ನವದೆಹಲಿ(ಡಿ.31): ಸ್ವದೇಶಿ ನಿರ್ಮಿತ ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ವಿದೇಶಕ್ಕೆ ರಫ್ತು ಮಾಡುವ ಮಹತ್ವದ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಅಲ್ಲದೆ, ಈ ಸಂಬಂಧದ ಪ್ರಸ್ತಾವಗಳ ಶೀಘ್ರ ಮಂಜೂರಾತಿಗೆ ಸಮಿತಿ ರಚಿಸಲು ಕೂಡ ತೀರ್ಮಾನಿಸಲಾಗಿದೆ. 9 ದೇಶಗಳು ಈ ಕ್ಷಿಪಣಿ ಖರೀದಿಗೆ ಒಲವು ತೋರಿಸಿವೆ ಎನ್ನಲಾಗಿದೆ.

ಈ ವಿಷಯವನ್ನು ಟ್ವೀಟರ್‌ನಲ್ಲಿ ಪ್ರಕಟಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್‌, ‘ರಫ್ತಾಗಲಿರುವ ಆಕಾಶ್‌ ಕ್ಷಿಪಣಿ ವ್ಯವಸ್ಥೆಯು ಈಗ ಭಾರತೀಯ ಸೇನೆಯಲ್ಲಿ ಅಳವಡಿಕೆ ಆಗಿರುವ ವ್ಯವಸ್ಥೆಗಿಂತ ಭಿನ್ನವಾಗಿರಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಆಕಾಶ್‌ ವ್ಯವಸ್ಥೆ ಶೇ.96ರಷ್ಟುಸ್ವದೇಶೀ ನಿರ್ಮಿತ. ಇದು ಭೂಮಿಯಿಂದ ಆಗಸಕ್ಕೆ ನೆಗೆಯಬಲ್ಲ 25 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ. ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.

‘ಆತ್ಮನಿರ್ಭರ ಭಾರತ ಆಂದೋಲನದ ಅಡಿಯಲ್ಲಿ ಭಾರತದ ರಕ್ಷಣಾ ಶಕ್ತಿ ಹೆಚ್ಚುತ್ತಿದೆ. ಇದಕ್ಕೆ ಅನುಗುಣವಾಗಿ ಆಕಾಶ್‌ ಕ್ಷಿಪಣಿ ರಫ್ತಿಗೆ ಹಾಗೂ ಪ್ರಸ್ತಾವಗಳ ತ್ವರಿತ ಅನುಮೋದನೆಗೆ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. ಆಕಾಶ್‌ ವ್ಯವಸ್ಥೆ ಶೇ.96ರಷ್ಟುಸ್ವದೇಶೀ ನಿರ್ಮಿತ. ಇದು ಭೂಮಿಯಿಂದ ಆಗಸಕ್ಕೆ ನೆಗೆಯಬಲ್ಲ 25 ಕಿ.ಮೀ. ವ್ಯಾಪ್ತಿಯ ಕ್ಷಿಪಣಿ’ ಎಂದು ರಾಜನಾಥ್‌ ಹೇಳಿದ್ದಾರೆ.

‘ಈವರೆಗೂ ಭಾರತವು ರಕ್ಷಣಾ ಬಿಡಿಭಾಗಗಳನ್ನು ರಫ್ತು ಮಾಡುತ್ತಿತ್ತು. ಆದರೆ ಕ್ಷಿಪಣಿ ವ್ಯವಸ್ಥೆಯಂಥ ದೊಡ್ಡ ರಫ್ತಿನ ಹಿರಿಮೆಗೆ ಇನ್ನು ಭಾರತವು ಪಾತ್ರವಾಗಲಿದೆ. ದೇಶವು 5 ಶತಕೋಟಿ ಡಾಲರ್‌ ರಕ್ಷಣಾ ರಫ್ತು ಗುರಿ ಹೊಂದಿದೆ’ ಎಂದಿದ್ದಾರೆ.

ಆಕಾಶ್‌ ಕ್ಷಿಪಣಿ ವ್ಯವಸ್ಥೆಯನ್ನು ಭಾರತೀಯ ರಕ್ಷಣಾ ಸಂಶೋಧನಾ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.