Asianet Suvarna News Asianet Suvarna News

2000 ನೋಟು ಬದಲಾವಣೆ: ಬ್ಯಾಂಕಲ್ಲಿ ಹಣವಿಲ್ಲದೇ ಪರದಾಟ

ಬುಧವಾರ ಮಧ್ಯಾಹ್ನದವರೆಗೆ ಅತಿಹೆಚ್ಚು ಜನ ಬ್ಯಾಂಕ್‌ಗಳಿಗೆ ಭೇಟಿ ನೀಡಿದ ಕಾರಣ ಮಧ್ಯಾಹ್ನದ ನಂತರ ಹಲವು ಬ್ಯಾಂಕ್‌ಗಳಲ್ಲಿ 500 ರು., 200 ರು. ಹಾಗೂ 100 ರು. ಮುಖಬೆಲೆಯ ನೋಟುಗಳ ಕೊರತೆ ಉಂಟಾಗಿತ್ತು. ಈ ಹಣವನ್ನು ಪೂರೈಕೆ ಮಾಡುವವರೆಗೆ ಸಾರ್ವಜನಿಕರು ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

People Faces Problems Due to Lack of Money in Banks grg
Author
First Published May 25, 2023, 12:30 AM IST

ನವದೆಹಲಿ(ಮೇ.25): ಚಲಾವಣೆಯಿಂದ ಹಿಂಪಡೆಯಲಾದ 2000 ರು. ಮುಖಬೆಲೆಯ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು 2ನೇ ದಿನವಾದ ಬುಧವಾರ ದೇಶದ ಹಲವು ಬ್ಯಾಂಕ್‌ಗಳಲ್ಲಿ ಹಣದ ಕೊರತೆ ಉಂಟಾದ ಕಾರಣ ಸಾರ್ವಜನಿಕರು ಗೊಂದಲಗೊಂಡ ಘಟನೆಗಳು ನಡೆದಿವೆ.

ಬುಧವಾರ ಮಧ್ಯಾಹ್ನದವರೆಗೆ ಅತಿಹೆಚ್ಚು ಜನ ಬ್ಯಾಂಕ್‌ಗಳಿಗೆ ಭೇಟಿ ನೀಡಿದ ಕಾರಣ ಮಧ್ಯಾಹ್ನದ ನಂತರ ಹಲವು ಬ್ಯಾಂಕ್‌ಗಳಲ್ಲಿ 500 ರು., 200 ರು. ಹಾಗೂ 100 ರು. ಮುಖಬೆಲೆಯ ನೋಟುಗಳ ಕೊರತೆ ಉಂಟಾಗಿತ್ತು. ಈ ಹಣವನ್ನು ಪೂರೈಕೆ ಮಾಡುವವರೆಗೆ ಸಾರ್ವಜನಿಕರು ಕಾಯಬೇಕಾದ ಪರಿಸ್ಥಿತಿ ಉಂಟಾಗಿತ್ತು.

2,000ರೂ. ನೋಟು ಹಿಂತೆಗೆತದ ಪರಿಣಾಮ ಠೇವಣಿ, ಬಡ್ಡಿದರಕ್ಕೆ ಹಿತಕಾರಿ: ಎಸ್ ಬಿಐ ಅಧ್ಯಯನ ವರದಿ

ಆದರೆ ಹಣ ಸಿಗದೇ ಇದ್ದುದ್ದರ ಕುರಿತಾಗಿ ಹೆಚ್ಚು ಜನ ದೂರುಗಳನ್ನು ನೀಡಿಲ್ಲ ಎಂದು ಬ್ಯಾಂಕಿನ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ‘ನಮ್ಮ ಎಲ್ಲಾ ಶಾಖೆಗಳಿಗೂ ಅಗತ್ಯ ಪ್ರಮಾಣದಲ್ಲಿ ನೋಟುಗಳನ್ನು ಪೂರೈಸಿದ್ದೇವೆ’ ಎಂದು ಕೆನರಾ ಬ್ಯಾಂಕ್‌ ಮುಖ್ಯ ಪ್ರಧಾನ ವ್ಯವಸ್ಥಾಪಕ ಭಾವೇಂದ್ರ ಕುಮಾರ್‌ ಹೇಳಿದ್ದಾರೆ.

2016ರಲ್ಲಿ ಜನರಿಗೆ ಉಂಟಾದ ತೊಂದರೆ ಈ ಬಾರಿ ಆಗಬಾರದು ಎಂಬ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆ ಮಾಡಿಕೊಳ್ಳುವ ಕೌಂಟರ್‌ಗಳನ್ನು ತೆರೆಯಲಾಗಿದೆ. ಆದರೆ ರಿಸವ್‌ರ್‍ ಬ್ಯಾಂಕ್‌ ಗುರುತಿನ ಚೀಟಿಗಳನ್ನು ಕಡ್ಡಾಯ ಮಾಡಿಲ್ಲದಿದ್ದರೂ, ಬ್ಯಾಂಕುಗಳು ನೋಟು ಬದಲಾವಣೆಗೆ ಗುರುತಿನ ಚೀಟಿಗಳನ್ನು ಕೇಳುತ್ತಿರುವುದು ಕೊಂಚ ಗೊಂದಲಕ್ಕೆ ಕಾರಣವಾಗಿದೆ.

ನೋಟು ಬದಲಾವಣೆಗೆ ಮೊದಲ ದಿನವಾದ ಮಂಗಳವಾರ ಹೆಚ್ಚಿನ ಜನದಟ್ಟಣೆ ಕಂಡುಬಂದಿರಲಿಲ್ಲ. ಚಲಾವಣೆಯಲ್ಲಿರುವ 2000 ರು. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ ಆರ್‌ಬಿಐ, ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆ.30ರವರೆಗೆ ಅವಕಾಶ ನೀಡಿದೆ.

Follow Us:
Download App:
  • android
  • ios