Health Insurance ಖರೀದಿಸುವ ಮುನ್ನ ಎಚ್ಚರ, ಏನೇನು ಕವರ್ ಆಗುತ್ತೆ ಅನ್ನೋದು ನೋಡ್ಕಳ್ಳಿ
ಆರೋಗ್ಯ ವಿಮೆ ಬಗ್ಗೆ ಅನೇಕ ಕಂಪನಿಗಳು ಜಾಹೀರಾತು ನೀಡ್ತಿರುತ್ತವೆ. ಯಾವುದು ಬೆಸ್ಟ್, ಯಾವುದು ಲಾಭಕರ ಎಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದು ಕಷ್ಟ. ಆದ್ರೆ ಖರೀದಿ ವೇಲೆ ಕೆಲ ವಿಷ್ಯದ ಬಗ್ಗೆ ನೀವು ಸಂಪೂರ್ಣ ಮಾಹಿತಿ ಪಡೆದ್ರೆ ಮುಂದೆ ಸಮಸ್ಯೆಯಾಗುವುದಿಲ್ಲ.
ಸಾಂಕ್ರಾಮಿಕ ಮಹಾಮಾರಿ ಕೊರೊನಾ ನಂತ್ರ ಜನರ ಆಲೋಚನೆ ಬದಲಾಗಿದೆ. ಆರೋಗ್ಯಕ್ಕೆ ಜನರು ಮಹತ್ವ ನೀಡ್ತಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಹಣ ಹೊಂದಿಸೋದು ಕಷ್ಟ ಎಂಬ ಸತ್ಯ ಜನರ ಅರಿವಿಗೆ ಬಂದಿದೆ. ಹಾಗಾಗಿಯೇ ಜನರು ಮುಂದೆ ಸಮಸ್ಯೆಯಾಗದಂತೆ ಎಚ್ಚರಿಕೆ ತೆಗೆದುಕೊಳ್ತಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ವೆಚ್ಚಗಳನ್ನು ತಡೆಗಟ್ಟಲು ಆರೋಗ್ಯ ವಿಮೆ ಖರೀದಿಗೆ ಮುಂದಾಗ್ತಿದ್ದಾರೆ.
ಜನರ ಆಲೋಚನೆ ಬದಲಾಗ್ತಿದ್ದಂತೆ, ಆರೋಗ್ಯ (Health) ವಿಮೆ (Insurance) ಯತ್ತ ಜನರು ಒಲವು ತೋರಿಸುತ್ತಿದ್ದಂತೆ ವಿಮಾ ಕಂಪನಿ (Company) ಗಳು ಕೂಡ ಅನೇಕ ರೀತಿಯ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುತ್ತಿವೆ. ಹೊಸ ಹೊಸ ಆಫರ್ ಗಳನ್ನು ವಿಮಾ ಕಂಪನಿಗಳು ನೀಡ್ತವೆ. ಯಾವುದೇ ಕಾರಣಕ್ಕೂ ವಿಮಾ ಪಾಲಿಸಿಗಳನ್ನು ಆತುರದಲ್ಲಿ ಖರೀದಿ ಮಾಡುವುದು ಒಳ್ಳೆಯದಲ್ಲ. ಪಾಲಿಸಿಯನ್ನು ಖರೀದಿಸುವ ಮೊದಲು ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆರೋಗ್ಯ ಪಾಲಿಸಿಯನ್ನು ಖರೀದಿಸುವಾಗ ಗ್ರಾಹಕ (Customer) ರು ಅನುಸರಿಸಬೇಕಾದ ಸಲಹೆಗಳ ಕುರಿತ ಮಾಹಿತಿ ಇಲ್ಲಿದೆ.
ಆರೋಗ್ಯ ವಿಮೆ ಖರೀದಿ ವೇಳೆ ಇರಲಿ ಈ ಬಗ್ಗೆ ಎಚ್ಚರಿಕೆ :
ಯಾವ ಯಾವ ಖಾಯಿಲೆಗೆ ಸಿಗುತ್ತೆ ರಕ್ಷಣೆ ? : ಕಂಪನಿ ಬೇರೆ ಬೇರೆ ಆರೋಗ್ಯ ವಿಮೆಗಳನ್ನು ಹೊಂದಿದೆ. ಹಾಗಾಗಿ ವಿಮೆ ಖರೀದಿ ವೇಳೆ ನೀವು ಯಾವ ಯಾವ ರೋಗಕ್ಕೆ ರಕ್ಷಣೆ ನೀಡುತ್ತದೆ ಎಂಬುದನ್ನು ಪರಿಶೀಲಿಸಬೇಕು. ಈಗಾಗಲೇ ನೀವು ಯಾವುದಾದ್ರೂ ರೋಗದಿಂದ ಬಳಲುತ್ತಿದ್ದರೆ ನೀವು ಖರೀದಿ ಮಾಡ್ತಿರುವ ಪಾಲಿಸಿ ಈ ರೋಗಕ್ಕೆ ರಕ್ಷಣೆ ನೀಡುತ್ತಾ ಎಂಬುದನ್ನು ಪರಿಶೀಲಿಸಬೇಕು. ಇದನ್ನು ತಿಳಿಯದೆ ನೀವು ವಿಮೆ ಖರೀದಿ ಮಾಡಿ, ನಂತ್ರ ನಿಮ್ಮ ರೋಗಕ್ಕೆ ಪಾಲಿಸಿ ಅನ್ವಯವಾಗಲ್ಲವೆಂದ್ರೆ ನಿಮಗೆ ನಷ್ಟವಾಗುತ್ತದೆ.
ಆಸ್ಪತ್ರೆ ಪಟ್ಟಿಯನ್ನು ಪರೀಕ್ಷಿಸಿ : ಆರೋಗ್ಯ ವಿಮೆ ಪಾಲಿಸಿಯನ್ನು ಖರೀದಿಸುವಾಗ, ಕಂಪನಿಯು ನಿಮಗೆ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಯಾವ ಆಸ್ಪತ್ರೆಗಳಲ್ಲಿ ನೀಡುತ್ತಿದೆ ಎಂಬುದನ್ನು ನೀವು ಪರಿಶೀಲಿಸಬೇಕು. ವಿಮೆಯನ್ನು ತೆಗೆದುಕೊಳ್ಳುವಾಗ ಕಂಪನಿಯು ನಿಮಗೆ ನಗದು ರಹಿತ ಸೌಲಭ್ಯ ನೀಡಬಲ್ಲ ಆಸ್ಪತ್ರೆಗಳ ಪಟ್ಟಿಯನ್ನು ನೀಡುತ್ತದೆ. ಇದರಲ್ಲಿರುವ ಆಸ್ಪತ್ರೆಗಳನ್ನು ನೀವು ಪರಿಶೀಲಿಸಿ. ಈ ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತ್ರವೇ ನೀವು ಪಾಲಿಸಿ ಖರೀದಿಗೆ ಮುಂದಾಗುವುದು ಒಳ್ಳೆಯದು. ನೀವು ದಾಖಲಾದ ಎಲ್ಲ ಆಸ್ಪತ್ರೆ ಹೆಸರು ಪಟ್ಟಿಯಲ್ಲಿಲ್ಲವೆಂದ್ರೆ ತೊಂದರೆ ಅನುಭವಿಸಬೇಕಾಗುತ್ತದೆ.
Senior Citizens Health Insurance: ಅಜ್ಜಿ-ತಾತನಿಗೆ ವಿಮೆ ಖರೀದಿ ಮಾಡ್ತಿದ್ದರೆ ಇದರ ಬಗ್ಗೆ ಗಮನವಿರಲಿ!
ಆಡ್ ಆನ್, ರೈಡರ್ ಸೌಲಭ್ಯ : ಆರೋಗ್ಯ ವಿಮೆ ಖರೀದಿ ವೇಳೆ ನೀವು ಆಡ್ ಆನ್ ಹಾಗೂ ರೈಡರ್ ಸೌಲಭ್ಯದ ಬಗ್ಗೆಯೂ ಮಾಹಿತಿ ಪಡೆದಿರಬೇಕು. ಯಾಕೆಂದ್ರೆ ಅಪಘಾತದ ಸಂದರ್ಭದಲ್ಲಿ ಇದು ನಿಮಗೆ ಉತ್ತಮ ಆರ್ಥಿಕ ಸಹಾಯವನ್ನು ನೀಡುತ್ತದೆ. ಇಲ್ಲವೆಂದ್ರೆ ಅಪಘಾತದ ಖರ್ಚನ್ನು ನೀವೇ ಪಾವತಿಸಬೇಕಾಗುತ್ತದೆ.
ಕೋ ಪೇ ಆಯ್ಕೆ ಆರಿಸಿಕೊಳ್ಳಬೇಡಿ : ಆರೋಗ್ಯ ವಿಮಾ ಪಾಲಿಸಿಯನ್ನು ಖರೀದಿಸುವಾಗ ಕೋ ಪೇ ಆಯ್ಕೆಯನ್ನು ಆರಿಸಿಕೊಳ್ಳಬೇಡಿ. ಯಾಕೆಂದ್ರೆ ನೀವು ಕೋ ಪೇ ಆಯ್ಕೆಯನ್ನು ಆಯ್ದುಕೊಂಡ್ರೆ ಆಸ್ಪತ್ರೆಯ ಬಿಲ್ ಪಾವತಿ ವೇಳೆ ಸ್ವಲ್ಪ ಭಾಗವನ್ನು ನೀವು ಪಾವತಿಸಬೇಕಾಗುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಕೋ ಪೇ ಆಯ್ಕೆ ಆಯ್ದುಕೊಳ್ಳಬೇಡಿ.
ವಿಮೆ ಕ್ಲೈಮ್ ಮಾಡಲು Insurance Company ನಿರಾಕರಿಸಿದ್ರೆ, ದೂರು ನೀಡೋದೆಲ್ಲಿ?
ಈ ವಿಷ್ಯದ ಬಗ್ಗೆ ಗಮನವಿರಲಿ : ಆರೋಗ್ಯ ವಿಮೆ ಖರೀದಿ ವೇಳೆ ನೀವು ಪ್ರತಿಯೊಂದನ್ನು ಪರೀಕ್ಷೆ ಮಾಡ್ಬೇಕು. ವಿಮೆಯಲ್ಲಿ ಯಾವುದು ಕವರ್ ಆಗ್ತಿಲ್ಲ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ಇದ್ರ ಬಗ್ಗೆ ನೀವು ಸರಿಯಾಗಿ ತಿಳಿಯದೆ ಹೋದ್ರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ. ಎಲ್ಲ ಪರೀಕ್ಷೆ ನಂತ್ರ ನೀವು ಆರೋಗ್ಯ ವಿಮೆ ಖರೀದಿ ಮಾಡಿದ್ರೆ ಅನುಕೂಲ ಹೆಚ್ಚು.