Asianet Suvarna News Asianet Suvarna News

3 ತಿಂಗಳಲ್ಲಿ 20124 ಕೋಟಿ ರು. ಜಿಎಸ್‌ಟಿ ವಂಚನೆ ಪತ್ತೆ!

2020ರ ನ.9ರಿಂದ 2021ರ ಜ.31ರ ಅವಧಿಯಲ್ಲಿ 20124 ಕೋಟಿ ರು. ಮೌಲ್ಯದ ಜಿಎಸ್‌ಟಿ ವಂಚನೆ| ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ

GST fraud worth Rs 20124 crore detected during Nov 9 Jan 31  FM to Rajya Sabha pod
Author
Bangalore, First Published Mar 10, 2021, 12:17 PM IST

ನವದೆಹಲಿ(ಮಾ.10): 2020ರ ನ.9ರಿಂದ 2021ರ ಜ.31ರ ಅವಧಿಯಲ್ಲಿ 20124 ಕೋಟಿ ರು. ಮೌಲ್ಯದ ಜಿಎಸ್‌ಟಿ ವಂಚನೆ ಪ್ರಕರಣಗಳನ್ನು ಬಯಲಿಗೆಳೆಯಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಗಳವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ನಕಲಿ/ ಬೋಗಸ್‌ ಇನ್ವಾಯ್‌್ಸಗಳನ್ನು ಸೃಷ್ಟಿಸಿ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆಯಲು ನಡೆಯುತ್ತಿದ್ದ ಅಕ್ರಮ ಪತ್ತೆಹಚ್ಚಲು 2020ರ ನ.9ರಿಂದ ವಿಶೇಷ ಅಭಿಯಾನ ಆರಂಭಿಸಲಾಗಿತ್ತು. ಈ ವೇಳೆ ಅಂಥ 2692 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳ ಒಟ್ಟು ಮೊತ್ತ 20124 ಕೋಟಿ ರು.ಗಳಾಗಿದ್ದವು ಎಂದು ಮಾಹಿತಿ ನೀಡಿದ್ದಾರೆ. ಇದೇ ಅವದಿಯಲ್ಲಿ 282 ಜನರನ್ನು ಬಂಧಿಸಿ ಅವರಿಂದ 857 ಕೋಟಿ. ರು.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಕಳೆದ ಏಪ್ರಿಲ್‌- ಡಿಸೆಂಬರ್‌ ಅವಧಿಯಲ್ಲಿ 2223 ಕೋಟಿ ರು.ಮೊತ್ತದ ಅಘೋಷಿತ ಆದಾಯವನ್ನು ಪತ್ತೆಹಚ್ಚಲಾಗಿದೆ. ಇದೇ ಅವಧಿಯಲ್ಲಿ 250 ಸಮೂಹಗಳ ಮೇಲೆ ದಾಳಿ ನಡೆಸಿದ 6500 ಕೋಟಿ ರು.ಮೊತ್ತದ ಆಸ್ತಿ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios