Asianet Suvarna News Asianet Suvarna News

ಎಚ್ ಡಿಎಫ್ ಸಿ ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಎಫ್ ಡಿ ಯೋಜನೆ ವಿಸ್ತರಣೆ; ಜುಲೈ 7ರ ತನಕ ಖಾತೆ ತೆರೆಯಲು ಅವಕಾಶ

ಕೋವಿಡ್ -19 ಸಂದರ್ಭದಲ್ಲಿ ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯನ್ನು ಅನೇಕ ಬ್ಯಾಂಕ್ ಗಳು ಪರಿಚಯಿಸಿದ್ದವು. ಈ ವಿಶೇಷ ಎಫ್ ಡಿ ನಿಗದಿತ ಅವಧಿಗೆ ಪರಿಚಯಿಸಲಾಗಿತ್ತು. ಎಚ್ ಡಿಎಫ್ ಸಿ ಬ್ಯಾಂಕ್ ಕೂಡ  ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಎಂಬ ವಿಶೇಷ ಎಫ್ ಡಿ ಯೋಜನೆ ಪ್ರಾರಂಭಿಸಿದ್ದು, ಇದರ ಅವಧಿ 2023ರ ಮಾ.31ಕ್ಕೆ ಕೊನೆಗೊಂಡಿದ್ದು, ಈಗ ಮತ್ತೆ  2023ರ ಜುಲೈ 7ರ ತನಕ ವಿಸ್ತರಿಸಲಾಗಿದೆ. 
 

HDFC Bank Extends Senior Citizen Care FD Scheme Offering Higher Interest Rates Details anu
Author
First Published May 31, 2023, 6:16 PM IST

ನವದೆಹಲಿ (ಮೇ 31): ಹಿರಿಯ ನಾಗರಿಕರ ವಿಶೇಷ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯನ್ನು ವಿಸ್ತರಿಸೋದಾಗಿ ಎಚ್ ಡಿಎಫ್ ಸಿ ಬ್ಯಾಂಕ್ ಘೋಷಿಸಿದೆ. ಸೀನಿಯರ್ ಸಿಟಿಜನ್ ಕೇರ್ ಎಫ್ ಡಿ ಎಂಬ ಈ ವಿಶೇಷ ಯೋಜನೆಯನ್ನು 2020ರ ಮೇ 18ರಂದು ಪ್ರಾರಂಭಿಸಲಾಗಿತ್ತು. ಕೋವಿಡ್ -19 ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಹಣಕಾಸಿನ ಬೆಂಬಲ ನೀಡುವ ಉದ್ದೇಶದಿಂದ ಈ ವಿಶೇಷ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇದು 60 ವರ್ಷ ಮೇಲ್ಪಟ್ಟವರಿಗೆ ಅಧಿಕ ಬಡ್ಡಿದರ ನೀಡುತ್ತದೆ. ಈ ವಿಶೇಷ ಎಫ್ ಡಿ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಶೇ.0.25 ಬಡ್ಡಿದರ ನೀಡಲಾಗುತ್ತದೆ. ಇದು ಈ ಮೊದಲೇ ನೀಡುವ ಶೇ.0.50ಕ್ಕೆ ಹೆಚ್ಚುವರಿಯಾಗಿ ನೀಡಲಾಗುತ್ತದೆ. ಹೀಗಾಗಿ ಹಿರಿಯ ನಾಗರಿಕರಿಗೆ ಹೆಚ್ಚುವರಿ ಶೇ.0.75 ಬಡ್ಡಿದರ ಸಿಗುತ್ತದೆ.  ಎಫ್ ಡಿಗಳು 5 ವರ್ಷ ಒಂದು ದಿನದಿಂದ 10 ವರ್ಷಗಳ ಅವಧಿಯದ್ದಾಗಿದ್ದು, 5 ಕೋಟಿ ರೂ.ಗಿಂತ ಕಡಿಮೆ ಠೇವಣಿಗೆ ಸಂಬಂಧಿಸಿದ್ದಾಗಿದೆ. ಈ ಎಫ್ ಡಿ 2023ರ ಮಾ.31ಕ್ಕೆ ಕೊನೆಗೊಳ್ಳಲಿದೆ ಎಂದು ಹೇಳಲಾಗಿತ್ತು. ಈಗ ಇದನ್ನು 2023ರ ಜುಲೈ 7ರ ತನಕ ವಿಸ್ತರಿಸಲಾಗಿದೆ ಎಂದು ಎಚ್ ಡಿಎಫ್ ಸಿ ಬ್ಯಾಂಕ್  ತಿಳಿಸಿದೆ. 

ಎಚ್ ಡಿಎಫ್ ಸಿ ಬ್ಯಾಂಕಿನ ಈ ವಿಶೇಷ ಯೋಜನೆ ಹಿರಿಯ ನಾಗರಿಕರ ಹೊಸ ಎಫ್ ಡಿಗಳು ಹಾಗೂ ನಿರ್ದಿಷ್ಟ ಸಮಯಾವಧಿಯಲ್ಲಿ ನವೀಕರಿಸಲ್ಪಡುವ ಎಫ್ ಡಿಗಳಿಗೆ ಕೂಡ ಅನ್ವಯಿಸಲಿದೆ. ಈ ವಿಶೇಷ ಆಫರ್ ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ. ಒಂದು ವೇಳೆ ಈ ವಿಶೇಷ ಯೋಜನೆಯಡಿಯಲ್ಲಿ ಎಫ್ ಡಿ ತೆರೆದು 5 ವರ್ಷ ಅಥವಾ ಅದಕ್ಕಿಂತ ಮುನ್ನ ಕ್ಲೋಸ್ ಮಾಡಿದರೆ, ಆಗ ಬಡ್ಡಿದರ ಆ ಸಮಯಕ್ಕೆ ಬ್ಯಾಂಕಿನ ಬಡ್ಡಿದರ ಅಥವಾ ಒಪ್ಪಂದದಲ್ಲಿರುವ ಬಡ್ಡಿದರಕ್ಕಿಂತ ಶೇ.1ರಷ್ಟು ಕಡಿಮೆಯಾಗಲಿದೆ.
ಇನ್ನು ಎಚ್ ಡಿಎಫ್ ಸಿ ಬ್ಯಾಂಕ್ 35 ಹಾಗೂ 55 ತಿಂಗಳ ಅವಧಿಯ ಎರಡು ವಿಶೇಷ ಎಫ್ ಡಿಗಳನ್ನು ಕೂಡ ಪರಿಚಯಿಸಿದೆ. ಈ ವಿಶೇಷ ಎಫ್ ಡಿ ಯೋಜನೆಗಳು ಶೇ.7.70 ಹಾಗೂ ಶೇ.7.75ರಷ್ಟು ಆಕರ್ಷಕ ಬಡ್ಡಿದರವನ್ನು ನೀಡುತ್ತಿವೆ. ಇನ್ನು ಎಚ್ ಡಿಎಫ್ ಸಿ ಬ್ಯಾಂಕ್ ಇತ್ತೀಚೆಗಷ್ಟೇ ಎಫ್ ಡಿ ಬಡ್ಡಿದರ ಪರಿಷ್ಕರಿಸಿದ್ದು, ಇದು ಅವಧಿ ಆಧಾರದಲ್ಲಿ ಶೇ.3.5ರಿಂದ ಶೇ.7.7 ತನಕ ಇರಲಿದೆ. ಈ ಪರಿಷ್ಕೃತ ಬಡ್ಡಿದರ ಏರಿಕೆ ಮೇ 29ರಿಂದ ಜಾರಿಗೆ ಬರಲಿದೆ. 

2000 ನೋಟು ಬದಲಾವಣೆ: ಬ್ಯಾಂಕಲ್ಲಿ ಹಣವಿಲ್ಲದೇ ಪರದಾಟ

ಎಚ್ ಡಿಎಫ್ ಸಿ ಬ್ಯಾಂಕ್ ಸ್ಪೆಷಲ್ ಎಡಿಷನ್ ಎಫ್ ಡಿ
ಎಚ್ ಡಿಎಫ್ ಸಿ ಬ್ಯಾಂಕ್ 35 ಹಾಗೂ 55 ತಿಂಗಳ ಅವಧಿಯ ಎರಡು ವಿಶೇಷ ಎಡಿಷನ್ ಎಫ್ ಡಿಗಳನ್ನು ಪರಿಚಯಿಸಿದೆ. ಈ ಎರಡೂ ಯೋಜನೆಗಳು ಹಿರಿಯ ನಾಗರಿಕರಿಗೆ ಕ್ರಮವಾಗಿ ಶೇ.7.70 ಹಾಗೂ ಶೇ.7.75 ಬಡ್ಡಿದರ ನೀಡುತ್ತಿವೆ. 
2 ವರ್ಷ 11 ತಿಂಗಳ (ವಿಶೇಷ ಎಡಿಷನ್ ಎಫ್ ಡಿ-35 ತಿಂಗಳು)-ಶೇ.7.70 ಬಡ್ಡಿದರ
4 ವರ್ಷ 7 ತಿಂಗಳು (ವಿಶೇಷ ಎಡಿಷನ್ ಎಫ್ ಡಿ-55 ತಿಂಗಳು)-ಶೇ.7.75 ಬಡ್ಡಿದರ

ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ, ಮೊತ್ತದಲ್ಲಿ ಇಳಿಕೆ: ಆರ್ ಬಿಐ ವರದಿ

ಕೋವಿಡ್ -19 (COVID-19) ಹಾಗೂ ಆರ್ಥಿಕತೆಯ ನಿಧಾನಗತಿಯ ಹಿನ್ನೆಲೆಯಲ್ಲಿ ಬ್ಯಾಂಕ್ ಠೇವಣಿಗಳ (Deposits) ಮೇಲಿನ ಬಡ್ಡಿದರ (Interest rate) ಇಳಿಕೆ ಹಾದಿ ಹಿಡಿದಿತ್ತು. ಇಂಥ ಸಮಯದಲ್ಲಿ ಸ್ಥಿರ ಠೇವಣಿಯ (Fixed Deposit) ಮೇಲೆ ಹಿರಿಯ ನಾಗರಿಕರು (Senior Citizen) ಇಟ್ಟಿರುವ ನಂಬಿಕೆಯನ್ನು ಉಳಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI),ಎಚ್ ಡಿಎಫ್ ಸಿ ಬ್ಯಾಂಕ್ ( HDFC Bank), ಐಸಿಐಸಿಐ ಬ್ಯಾಂಕ್ (ICICI Bank) ಹಾಗೂ ಬ್ಯಾಂಕ್ ಆಫ್ ಬರೋಡ (Bank of Baroda) ಸೇರಿದಂತೆ  ಅನೇಕ ಬ್ಯಾಂಕುಗಳು (Banks) ಹಿರಿಯ ನಾಗರಿಕರಿಗಾಗಿ ವಿಶೇಷ ಸ್ಥಿರ ಠೇವಣಿ ಯೋಜನೆಗಳನ್ನು 2020ರಲ್ಲಿ ಪರಿಚಯಿಸಿವೆ.
 

Follow Us:
Download App:
  • android
  • ios