Asianet Suvarna News Asianet Suvarna News

ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ, ಮೊತ್ತದಲ್ಲಿ ಇಳಿಕೆ: ಆರ್ ಬಿಐ ವರದಿ

ವಂಚನೆ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಅದರಲ್ಲೂ ಡಿಜಿಟಲೀಕರಣದ ಪರಿಣಾಮ ಇವುಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ನಿನ್ನೆ ಬಿಡುಗಡೆಯಾದ ಆರ್ ಬಿಐ ವರದಿ ಅನ್ವಯ 
2023ನೇ ಹಣಕಾಸು ಸಾಲಿನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಒಟ್ಟು ಮೊತ್ತದಲ್ಲಿ ಮಾತ್ರ ಅರ್ಧದಷ್ಟು ಇಳಿಕೆಯಾಗಿದೆ. 

Banking Sector Frauds Rose In FY23 Amount Involved Halved RBI Data anu
Author
First Published May 31, 2023, 11:57 AM IST

ನವದೆಹಲಿ (ಮೇ 31): 2023ನೇ ಆರ್ಥಿಕ ಸಾಲಿನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಆದರೆ, ವಂಚನೆ ಮೊತ್ತ ಅರ್ಧದಷ್ಟು ತಗ್ಗಿದೆ ಎಂದು ಮಂಗಳವಾರ ಆರ್ ಬಿಐ ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸಿವೆ. 2022-23ನೇ ಸಾಲಿನಲ್ಲಿ ಬ್ಯಾಂಕಿಂಗ್ ವಲಯದಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ 13,530ಕ್ಕೆ ತಲುಪಿದೆ. ಆದರೆ, ವಂಚನೆಗೊಳಗಾದ ಮೊತ್ತ ಅರ್ಧದಷ್ಟು ತಗ್ಗಿದ್ದು, 30,252 ಕೋಟಿ ರೂ.ಗೆ ಇಳಿಕೆಯಾಗಿದೆ.  ಡಿಜಿಟಲ್ ಪಾವತಿ ವರ್ಗದಲ್ಲಿ ವಂಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದು 2022-23ನೇ ಸಾಲಿನ ಆರ್ ಬಿಐ ವಾರ್ಷಿಕ ವರದಿ ತಿಳಿಸಿದೆ. ಇನ್ನು ಮೌಲ್ಯದ ಆಧಾರದಲ್ಲಿ ನೋಡಿದರೆ ಸಾಲದ ವರ್ಗದಲ್ಲಿ ವಂಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. 2021-22ನೇ ಸಾಲಿನಲ್ಲಿಒಟ್ಟು 9,097 ವಂಚನೆ ಪ್ರಕರಣಗಳು ವರದಿ ಯಾಗಿದ್ದು, ಇದರ ಮೊತ್ತ 59,819 ಕೋಟಿ ರೂ. ಇನ್ನು 2020-21ನೇ ಆರ್ಥಿಕ ಸಾಲಿನಲ್ಲಿ 7,338 ವಂಚನೆ ಪ್ರಕರಣಗಳು ವರದಿಯಾಗಿದ್ದು, ಇದರ ಮೊತ್ತ1,32,389 ಕೋಟಿ ರೂ. ಆರ್ ಬಿಐ ವರದಿ ಪ್ರಕಾರ 
2020-21ನೇ ಸಾಲಿಗೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ವಂಚನೆಗೊಳಗಾದ ಒಟ್ಟು ಮೊತ್ತದಲ್ಲಿ ಶೇ.55ರಷ್ಟು ಇಳಿಕೆಯಾಗಿದೆ. ಹಾಗೆಯೇ 2022-23ನೇ ಸಾಲಿನಲ್ಲಿ ವಂಚನೆಗೊಳಗಾದ ಒಟ್ಟು ಮೊತ್ತದಲ್ಲಿ 2021-22ನೇ ಸಾಲಿಗೆ ಹೋಲಿಸಿದರೆ ಶೇ.49ರಷ್ಟು ಇಳಿಕೆಯಾಗಿದೆ.

ವಾಟ್ಸಾಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ 6.16 ಲಕ್ಷ ಕಳೆದುಕೊಂಡ ಯುವಕ

ಬ್ಯಾಂಕ್ ಗಳಲ್ಲಿನ ವಂಚನೆ ಪ್ರಕರಣಗಳ ಪರಿಶೀಲನೆ ನಡೆಸಿದಾಗ ಕಳೆದ ಮೂರು ವರ್ಷಗಳಲ್ಲಿ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಗರಿಷ್ಠ ಸಂಖ್ಯೆಯ ವಂಚನೆ ಪ್ರಕರಣಗಳು ವರದಿಯಾಗಿವೆ. 2022-23ನೇ ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು ವಂಚನೆಗೊಳಗಾದ ಮೊತ್ತದಲ್ಲಿ ಗರಿಷ್ಠ ಪ್ರಮಾಣವನ್ನು ಹೊಂದಿವೆ ಎಂದು ವರದಿ ಹೇಳಿದೆ. ಆರ್ ಬಿಐ ಸಂಗ್ರಹಿಸಿದ ಅಂಕಿಅಂಶಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ  ನಡೆದ 1ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣಗಳು ಸೇರಿವೆ. 
ಖಾಸಗಿ ವಲಯದ ಬ್ಯಾಂಕ್ ಗಳು ವರದಿ ಮಾಡಿರುವ ಗರಿಷ್ಠ ಸಂಖ್ಯೆಯ ವಂಚನೆ ಪ್ರಕರಣಗಳಲ್ಲಿ ಸಣ್ಣ ಮೊತ್ತದ ಕಾರ್ಡ್ /ಇಂಟರ್ನೆಟ್ ವಂಚನೆಗಳು ಸೇರಿವೆ. ಇನ್ನು ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ವರದಿಯಾದ ವಂಚನೆ ಪ್ರಕರಣಗಳು ಸಾಲಕ್ಕೆ ಸಂಬಂಧಿಸಿದ್ದಾಗಿವೆ ಎಂದು ಆರ್ ಬಿಐ ತಿಳಿಸಿದೆ. ಇನ್ನು ಆ ಒಂದು ವರ್ಷದಲ್ಲಿ ವರದಿಯಾದ ವಂಚನೆ ಪ್ರಕರಣಗಳು ಈ ಹಿಂದಿನ ವರ್ಷ ಕೂಡ ನಡೆದಿರುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.

2021-22 ಹಾಗೂ 2022-23 ಸಾಲಿನಲ್ಲಿ ವರದಿಯಾದ ಪ್ರಕರಣಗಳನ್ನು ಪರಿಶೀಲಿಸಿದಾಗ ವಂಚನೆ ನಡೆದ ದಿನಾಂಕ ಹಾಗೂ ಅದರ ಪತ್ತೆ ನಡುವಿನ ಅವಧಿಯಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಆರ್ ಬಿಐ ತಿಳಿಸಿದೆ. 2021-22ನೇ ಸಾಲಿನಲ್ಲಿ ವಂಚನೆಗೊಳಗಾದ ಮೊತ್ತದಲ್ಲಿ ಶೇ.93.7ರಷ್ಟು ಅದರ ಹಿಂದಿನ ಸಾಲಿನಲ್ಲಿ ನಡೆದಿರುವುದು ಆಗಿದೆ. ಹಾಗೆಯೇ 2022-23ನೇ ಸಾಲಿನಲ್ಲಿ ವರದಿಯಾದ ಶೇ.94.5ರಷ್ಟು ವಂಚನೆ ಪ್ರಕರಣಗಳು ಅದರ ಹಿಂದಿನ ಸಾಲಿನಲ್ಲಿ ನಡೆದಿರುವುದು ಆಗಿದೆ. 

2000 ರೂ. ನೋಟು ಹಿಂಪಡೆಯುವಿಕೆ ಬಳಿಕ ಎಸ್‌ಬಿಐನಲ್ಲಿ ಜಮೆಯಾಯ್ತು 14 ಸಾವಿರ ಕೋಟಿ, 3,000 ಕೋಟಿ ರೂ. ಬದಲಾವಣೆ

2022-23ನೇ ಸಾಲಿನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು 3,405 ವಂಚನೆ ಪ್ರಕರಣಗಳನ್ನು ವರದಿ ಮಾಡಿವೆ. ಇದರಲ್ಲಿ 21,125 ಕೋಟಿ ರೂ. ಸೇರಿತ್ತು. ಇನ್ನು ಖಾಸಗಿ ಬ್ಯಾಂಕ್ ಗಳು 8,932 ಪ್ರಕರಣಗಳನ್ನು ವರದಿ ಮಾಡಿದ್ದು, ಇದರಲ್ಲಿ 8,727 ಕೋಟಿ ರೂ. ಸೇರಿತ್ತು. ಇನ್ನು ಉಳಿದ ಮೊತ್ತ ವಿದೇಶಿ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು, ಕಿರು ಹಣಕಾಸಿನ ಬ್ಯಾಂಕ್ ಗಳುಹಾಗೂ ಪೇಮೆಂಟ್ ಬ್ಯಾಂಕ್ ಗಳಿಗೆ ಸಂಬಂಧಿಸಿದ್ದಾಗಿವೆ.  ಅಂಕಿಅಂಶಗಳ ಅನ್ವಯ ವಂಚನೆಗೊಳಗಾದ ಒಟ್ಟು 30,252 ಕೋಟಿ ರೂ.ಗಳಲ್ಲಿ ಶೇ.95 ಅಥವಾ 28,792 ಕೋಟಿ ರೂ. ಸಾಲಗಳಿಗೆ ಸಂಬಂಧಿಸಿದ್ದಾಗಿದೆ. 
 

Follow Us:
Download App:
  • android
  • ios