Asianet Suvarna News Asianet Suvarna News

ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ

ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ರುಪೇ ಪ್ಲ್ಯಾಟ್ ಫಾರ್ಮ್ ನಲ್ಲಿ ಕ್ರೆಡಿಟ್ ಕಾರ್ಡ್ಸ್ ಬಳಸಿಕೊಂಡು ಯುಪಿಐ ವಹಿವಾಟುಗಳನ್ನು ನಡೆಸಬಹುದು. ಹಾಗಾದ್ರೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪ್ಲಾಟ್ ಫಾರ್ಮ್ ಗೆ ಲಿಂಕ್ ಮಾಡೋದು ಹೇಗೆ?
 

Here is how to link your SBI RuPay credit card to UPI in 5 simple steps anu
Author
First Published Aug 27, 2023, 4:37 PM IST

Business Desk:ಇಂದು ಯಾವುದೇ ಪಾವತಿಗೆ ನಗದು ಬಳಸೋರ ಸಂಖ್ಯೆ ತಗ್ಗಿದೆ. ಹಾಗೆಯೇ ಮೊಬೈಲ್ ಪಾವತಿ ತಂತ್ರಜ್ಞಾನಗಳನ್ನು ನೆಚ್ಚಿಕೊಂಡವರ ಸಂಖ್ಯೆ ಹೆಚ್ಚಿದೆ. ಹೀಗಿರುವಾಗ ಒಂದಕ್ಕಿಂತ ಹೆಚ್ಚಿನ ಬ್ಯಾಂಕಿಂಗ್ ಪ್ಲಾಟ್ ಫಾರ್ಮ್ ಗಳನ್ನು ಒಂದೇ ಮೊಬೈಲ್ ಅಪ್ಲಿಕೇಷನ್ ಗೆ ಸಂಯೋಜಿಸುವ ಮೂಲಕ ವಹಿವಾಟನ್ನು ತ್ವರಿತ, ಸುಭದ್ರ ಹಾಗೂ ಅನುಕೂಲಕರವಾಗಿಸುವ ಯನಿಫೈಡ್ ಪೇಮೆಂಟ್ ಇಂಟರ್ ಫೇಸ್ (ಯುಪಿಐ) ಜನಪ್ರಿಯತೆ ಗಳಿಸಿದೆ. ಇನ್ನು ಎಸ್ ಬಿಐ ಕಾರ್ಡ್ಸ್ ಹಾಗೂ ಎನ್ ಪಿಸಿಐ ಒಟ್ಟಾಗಿ ಡಿಜಿಟಲ್ ಪಾವತಿ ವ್ಯವಸ್ಥೆ ಬಳಕೆಯನ್ನು ಇನ್ನಷ್ಟು ಸುಲಭವಾಗಿಸಿ. ಈ ವ್ಯವಸ್ಥೆ ಹೆಚ್ಚು ಜನರಿಗೆ ಸುಲಭವಾಗಿ ಸಿಗುವಂತೆ ಮಾಡಿವೆ ಕೂಡ. ಈಗ ಎಸ್ ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ರುಪೇ ಪ್ಲ್ಯಾಟ್ ಫಾರ್ಮ್ ನಲ್ಲಿ ಕ್ರೆಡಿಟ್ ಕಾರ್ಡ್ಸ್ ಬಳಸಿಕೊಂಡು ಯುಪಿಐ ವಹಿವಾಟುಗಳನ್ನು ನಡೆಸಬಹುದು. ಹಾಗಾದ್ರೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪ್ಲಾಟ್ ಫಾರ್ಮ್ ಗೆ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಹಂತ ಹಂತವಾದ ಮಾಹಿತಿ.

ಹಂತ 1: ಯುಪಿಐ ಅಪ್ಲಿಕೇಷನ್ ಡೌನ್ಲೋಡ್ ಮಾಡಿ
ನಿಮ್ಮ ಮೊಬೈಲ್ ಆ್ಯಪ್ ಸ್ಟೋರ್ ನಿಂದ ಯುಪಿಐ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ. ಭೀಮ್ ಯುಪಿಐ, ಗೂಗಲ್ ಪೇ, ಪೇಟಿಎಂ ಹಾಗೂ ಫೋನ್ ಪೇ ಸೇರಿದಂತೆ ಅನೇಕ ಆ್ಯಪ್ ಗಳು ಯುಪಿಐ ಪ್ಲಾರ್ಟ್ ಫಾರ್ಮ್ ಗೆ ಬೆಂಬಲ ನೀಡುತ್ತವೆ.

ಈಗ ಖರೀದಿಸಿ ನಂತರ ಪಾವತಿಸಿ ಆಯ್ಕೆ ಬಳಸಿ ಶಾಪಿಂಗ್ ಮಾಡ್ತೀರಾ? ಎಚ್ಚರ, ನಿಮ್ಮ ಸಿಬಿಲ್ ಸ್ಕೋರ್ ತಗ್ಗಬಹುದು!

ಹಂತ 2: ಯುಪಿಐ ಪ್ರೊಫೈಲ್ ಸೃಷ್ಟಿಸಿ
ಆ್ಯಪ್ ಅನ್ನು ಯಶಸ್ವಿಯಾಗಿ ಇನ್ ಸ್ಟಾಲ್ ಮಾಡಿದ ಬಳಿಕ ಅದನ್ನು ತೆರೆದು ಹೆಸರು, ವರ್ಚುವಲ್ ಪೇಮೆಂಟ್ ವಿಳಾಸ (ವಿಪಿಎ) ಹಾಗೂ ಪಾಸ್ ವರ್ಡ್ ಬಳಸಿ ಯುಪಿಐ ಪ್ರೊಫೈಲ್ ಸೃಷ್ಟಿಸಿ.

ಹಂತ 3: ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿ
ಆ್ಯಪ್ ನಲ್ಲಿ 'ಮೈ ಅಕೌಂಟ್' ಅಥವಾ ಬ್ಯಾಂಕ್ ಅಕೌಂಟ್' ವಿಭಾಗಕ್ಕೆ ತೆರಳಿ. ಇಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸಬಹುದು ಅಥವಾ ಲಿಂಕ್ ಮಾಡಬಹುದು. ಇದಾದ ಬಳಿಕ ಕೆಳಗಿನ ಮೆನುವಿಂದ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ' ಆಯ್ಕೆ ಮಾಡಿ.

ಹಂತ 4: ಕ್ರೆಡಿಟ್ ಕಾರ್ಡ್ ಮಾಹಿತಿಗಳು
ನೀವು ಹೆಸರು, ಕಾರ್ಡ್ ಸಂಖ್ಯೆ, ಮುಗಿಯುವ ದಿನಾಂಕ ಹಾಗೂ ಸಿವಿವಿ ಸೇರಿದಂತೆ ಕ್ರೆಡಿಟ್ ಕಾರ್ಡ್ ನ ಕೊನೆಯ 6 ಅಂಕೆಗಳನ್ನು ಭರ್ತಿ ಮಾಡಬೇಕು.

ಹಂತ 5: ಪರಿಶೀಲನೆ
ನೀವು ನಿಮ್ಮ ಕಾರ್ಡ್ ಮಾಹಿತಿಗಳನ್ನು ನೀಡಿದ ಬಳಿಕ ಆ್ಯಪ್ ಬ್ಯಾಂಕ್ ಜೊತೆಗೆ ಕಾರ್ಡ್ ಅನ್ನು ಪರಿಶೀಲಿಸಿ ನೋಡುತ್ತದೆ.

ಖರೀದಿ ಬಳಿಕ ಬಿಲ್ ಕೇಳಿ,1 ಕೋಟಿ ರೂ. ನಗದು ಬಹುಮಾನ ಗೆಲ್ಲಿ; ಸೆ.1ರಿಂದ ಜಾರಿಗೆ ಬರಲಿದೆ ಕೇಂದ್ರದ ಹೊಸ ಯೋಜನೆ

ಹಂತ 6: ಸಕ್ರಿಯಗೊಳಿಸಿ
ಒಮ್ಮೆ ಪರಿಶೀಲನೆ ನಡೆಸಿದ ಬಳಿಕ ನಿಮಗೆ ಒಟಿಪಿ (ಒನ್ ಟೈಮ್ ಪಾಸ್ ವರ್ಡ್ ) ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ. ಈಗ ಲಿಂಕಿಂಗ್ ಪ್ರಕ್ರಿಯೆ ಪೂರ್ಣಗೊಳಿಸಲು ಒಟಿಪಿ ನಮೂದಿಸಿ.

ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ನೀವು ಯುಪಿಐ ಪ್ಲಾಟ್ ಫಾರ್ಮ್ ಮೂಲಕ ನಿಮ್ಮ ಎಸ್ ಬಿಐ ರುಪೇ ಕಾರ್ಡ್ ಬಳಸಿ ಪಾವತಿಗಳು ಹಾಗೂ ವಹಿವಾಟುಗಳನ್ನು ನಡೆಸಲು ಸಾಧ್ಯವಾಗುತ್ತದೆ. ವಹಿವಾಟುಗಳನ್ನು ಸುರಕ್ಷಿತವಾಗಿ ನಡೆಸಲು ಕಾರ್ಡ್ ಗೆ ಯುಪಿಐ -ಪಿನ್ ಸೆಟ್ ಮಾಡಲು ಮಾತ್ರ ಮರೆಯಬೇಡಿ. ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಿಂದ ತ್ವರಿತ, ಸುಲಭ ಹಾಗೂ ಸುರಕ್ಷಿತವಾಗಿ ವಹಿವಾಟುಗಳನ್ನು ನಡೆಸಲು ಕಾರ್ಡ್ ದಾರರಿಗೆ ಸಾಧ್ಯವಾಗಲಿದೆ. ಇದು ಹಣಕಾಸನ್ನು ಒಳಗೊಂಡ ಅಭಿವೃದ್ಧಿ ಹಾಗೂ ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯನ್ನು ಉತ್ತೇಜಿಸಲು ನೆರವು ನೀಡಲಿದೆ. 

Follow Us:
Download App:
  • android
  • ios