ ಲಸಿಕೆ ನೀಡಿ, ಮಾರಾಣಾಂತಿಕ ಕ್ಯಾನ್ಸರ್‌ನಿಂದ ಮಕ್ಕಳು ಮುಕ್ತರಾಗುವಂತೆ ಕ್ರಮ ಕೈಗೊಳ್ಳಲಾಗುವುದು. 

12:24 PM (IST) Feb 01

ನಿರೀಕ್ಷೆಯಂತೆ ಪ್ರವಾಸೋದ್ಯಮಕ್ಕೆ ಒತ್ತು

ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಫೋಟೋಸ್ ಶೇರ್ ಮಾಡಿಕೊಂಡ ಬೆನ್ನಲ್ಲೇ, ಪಕ್ಕದ ಮಾಲ್ಡೀವ್ಸ್ ತಲ್ಲಣಗೊಂಡಿದೆ. ಒಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಮಟ್ಟಿಗೆ ಮೋದಿ ಪರೋಕ್ಷ ಕರೆ ಭಾರತೀಯರ ಮೇಲೆ ಪ್ರಭಾವ ಬೀರಿದ್ದು, ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿ ಭಾರತದ ದ್ವೀಪಗಳಿಗೆ ಭೇಟಿ ನೀಡಲು ಮುಂದಾದರು. ನಿರೀಕ್ಷೆಯಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುವಾಗುವಂತೆ ಕೆಲವು ಘೋಷಣೆಗಳು ಬಜೆಟ್‌ನಲ್ಲಿವೆ. 

12:21 PM (IST) Feb 01

2027ಕ್ಕೆ ವಿಕಸಿತ ಭಾರತಕ್ಕೆ ಬಜೆಟ್ ಒತ್ತು

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಘೋಷಣೆಯೊಂದಿಗೆ ಈ ಸಾರಿ ಜೈ ಅನುಸಂಧಾನ್ ಎಂಬ ಹೊಸ ಘೋಷ ವಾಕ್ಯ ಸೇರಿಕೊಂಡಿದ್ದು, ತಂತ್ರಜ್ಞಾನ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆಗೆ ಒತ್ತು ನೀಡಲು ಮೋದಿ ಸರಕಾರ ಕಟಿಬ್ಧವಾಗಿದೆ ಎಂಬುದನ್ನು ನಿರ್ಮಲಾ ಸ್ಪಷ್ಟಪಡಿಸಿದ್ದಾರೆ. 

12:03 PM (IST) Feb 01

ನಾರಿಶಕ್ತಿ, ಯುವಕರ ಸಬಲೀಕರಣಕ್ಕೆ ಒತ್ತು

ಸ್ಟಾರ್ಟ್‌ ಅಪ್ ಅಪ್ ನೆರವು ಸೇರಿ ತಂತ್ರಜ್ಞಾನ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಹೇಳಿರುವ ವಿತ್ತ ಸಚಿವರು ತೆರಿಗೆ ಪದ್ಧತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂಬುದನ್ನು ಸ್ಫಷ್ಟಪಡಿಸಿದ್ದಾರೆ. ಮತದಾರರ ಓಲೈಕೆ ಮಾಡಿಕೊಳ್ಳುವಂಥ ಯಾವ ಯೋಜನೆಗಳನ್ನೂ ಘೋಷಿಸದ ನಿರ್ಮಲಾ, ಜುಲೈನಲ್ಲಿ ಪ್ರಸ್ತುತ ಪಡಿಸುವ ಬಜೆಟ್‌ನಲ್ಲಿ ವಿಕಸಿತ ಭಾರತದ ನೀಲಿ ನಕ್ಷೆಯನ್ನು ಪ್ರಸ್ತುತ ಪಡಿಸುವುದಾಗಿ ಹೇಳುವ ಮೂಲಕ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರಕಾರವೇ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. 

12:01 PM (IST) Feb 01

ಭರ್ಜರಿ ಘೋಷಣೆಗಳಿಲ್ಲ

ಚುನಾವಣಾ ವರ್ಷದ ಬಜೆಟ್ ಆಗಿದ್ದರಿಂದ ಇದು ಜನಪ್ರಿಯ ಬಜೆಟ್ ಆಗಲಿದೆ. ಹೊಸ ಯೋಜನೆ ಅತವಾ ಆಕರ್ಷಕ ಯೋಜನೆಗಳನ್ನು ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಮೊದಲೇ ಹೇಳಿದಂತೆ ನಿರ್ಮಲಾ ಸೀತರಾಮನ್ ಭರ್ಜರಿ ಘೋಷಣೆಗಳಿಲ್ಲದೇ ಬಜೆಟ್ ಮಂಡಿಸಿದ್ದಾರೆ. ಮತ್ತದೇ ಮೋದಿ ಸಬ್ ಕಾ ಸಾಥ್, ಸಬಾ ಕಾ ವಿಕಾಸ್ ಧ್ಯೇಯ ವಾಕ್ಯದೊಂದಿಗೆ ಮುನ್ನಡಿ ಇಡುವ ಭರವಸೆ ನೀಡಿದ್ದಾರೆ. 

11:59 AM (IST) Feb 01

ಬಜೆಟ್ ಮಂಡನೆ ಮುಗಿಸಿದ ನಿರ್ಮಲಾ ಸೀತರಾಮನ್

ಚುನಾವಣೆ ವರ್ಷದಲ್ಲಿಯೂ ಯಾವುದೇ ಗ್ಯಾರಂಟಿ ಯೋಜನೆಗಳನ್ನೂ ಘೋಷಿಸಿಲ್ಲ ವಿತ್ತ ಸಚಿವೆ. ಅಲ್ಲದೇ ಯಾವ ಫ್ರೀ ಘೋಷಣೆಯೂ ಇಲ್ಲದ ನಿರೀಕ್ಷೆಗೆ ವಿರುದ್ಧವಾಗಿ ಇದು ಚುನಾವಣಾ ಜನಪ್ರಿಯ ಬಜೆಟ್ ಆಗದಂತೆ ನೋಡಿಕೊಂಡಿದ್ದಾರೆ.