Amazon Republic Day Sale, ಐಫೋನ್ 12, ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!

  • ರಿಪಬ್ಲಿಕ್ ಡೇ ಸೇಲ್ ಆಫರ್ ಘೋಷಿಸಿದ ಅಮೆಜಾನ್
  • ಆಫರ್ ಜನವರಿ 20ರ ವರೆಗೆ ಮಾತ್ರ ಲಭ್ಯ
  • ಭಾರತದ 72ನೇ ವರ್ಷದ ಗಣರಾಜ್ಯೋತ್ಸವ ಹಬ್ಬದ ಪ್ರಯುಕ್ತ ಆಫರ್
Great Republic Day Sale 2022 Amazon announces Huge discount offers on latest smartphones ckm

ನವದೆಹಲಿ(ಜ.16):  ಭಾರತ 72ನೇ ಗಣರಾಜ್ಯೋತ್ಸವ(Republic Day Celebration) ಸಂಭ್ರಮದಲ್ಲಿದೆ. ಇದರ ಪ್ರಯುಕ್ತ ಭಾರತದ ದಿಗ್ಗಜ ಇ ಕಾಮರ್ಸ್(E Commerce) ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಘೋಷಿಸಿದೆ. ಈ ಬಾರಿ ಐಫೋನ್, ಸ್ಯಾಮ್ಸಂಗ್ ಸೇರಿದಂತೆ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಜನವರಿ 17 ರಿಂದ ಜನವರಿ 20ರ ವರೆಗೆ ರಿಪಬ್ಲಿಕ್ ಸೇಲ್ ಆಫರ್ ಚಾಲ್ತಿಯಲ್ಲಿರಲಿದೆ. 

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ(Amazon Republic Day Sale) ಸ್ಮಾರ್ಟ್‌ಫೋನ್, ಎಲೆಕ್ಟ್ರಾನಿ ವಸ್ತುಗಳ ಮೇಲೆ ಭರ್ಜರಿ ಡಿಸ್ಕೌಂಟ್(Discounts) ನೀಡಲಾಗಿದೆ. ಲೇಟೆಸ್ಟ್ ಸ್ಮಾರ್ಟ್‌ಫೋನ್ ಮೇಲೆ ಶೇಕಡಾ 40 ರಷ್ಟು ಡಿಸ್ಕೌಂಟ್ ನೀಡಲಾಗಿದೆ. ಇಷ್ಟೇ ಅಲ್ಲ ಗ್ರಾಹಕರು ತಮ್ಮ ಫೋನ್ ಎಕ್ಸ್‌ಚೇಂಜ್ ಮಾಡಲು ಬಯಸಿದರೂ ಅಷ್ಟೇ ಉತ್ತಮ ಡಿಸ್ಕೌಂಟ್ ನೀಡಲಾಗಿದೆ. ಕಾರಣ ಡಿಸ್ಕೌಂಟ್ ಜೊತೆಗೆ 16,000 ರೂಪಾಯಿ ಎಕ್ಸ್‌ಚೇಂಜ್ ಬೋನಸ್ (Bouns) ಕೂಡ ನೀಡಲಾಗಿದೆ.

Amazon Savings Days: Xiaomi, OnePlus ಸ್ಮಾರ್ಟ್‌ಫೋನ್‌ ಮೇಲೆ ರೂ 5000 ವರೆಗೆ ರಿಯಾಯಿತಿ!

ಇನ್ನು ಬ್ಯಾಂಕ್ ಆಫರ್(Bank Offers) ಕೂಡ ನೀಡಲಾಗಿದೆ. ಪ್ರತಿ ಖರೀದಿ ಮೇಲೆ SBI ಕ್ರೆಡಿಟ್ ಕಾರ್ಡ್ ಮೂಲಕ ಶೇಕಡಾ 10 ರಷ್ಟು ಡಿಸ್ಕೌಂಟ್ ಆಫರ್ ಕೂಡ ಲಭ್ಯವಿದೆ. ಇನ್ನು ಬಜಾಜ್ ಫಿನ್‌ ಸರ್ವೀಸ್ ಗ್ರಾಹಕರು ಯಾವುದೇ ಬಡ್ಡಿ ಇಲ್ಲದೆ ಕಂತಿನ ಸೌಲಭ್ಯ ಪಡೆಯಲಿದ್ದಾರೆ. ಅಮೆಜಾನ್ ಫೆ, ಐಸಿಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು ಹೆಚ್ಚುವರಿ ಆಫರ್ ಪಡೆಯಲಿದ್ದಾರೆ.

Vivo Y33T Launched: 8GB RAM, 50MP ಕ್ಯಾಮೆರಾ: ವಿವೋ ಸ್ಮಾರ್ಟ್‌ಫೋನ್ ಸೇಲ್‌ ಇಂದಿನಿಂದ ಆರಂಭ!

ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಆಫರ್ ಮಾಹಿತಿ:

  • ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಮೂಲಕ ಐಫೋನ್ 12 ಖರೀದಿಸುವ ಗ್ರಾಹಕರಿಗೆ ಬಂಪರ್. ಕಾರಣ ಐಫೋನ್ 12 56,999 ರೂಪಾಯಿಗಳಲ್ಲಿ ಲಭ್ಯವಿದೆ.
  • ಇತ್ತೀಚೆಗೆ ಸ್ಯಾಮ್ಸಂಗ್ ಬಿಡುಗಡೆ ಮಾಡಿದ ಫ್ಲಾಶ್‌ಶಿಪ್ ಸೀರಿಸ್‌ನ ಸ್ಯಾಮ್ಸಂಗ್ ಗ್ಯಾಲೆಕ್ಸಿ S21 FE ಸ್ಮಾರ್ಟ್‌ಫೋನ್ 54,999 ರೂಪಾಯಿಗಳಲ್ಲಿ ಲಭ್ಯವಿದೆ. ಇದರ ಜೊತೆಗೆ 5,000 ರೂಪಾಯಿ ಹೆಚ್ಚುವರಿ ಕೂಪನ್ ಲಭ್ಯವಿದೆ. ಈ ಕೂಪನ್ ಅಪ್ಲೈ ಮಾಡಿದರೆ ಸ್ಯಾಮ್ಸಂಗ್ ಗ್ಯಾಲೆಕ್ಸಿ S21 FE  ಬೆಲೆ  49,999 ರೂಪಾಯಿಗೆ ಇಳಿಕೆಯಾಗಲಿದೆ. ಇನ್ನು  SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 10 ರಷ್ಟು ಡಿಸ್ಕೌಂಟ್ ಸಿಗಲಿದೆ. ಇದು ಸರಿಸುಮಾರು 1,250 ರೂಪಾಯಿ ಮತ್ತೆ ಡಿಸ್ಕೌಂಟ್ ಆಗಲಿದೆ.
  • ಸಾಮ್ಸಂಗ್  S20 FE 5G ಸ್ಮಾರ್ಟ್‌ಫೋನ್ ಬೆಲೆ 36,990 ರೂಪಾಯಿ ಮಾತ್ರ. ಇದರ ಜೊತೆಗೆ ಕೆಲ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,500 ರೂಪಾಯಿ ಡಿಸ್ಕೌಂಟ್ ಸಿಗಲಿದೆ.
  • ಅಮೆಜಾನ್ ಗ್ರೇಟ್ ರಿಪಬ್ಲಿಕ್ ಸೇಲ್ ಮೂಲಕ ರೆಡ್‌ಮಿ ನೋಟ್  10S ಬೆಲೆ 15,999 ರೂಪಾಯಿ ಮಾತ್ರ. SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 1,250. ರೂಪಾಯಿ ಡಿಸ್ಕೌಂಟ್ ಆಗಲಿದೆ.
  • 39,999 ರೂಪಾಯಿ ಇದ್ದ ವಿವೋ  X50 ಫೋನ್ ಭರ್ಜರಿ ಡಿಸ್ಕೌಂಟ್ ಆಫರ್‌ನಿಂದ  30,467 ರೂಪಾಯಿ ಆಗಿದೆ. ಇದರ ಜೊತೆಗೆ SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇಕಡಾ 10 ರಷ್ಟು ಹೆಚ್ಚುವರಿ ಡಿಸ್ಕೌಂಟ್ ಪಡೆಯಲಿದ್ದಾರೆ.
  • ಒನ್‌ಪ್ಲಸ್ ನೊರ್ಡ್ CE ಫೋನ್ ಬೆಲೆ 24,999 ರೂಪಾಯಿ ಮಾತ್ರ. ಈ ಫೋನ್ ಖರೀದಿಸುವ ಗ್ರಾಹಕರಿಗೆ 1,000 ಹೆಚ್ಚುವರಿ ಕೂಪನ್ ಡಿಸ್ಕೌಂಟ್ ಸಿಗಲಿದೆ. ಹೀಗಾಗಿ  ಒನ್‌ಪ್ಲಸ್ ನೊರ್ಡ್ CE ಫೋನ್ ಬೆಲೆ 23,999 ರೂಪಾಯಿಗೆ ಇಳಿಕೆ ಆಗಲಿದೆ. ಇದರ ಜೊತೆಗೆ SBI ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರು ಶೇಕಡಾ 10 ರಷ್ಟು ಡಿಸ್ಕೌಂಟ್ ಪಡೆಯಲಿದ್ದಾರೆ.
  • ಇತ್ತೀಚೆಗೆ ಬಿಡುಗಡೆಯಾದ ಸ್ಯಾಮ್ಸಂಗ್ ಗ್ಯಾಲೆಕ್ಸಿ M52 5G ಹಾಗೂ ಗ್ಯಾಲೆಕ್ಸಿ M32 5G ಸ್ಮಾರ್ಟ್‌ಫೋನ್‌ಗೆ 7,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. 
  • iQOO Z3 5G ಬೆಲೆ 17,990 ರೂಪಾಯಿಗೆ ಇಳಿಕೆ ಮಾಡಲಾಗಿದೆ. iQOO Z5 5G ಫೋನ್‌ಗೆ 7,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.
  • ಒನ್‌ಪ್ಲಸ್ 9 ಸೀರಿಸ್ 5G ಫೋನ್ ಬೆಲೆಯನ್ನು 36,999 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಇದರ ಜೊತೆಗೆ ಬ್ಯಾಂಕ್ ಆಫರ್ ಕೂಡ ಲಭ್ಯವಿದೆ. 
Latest Videos
Follow Us:
Download App:
  • android
  • ios