ಈಗ ಖರೀದಿಸಿ ನಂತರ ಪಾವತಿಸಿ ಆಯ್ಕೆ ಬಳಸಿ ಶಾಪಿಂಗ್ ಮಾಡ್ತೀರಾ? ಎಚ್ಚರ, ನಿಮ್ಮ ಸಿಬಿಲ್ ಸ್ಕೋರ್ ತಗ್ಗಬಹುದು!
ಆನ್ ಲೈನ್ ಶಾಪಿಂಗ್ ತಾಣಗಳಲ್ಲಿ ಈಗ ಖರೀದಿಸಿ ನಂತರ ಪಾವತಿಸಿ ಆಯ್ಕೆ ಕಂಡಿದ್ದೆಲ್ಲವನ್ನೂ ಖರೀದಿಸುವಂತೆ ಮಾಡಿದೆ. ಆದರೆ, ಈ ಆಯ್ಕೆ ಖರೀದಿದಾರರ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಮಾಹಿತಿ.
Business Desk: ಇಂದಿನ ಡಿಜಿಟಲ್ ಯುಗದಲ್ಲಿ ಪಾವತಿ ಮಾಡೋದು ಸುಲಭದ ಕೆಲಸ. ಏನಾದರೂ ಖರೀದಿ ಮಾಡಲು ಕೈಯಲ್ಲಿ ಕಾಸಿರಬೇಕಾದ ಅಗತ್ಯವಿಲ್ಲ. ಮೊಬೈಲ್ ನಲ್ಲಿ ಫೋನ್ ಪೇ, ಗೂಗಲ್ ಪೇ ಅಥವಾ ಏಟಿಎಂನಂತಹ ಡಿಜಿಟಲ್ ಪಾವತಿ ಅಪ್ಲಿಕೇಷನ್ ಗಳಿದ್ದರೆ ಸಾಕು. ಇನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಕೂಡ ಪಾವತಿ ಪ್ರಕ್ರಿಯೆಯನ್ನು ಸುಲಭಗೊಳಿಸಿವೆ. ಆದರೆ, ಇದ್ಯಾವುದೇ ಆಯ್ಕೆಗಳು ಆ ಕ್ಷಣದಲ್ಲಿ ನಿಮ್ಮ ಬಳಿ ಇಲ್ಲದಿದ್ದರೂ ಆನ್ ಲೈನ್ ಶಾಪಿಂಗ್ ನಲ್ಲಿ ನೀವು ಬಯಸಿದ ವಸ್ತುವನ್ನು ಖರೀದಿಸಲು 'ಈಗ ಖರೀದಿಸಿ, ನಂತರ ಪಾವತಿಸಿ' (ಬಿಎನ್ ಪಿಎಲ್) ಆಯ್ಕೆ ಅವಕಾಶ ನೀಡುತ್ತದೆ. ಅನೇಕ ಆನ್ ಲೈನ್ ತಾಣಗಳಲ್ಲಿ ಈ ಆಯ್ಕೆ ಲಭ್ಯವಿದೆ. ಆದರೆ, ಈ ಬಿಎನ್ ಪಿಎಲ್ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತಾ? ಇಂಥದೊಂದು ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ. ಸಿಬಿಲ್ ಸ್ಕೋರ್ ಒಂದು ರೀತಿಯಲ್ಲಿ ನಮ್ಮ ಹಣಕಾಸಿನ ವರದಿ ಇದ್ದಂತೆ. ಇದು ನೀವು ನಿಮ್ಮ ಹಣಕಾಸಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಿದ್ದೀರಿ ಎಂಬುದನ್ನು ತೋರಿಸುತ್ತದೆ. ಹಾಗಾದ್ರೆ ಈಗ ಖರೀದಿಸಿ ನಂತರ ಪಾವತಿಸಿ ಆಯ್ಕೆ ಸಿಬಿಲ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಇಲ್ಲಿದೆ ಮಾಹಿತಿ.
ಏನಿದು ಬಿಎನ್ ಪಿಎಲ್?
ಈಗ ಖರೀದಿಸಿ, ನಂತರ ಪಾವತಿಸಿ' ಅಥವಾ ಬಿಎನ್ ಪಿಲ್ ವಿಧಾನದಲ್ಲಿ ಗ್ರಾಹಕರಿಗೆ ಇ-ಕಾಮರ್ಸ್ ತಾಣಗಳು ವಸ್ತುಗಳ ಖರೀದಿಗೆ ಬಡ್ಡಿರಹಿತ ಕಿರು ಅವಧಿಯ ಸಾಲಗಳನ್ನು ಒದಗಿಸುತ್ತಿವೆ. ಹೀಗಾಗಿ ಈ ಸಾಲ ಬಳಸಿಕೊಂಡು ಗ್ರಾಹಕರು ವಸ್ತುಗಳನ್ನು ಖರೀದಿಸಿ, ಆ ಬಳಿಕ ಬಡ್ಡಿರಹಿತ ಇಎಂಐಗಳ ಮೂಲಕ ಪಾವತಿ ಮಾಡಬಹುದು. ಬಿಎನ್ ಪಿಎಲ್ ಪ್ಲ್ಯಾನ್ ಗಳು ಕ್ರೆಡಿಟ್ ಕಾರ್ಡ್ ಅಥವಾ ಇತರ ಕ್ರೆಡಿಟ್ ವಿಧಾನಗಳಿಗಿಂತ ಹೆಚ್ಚು ಪ್ರಯೋಜನಕಾರಿ. ಏಕೆಂದ್ರೆ ಇದಕ್ಕೆ ಯಾವುದೇ ಬಡ್ಡಿ ಇಲ್ಲ.
999 ರೂ. ಗೆ ಅಮೆಜಾನ್‌ನಲ್ಲಿ ಲಭ್ಯ ಜಿಯೋ ಭಾರತ್ ಫೀಚರ್ ಫೋನ್: ಮಾರಾಟ ದಿನಾಂಕ, ವೈಶಿಷ್ಟ್ಯತೆ ಹೀಗಿದೆ..
ಬಿಎನ್ ಪಿಎಲ್ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತಾ?
ಬಿಎನ್ ಪಿಎಲ್ ಸಿಬಿಲ್ ಸ್ಕೋರ್ ಮೇಲೆ ನೇರ ಪರಿಣಾಮ ಬೀರೋದಿಲ್ಲ. ಅಂದ್ರೆ ನೀವು ಬಿಎನ್ ಪಿಎಲ್ ಮುಖಾಂತರ ವಸ್ತುಗಳನ್ನು ಖರೀದಿಸಿದ್ರೆ ನಿಮ್ಮ ಸಿಬಿಲ್ ಸ್ಕೋರ ಮೇಲೆ ಯಾವುದೇ ಪರಿಣಾಮ ಉಂಟಾಗೋದಿಲ್ಲ. ಆದ್ರೆ, ಬಿಎನ್ ಪಿಎಲ್ ತಿಂಗಳ ಮರುಪಾವತಿಯನ್ನು ಮಿಸ್ ಮಾಡಿದ್ರೆ ಆಗ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಮರುಪಾವತಿ ಇತಿಹಾಸ ನಿಮ್ಮ ಕ್ರೆಡಿಟ್ ಸ್ಕೋರ್ ಲೆಕ್ಕಾಚಾರದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ. ಹೀಗಾಗಿ ಬಿಎನ್ ಪಿಎಲ್ ಮರುಪಾವತಿ ಮಿಸ್ ಮಾಡಿದ್ರೆ ನಿಮ್ಮ ಸಾಲದ ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಿಸ್ ಆದ್ರೆ ಕ್ರೆಡಿಟ್ ಸ್ಕೋರ್ ಮೇಲೆ ಹೇಗೆ ಪರಿಣಾಮ ಉಂಟಾಗುತ್ತದೋ ಅದೇ ಇಲ್ಲೂ ಆಗುತ್ತದೆ.
ಇನ್ನು ಕೆಲವು ಬಿಎನ್ ಪಿಎಲ್ ಸೇವೆಗಳು ಕ್ರೆಡಿಟ್ ಬ್ಯುರೋಗೆ ವರದಿ ಮಾಡೋದಿಲ್ಲ. ಇಂಥ ಪ್ರಕರಣಗಳಲ್ಲಿ ನೀವು ಮರುಪಾವತಿ ಮಿಸ್ ಮಾಡಿದ್ರೂ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಉಂಟಾಗೋದಿಲ್ಲ. ಆದರೆ, ಇಂಥ ಬಿಎನ್ ಪಿಎಲ್ ಸೇವೆಗಳು ತಡವಾಗಿ ಪಾವತಿ ಮಾಡಿದ್ದಕ್ಕೆ ವಿಳಂಬ ಶುಲ್ಕ ಪಾವತಿಸುವ ಸಾಧ್ಯತೆ ಇರುತ್ತದೆ.
ಆದಾಯ ತೆರಿಗೆ ರೀಫಂಡ್ ಕಾಲಾವಧಿ ತಗ್ಗಿಸಲು ಯೋಜನೆ ರೂಪಿಸುತ್ತಿರುವ ಸರ್ಕಾರ; 16 ರಿಂದ 10 ದಿನಗಳಿಗೆ ಇಳಿಕೆ ಸಾಧ್ಯತೆ
ಕ್ರೆಡಿಟ್ ಸ್ಕೋರ್ ರಕ್ಷಿಸಿಕೊಳ್ಳಲು ಬಿಎನ್ ಪಿಎಲ್ ಹೀಗೆ ಬಳಸಿ
ಒಂದು ವೇಳೆ ಬಿಎನ್ ಪಿಎಲ್ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರಬಾರದು ಎಂದರೆ ಈ ಟಿಪ್ಸ್ ಫಾಲೋ ಮಾಡಿ
*ಸಮಯದ ಮೇಲೆ ಗಮನವಿರಲಿ: ನಿಮ್ಮ ಬಿಎನ್ ಪಿಎಲ್ ಮರುಪಾವತಿ ಯಾವಾಗ ಬಾಕಿ ಉಳಿದಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿ.
*ನೋಡಿದ್ದೆಲ್ಲ ಖರೀದಿಸಬೇಡಿ: ಬಿಎನ್ ಪಿಎಲ್ ಆಯ್ಕೆಯಿದೆ ಎಂಬ ಕಾರಣಕ್ಕೆ ನೋಡಿದ್ದೆಲ್ಲವನ್ನೂ ಖರೀದಿಸಬೇಡಿ. ಅಗತ್ಯವಿದ್ದರೆ ಮಾತ್ರ ಖರೀದಿಸಿ.
*ಜಾಣತನದಿಂದ ಬಿಎನ್ ಪಿಎಲ್ ಸೇವೆ ಆಯ್ಕೆ ಮಾಡಿ: ಬಿಎನ್ ಪಿಎಲ್ ಆಯ್ಕೆ ಮಾಡುವಾಗ ಅದರ ಮರುಪಾವತಿ ವಿವರವನ್ನು ಕ್ರೆಡಿಟ್ ಬ್ಯೂರೋಗೆ ನೀಡುತ್ತಾರೋ ಇಲ್ಲವೋ ಎಂಬದನ್ನು ಪರಿಶೀಲಿಸಿ.