5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Jul 2018, 9:41 PM IST
Government to inject Rs 113 billion rupees in five state banks in about a week
Highlights

5 ಬ್ಯಾಂಕ್ ಗಳಿಗೆ 113 ಬಿಲಿಯನ್ ಪ್ಯಾಕೇಜ್

ಪ್ಯಾಕೇಜ್ ಬಿಡುಗಡೆಗೆ ನಿರ್ಧರಿಸಿದ ಕೇಂದ್ರ 

ಪಿಎನ್‌ಬಿ ಗೆ  28.16 ಬಿಲಿಯನ್ ರೂ. 

ಸಂಸತ್ ನಿಂದ ಪ್ರತ್ಯೇಕ ಅನುಮೋದನೆ ಅಗತ್ಯ

ನವದೆಹಲಿ(ಜು.22): ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಒಟ್ಟು 5 ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ 113 ಬಿಲಿಯನ್ ರೂ. ಪ್ಯಾಕೇಜ್ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಒಂದು ವಾರದಲ್ಲಿ 5 ಸ್ಟೇಟ್ ಬ್ಯಾಂಕ್‌ಗಳಿಗೆ ಒಟ್ಟು 113.36 ಬಿಲಿಯನ್ ರೂಪಾಯಿ (1.65 ಬಿಲಿಯನ್ ಡಾಲರ್) ನಷ್ಟು ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ವೊಂದಕ್ಕೆ 28.16 ಬಿಲಿಯನ್ ರೂ. ನಷ್ಟು ಬಂಡಾವಳ ಹೂಡಿಕೆ ಮಾಡಲಾಗುತ್ತದೆ. 

ಜೊತೆಗೆ ಕಾರ್ಪೊರೇಷನ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಆಂಧ್ರ ಬ್ಯಾಂಕ್ ಹಾಗೂ ಅಲ್ಲಹಾಬಾದ್ ಬ್ಯಾಂಕ್‌ಗಳಿಗೂ ಹೊಸದಾಗಿ ಪ್ಯಾಕೇಜ್ ಬಿಡುಗಡೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಈ ಹೂಡಿಕೆ ಕಳೆದ ವರ್ಷ ಘೋಷಿಸಲಾಗಿದ್ದ 2.11 ಟ್ರಿಲಿಯನ್ ರೂಪಾಯಿ ಪ್ಯಾಕೇಜ್‌ನ ಭಾಗವಾಗಿದ್ದು, ಸಂಸತ್ತಿನ ಪ್ರತ್ಯೇಕ ಅನುಮೋದನೆ ಅಗತ್ಯವಿದೆ. 

loader