Asianet Suvarna News Asianet Suvarna News

ಕೋವಿಡ್‌ ಅಬ್ಬರವಿದ್ದರೂ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ!

* ಕೋವಿಡ್‌ ಅಬ್ಬರ ಇದ್ದರೂ 1.02 ಲಕ್ಷ ಕೋಟಿ ರೂ ಜಿಎಸ್‌ಟಿ

* ಸತತ 8ನೇ ಸಲ 1 ಲಕ್ಷ ಕೋಟಿಗಿಂತ ಅಧಿಕ ಸಂಗ್ರಹ

* ಕೊರೋನಾದಿಂದ ಆರ್ಥಿಕತೆಗೆ ಏಟು ಬಿದ್ದಿಲ್ಲ ಎಂಬ ಸಂಕೇತ

GST collection in May slides but still holds above Rs 1 lakh crore mark pod
Author
Bangalore, First Published Jun 6, 2021, 7:45 AM IST

ನವ​ದೆ​ಹ​ಲಿ(ಜೂ.06): ಕೋವಿಡ್‌ 2ನೇ ಅಲೆಯ ತೀವ್ರ ಹೊಡೆ​ತದ ಹೊರ​ತಾ​ಗಿಯೂ, ಮೇ ತಿಂಗ​ಳಿ​ನಲ್ಲೂ ಕೇಂದ್ರ ಸರ್ಕಾ​ರಕ್ಕೆ ಜಿಎ​ಸ್‌​ಟಿ​ಯಿಂದ​ 1.02 ಲಕ್ಷ ಕೋಟಿ ರು. ವರ​ಮಾನ ಬಂದಿದೆ. ಇದ​ರೊಂದಿಗೆ ಜಿಎ​ಸ್‌ಟಿ ಮೂಲ​ದಿಂದ ಸತತ 8 ತಿಂಗ​ಳು​ಗ​ಳಿಂದ ಕೇಂದ್ರ ಸರ್ಕಾ​ರಕ್ಕೆ 1 ಲಕ್ಷ ಕೋಟಿ ರು.ಗಿಂತ ಹೆಚ್ಚಿನ ಆದಾಯ ಬಂದಂತಾ​ಗಿದೆ.

ಆದರೆ ಕಳೆದ ತಿಂಗಳ ಜಿಎ​ಸ್‌ಟಿ ವರ​ಮಾನ 1.41 ಲಕ್ಷ ಕೋಟಿ ರು.ಗೆ ಹೋಲಿ​ಸಿ​ದರೆ, ಮೇ ತಿಂಗಳ ಆದಾ​ಯ​ದಲ್ಲಿ 39 ಸಾವಿರ ಕೋಟಿ ರು. ಇಳಿ​ಕೆ​ಯಾ​ಗಿದೆ. ಆದಾಗ್ಯೂ, ಕಳೆದ ವರ್ಷದ ಮೇ ತಿಂಗಳ 62,009 ಕೋಟಿ ರು. ಜಿಎ​ಸ್‌ಟಿ ಸಂಗ್ರ​ಹಕ್ಕೆ ಹೋಲಿ​ಸಿ​ದರೆ, ಈ ವರ್ಷದ ಮೇ ತಿಂಗಳ ಆದಾ​ಯವು ಶೇ.65ರಷ್ಟುಹೆಚ್ಚಾ​ಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಳೆದ ವರ್ಷ ಕೊರೋನಾ ಹಾವಳಿ ನಿಯಂತ್ರ​ಣ​ಕ್ಕಾಗಿ ದೇಶಾ​ದ್ಯಂತ ಲಾಕ್‌ಡೌನ್‌ ಹೇರಿದ್ದ ಕಾರಣ ಆರ್ಥಿಕ ಚಟು​ವ​ಟಿ​ಕೆ​ಗಳು ಸ್ತಬ್ಧ​ವಾ​ಗಿದ್ದವು. ಇದ​ರಿಂದ ಜಿಎ​ಸ್‌ಟಿ ಆದಾ​ಯ​ದಲ್ಲಿ ಖೋತಾ ಆಗಿತ್ತು. ಈ ಸಲ ದೇಶವ್ಯಾಪಿ ಲಾಕ್‌ಡೌನ್‌ ಹೇರದೇ ಸೋಂಕು ಹೆಚ್ಚಿರುವ ಸ್ಥಳಗಳಲ್ಲಿ ಮಾತ್ರ ನಿರ್ಬಂಧ ಹೇರಲಾಗಿದೆ ಹಾಗೂ ಹಲವು ಚಟುವಟಿಕೆಗೆ ಅನುಮತಿಸಲಾಗಿದೆ. ಹೀಗಾಗಿ ಜಿಎಸ್‌ಟಿ ಸಂಗ್ರಹ ಸಮತೋಲನ ಕಾಯ್ದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

Follow Us:
Download App:
  • android
  • ios