44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ಬ್ಲಾಕ್ ಫಂಗಸ್ ಇಂಜೆಕ್ಷನ್ ಮೇಲಿನ ಜಿಎಸ್‌ಟಿ ಸಂಪೂರ್ಣ ಕಡಿತ ಕೋವಿಡ್ ಸಂಬಂಧಿತ ಉಪಕರಣ ಮೇಲಿನ ತೆರಿಗೆ ಕಡಿತ  

ನವದೆಹಲಿ(ಜೂ.12):  ಕೊರೋನಾ ವೈರಸ್ ಚಿಕಿತ್ಸೆಗಾಗಿ ಬಳಸುವ ಉಪಕರಣ, ಔಷಧಿ, ಇಂಜೆಕ್ಷನ್ ಮೇಲಿನ ತೆರಿಗೆ ನಿರ್ಧರಿಸಲು ಕರೆದಿದ್ದ 44ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ದೇಶದಲ್ಲಿ ಹೆಚ್ಚಾಗುತ್ತಿರುವ ಬ್ಲಾಕ್ ಫಂಗಸ್ ಚಿಕಿತ್ಸೆಯ ಚುಚ್ಚು ಮದ್ದಿನ ಮೇಲಿನ GST(ತೆರಿಗೆ)ಯನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ.

"

ಕೋವಿಡ್‌ ಅಬ್ಬರವಿದ್ದರೂ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

ಕೌನ್ಸಿಲ್ ಸಭೆ ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಮುಖ ನಿರ್ಧಾರಗಳನ್ನು ಘೋಷಿಸಿದರು. ಕೋವಿಡ್ ಸಂಬಂಧಿತ ಉಪಕರಣಗಳ ಮೇಲಿನ ತೆರಿಗೆ ಕಡಿತಗೊಳಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಈ ಸಭೆಯಲ್ಲಿನ ಪ್ರಮುಖ ನಿರ್ಧಾರಗಳ ವಿವರ ಇಲ್ಲಿದೆ.

  • ಕೊರೋನಾ ಚಿಕಿತ್ಸೆ ಸಂಬಂಧಪಟ್ಡ ಉಪಕರಣಗಳ ಮೇಲೆ GST ಕಡಿತ
  • ಬ್ಲಾಕ್ ಫಂಗಸ್ ಕಾಯಿಲೆ ಚುಚ್ಚುಮದ್ದಿನ ಮೇಲೆ ಯಾವುದೇ GST ಇಲ್ಲ
  • ಸೋಂಕಿತರ ಚಿಕಿತ್ಸೆಗೆ ಬಳಸುವ ವೆಂಟಿಲೇಟರ್ ಮೇಲಿನ GST ಶೇ 12 ರಿಂದ ಶೇ 5 ಕ್ಕೆ ಇಳಿಕೆ
  • ಬೇಡಿಕೆ ಹೆಚ್ಚಿರುವ ಆ್ಯಂಬುಲೆನ್ಸ್ ಮೇಲಿನ GST ಶೇ 12 ಕ್ಕೆ ಇಳಿಕೆ
  • ಎಲೆಕ್ಟ್ರಿಕ್ ಫರ್ನಾನೆನ್ಸ್ ಮತ್ತು ಟೆಂಪರೇಚರ್ ಪರಿಶೀಲನಾ ಸಾಧನಗಳ ಮೇಲಿನ GST ಶೇ.5ಕ್ಕೆ ಇಳಿಕೆ
  • ರೆಮ್ಡಿಸಿವಿರ್ ಲಸಿಕೆ ಮೇಲಿನ GST ದರವನ್ನು ಶೇ.12 ರಿಂದ 5ಕ್ಕೆ ಇಳಿಕೆ
  • ಟೊಸಿಲಿಜುಮಾಬ್, ಆಂಫೊಟೆರಿಸಿನ್ ಔಷಧ ಮೇಲೆ ಯಾವುದೇ ತೆರಿಗೆ ಇಲ್ಲ
  • ಲಸಿಕೆಯ ಮೇಲೆ ಶೇ.5 ರಷ್ಟು ಜಿಎಸ್ ಟಿ ಮುಂದುವರಿಕೆ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಲಸಿಕೆ ನೀತಿ ಪ್ರಕಾರ ಶೇಕಡಾ 75 ರಷ್ಟು ಲಸಿಕೆಯನ್ನು ಕೇಂದ್ರ ಖರೀದಿಸಿ ರಾಜ್ಯಗಳಿಗೆ ಹಂಚಲಿದೆ. ಶೇಕಡಾ 75 ರಷ್ಟು ಲಸಿಕೆ ಖರೀದಿಯಲ್ಲಿ ಕೇಂದ್ರ ಸರ್ಕಾರ ಜಿಎಸ್‌ಟಿ ಪಾವತಿಸಲಿದೆ. ಈ ಜಿಎಸ್‌ಟಿ ಮೊತ್ತವನ್ನು ರಾಜ್ಯಗಳಿಗೆ ಹಂಚಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Scroll to load tweet…

3 ತಿಂಗಳಲ್ಲಿ 20124 ಕೋಟಿ ರು. ಜಿಎಸ್‌ಟಿ ವಂಚನೆ ಪತ್ತೆ!.

ಕೋವಿಡ್ ಸಂಬಂಧಿತ ಉಪಕರಣ, ಔಷಧಿಗಳ ಮೇಲಿನ ಜಿಎಸ್‌ಟಿ ಕಡಿತ ಕುರಿತು ಪರಿಶೀಲಿಸಲು ಜಿಎಸ್‌ಟಿ ಕೌನ್ಸಿಲ್ ಸಚಿವರ ಸಮಿತಿಯೊಂದನ್ನ ರಚಿಸಿತ್ತು. ಈ ಸಮಿತಿ ಕೌನ್ಸಿಲ್‍ಗೆ ವರದಿ ನೀಡಿದೆ. ಈ ವರದಿಯ ಆಧಾರದಲ್ಲಿ ಇದೀಗ ಮಹತ್ವದ ನಿರ್ಧಾರಗಳ ಕೈಗೊಳ್ಳಲಾಗಿದೆ.