ಮನೆಯಲ್ಲಿ ಹೆಚ್ಚಾದರೆ ಚಿನ್ನ..!  ಹೌದು, ಚಿನ್ನ ಮನೆಯಲ್ಲಿದ್ದರೆ ಐಶ್ವರ್ಯ ಇದ್ದಂತೆ ಅನ್ನೋ ಮಾತಿದೆ. ಹಾಗಂತ ಎಷ್ಟು ಬೇಕಾದರು ಚಿನ್ನ ಇಟ್ಟುಕೊಳ್ಳುವಂತಿಲ್ಲ.ಹಣವಿದೆ, ಖರೀದಿಸುವ  ಶಕ್ತಿ ಇದೆ ಅಂದರೂ ಗರಿಷ್ಠ ಇಂತಿಷ್ಟೆ ಪ್ರಮಾಣದ ಚಿನ್ನ ಇಟ್ಟುಕೊಳ್ಳಬೇಕು ಅನ್ನೋ ನಿಯಮವಿದೆ.

ಬೆಂಗಳೂರು(ಏ.09): ಮನೆಯಲ್ಲಿ ಎಷ್ಟು ಪ್ರಮಾಣದ ಚಿನ್ನ ಇಟ್ಟುಕೊಳ್ಳಬಹುದು? ನಮ್ಮ ಹಣ, ನಮ್ಮ ಸಾಮರ್ಥ್ಯ, ಎಷ್ಟುಬೇಕಾದರೂ ಇಟ್ಟುಕೊಳ್ಳುತ್ತೇನೆ ಎಂದರೆ ಸಂಕಷ್ಟ ತಪ್ಪಿದ್ದಲ್ಲ. ಕಾರಣ ಸರ್ಕಾರದ ನಿಯಮದ ಪ್ರಕಾರ ಇಂತಿಷ್ಟೆ ಚಿನ್ನ ಇಟ್ಟುಕೊಳ್ಳಬೇಕು ಅನ್ನೋ ನಿಯಮವಿದೆ. ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ. ಇದು ಚುನಾವಣಾ ಸಮೀಪಿಸುತ್ತಿರುವ ಕರ್ನಾಟಕ ಅಥವಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ರಾಜ್ಯಳಿಗೆ ಮಾತ್ರವಲ್ಲ. ಚುನಾವಣೆ ಇದ್ದರೂ, ಇಲ್ಲದಿದ್ದರೂ, ಒಂದು ಮನೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಚಿನ್ನ ಇಡುವಂತಿಲ್ಲ. 

ಮನೆಯಲ್ಲಿ ಚಿನ್ನದ ಪ್ರಮಾಣ ಹಾಗೂ ಇರುವ ಸದಸ್ಯರ ಸಂಖ್ಯೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಮದುವೆಯಾದ ಮಹಿಳೆ, ಮದುವೆಯಾಗ ಯುವತಿಗೂ ನಿಯಮದಲ್ಲಿ ವ್ಯತ್ಯಾಸವಿದೆ. ಪುರುಷರಿಗೂ ಚಿನ್ನ ಇಟ್ಟುಕೊಳ್ಳುವ ಹಕ್ಕಿನಲ್ಲಿ ವ್ಯತ್ಯಾಸವಿದೆ. ಮದುವೆಯಾದ ಮಹಿಳೆಗೆ ಮನೆಯಲ್ಲಿ 500 ಗ್ರಾಂ ಚಿನ್ನ ಇಟ್ಟುಕೊಳ್ಳಲು ಅವಕಾಶವಿದೆ. ಮದುವೆಯಾಗದ ಯುವತಿಗೆ ಮನೆಯಲ್ಲಿ ಗರಿಷ್ಠ 250 ಗ್ರಾಂ ಚಿನ್ನ ಇಟ್ಟುಕೊಳ್ಳುವ ಅವಕಾಶವಿದೆ. ಮನೆಯ ಪುರಷ ಸದಸ್ಯನ ಚಿನ್ನದ ಮಿತಿ ಗರಿಷ್ಠ 100 ಗ್ರಾಂ ದಾಟುವಂತಿಲ್ಲ.

Gold Silver Price Today: ಭಾನುವಾರ ಆಭರಣ ಕೊಳ್ಳೋ ಪ್ಲ್ಯಾನ್‌ ಇದ್ಯಾ..? ಚಿನ್ನ, ಬೆಳ್ಳಿ ದರ ಹೀಗಿದೆ..

ಅಧಿಕಾರಿಗಳು ದಾಳಿ ಮಾಡಿದಾಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಚಿನ್ನ ಪತ್ತೆಯಾದರೆ ವಶಕ್ಕೆ ಪಡೆದುಕೊಳ್ಳುವ ಅಧಿಕಾರವಿದೆ. ಆದರೆ ದಾಳಿ ವೇಳೆ ಮನೆಯಲ್ಲಿರುವ ಚಿನ್ನ ನಗದಿತ ಪ್ರಮಾಣದ ಒಳಗಿದ್ದರೆ ವಶಪಡಿಸುವಂತಿಲ್ಲ. ಆದರೆ ಅಧಿಕಾರಿಗಳು ಬಯಸಿದರೆ ಈ ಚಿನ್ನಕ್ಕೆ ದಾಖಲೆ ಒದಗಿಸಬೇಕಾಗುತ್ತದೆ. ಹೀಗಾಗಿ ಚಿನ್ನ ಐಶ್ವರ್ಯ, ಸಂಪತ್ತು ಎಂದು ಎಷ್ಟು ಬೇಕಾದರೂ ಇಟ್ಟುಕೊಳ್ಳುವಂತಿಲ್ಲ. 

ಭಾರತ ಅತೀ ಹೆಚ್ಚಿ ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದೆ. ಭಾರತದಲ್ಲಿ ಚಿನ್ನಕ್ಕೆ ಅತ್ಯಂತ ಪ್ರಾಮುಖ್ಯತೆ ಇದೆ. ಹೀಗಾಗಿ ಆಮದಿನ ಪ್ರಮಾಣವೂ ಹೆಚ್ಚಾಗಿದೆ. 2022ರಲ್ಲಿ ಭಾರತ ಅತೀ ಹೆಚ್ಚು ಚಿನ್ನ ಆಮದು ಮಾಡಿಕೊಂಡ 4ನೇ ದೇಶವಾಗಿದೆ. ಬರೋಬ್ಬರಿ 31.25 ಟನ್ ಚಿನ್ನ ಆಮದು ಮಾಡಿಕೊಂಡಿದೆ. ದೇಶದಲ್ಲಿ ಚಿನ್ನದ ಬೇಡಿಕೆ ಹೆಚ್ಚಳವಾಗಿರುವುದರಿಂದ ಕಳೆದ ಆರ್ಥಿಕ ವರ್ಷದಲ್ಲಿ ಆಮದು ಶೇ.73ರಷ್ಟುಏರಿಕೆಯಾಗಿದೆ. ಹೀಗಾಗಿ ಆಮದು ಮೌಲ್ಯ 3.45 ಲಕ್ಷ ಕೋಟಿಗೆ ತಲುಪಿದೆ. 2021ರಲ್ಲಿ ಚಿನ್ನದ ಆಮದು 2 ಲಕ್ಷ ಕೋಟಿಯಷ್ಟಿತು. ಕಳೆದ 11 ತಿಂಗಳಲ್ಲಿ ಹೆಚ್ಚಾಗಿರುವ ಚಿನ್ನದ ಆಮದಿನಿಂದಾಗಿ ಭಾರತದ ವಿನಿಮಯ ಕೊರತೆ 135 ಲಕ್ಷ ಕೋಟಿಗೆ ತಲುಪಿದೆ. ಭಾರತ ಚಿನ್ನದ ಬಳಕೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಆಭರಣ ತಯಾರಕರರಿಂದ ಬೇಡಿಕೆ ಹೆಚ್ಚಾದ ಬಳಿಕ ಆಮದಿನ ಪ್ರಮಾಣ ಅಧಿಕಗೊಂಡಿದೆ.

ಸಾರ್ವಕಾಲಿಕ ಏರಿಕೆ ಕಂಡ ಚಿನ್ನದ ಬೆಲೆ; 60,000 ರೂ. ಗಡಿ ದಾಟಿದ ಬಂಗಾರದ ದರ ಇನ್ನಷ್ಟು ಹೆಚ್ಚುತ್ತಾ?