Asianet Suvarna News Asianet Suvarna News

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಮಾಸ್ಟರ್‌ಸ್ಟ್ರೋಕ್, ಕೇವಲ 13 ಸಾವಿರ ಇಎಂಐನಲ್ಲಿ ಐಫೋನ್ 16 !

ಹಬ್ಬದ ಬೆನ್ನಲ್ಲೇ ಮುಕೇಶ್ ಅಂಬಾನಿ ಐಫೋನ್ 16 ಫೋನ್ ಖರೀದಿಸಲು ಇಚ್ಚಿಸುವವರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಫ್ಲಿಪ್‌ಕಾರ್ಟ್, ಅಮೇಜಾನ್‌ಗೆ ಸೆಡ್ಡು ಹೊಡೆದಿರುವ ಮುಕೇಶ್ ಅಂಬಾನಿ ಇದೀಗ ರಿಲಯನ್ಸ್ ಡಿಜಿಟಲ್‌ನಲ್ಲಿ ಐಫೋನ್ ಮೇಲೆ ಕ್ಯಾಶ್ ಡಿಸ್ಕೌಂಟ್ ಸೇರಿ ಹಲವು ಆಫರ್ ನೀಡಿದ್ದಾರೆ.

Mukesh Ambani reliance digital offers instant discounts get iPhone for rs 13000 ckm
Author
First Published Sep 30, 2024, 10:46 PM IST | Last Updated Oct 1, 2024, 7:25 PM IST

ಮುಂಬೈ(ಸೆ.30) ಐಫೋನ್ 16 ಸೀರಿಸ್ ಭಾರತದಲ್ಲಿ ಭಾರಿ ಬೇಡಿಕೆಯ ಫೋನ್ ಆಗಿ ಹೊರಹೊಮ್ಮಿದೆ. ಐಫೋನ್ 16 ಫೋನ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಇತ್ತ ಫ್ಲಿಪ್‌ಕಾರ್ಟ್, ಅಮೇಜಾನ್ ಭಾರತದಲ್ಲಿ ಕೆಲ ಆಫರ್ ಮೂಲಕ ಐಫೋನ್ 16 ಮಾರಾಟ ಮಾಡುತ್ತಿದೆ. ಹಬ್ಬಗಳ ಸೀಸನ್ ಆಗಮಿಸಿದೆ. ಇದರ ಬೆನ್ನಲ್ಲೇ ಮುಕೇಶ್ ಅಂಭಾನಿ ಮಾಸ್ಟರ್ ಸ್ಟ್ರೋಕ್‌ಗೆ ಪ್ರತಿಸ್ಪರ್ಧಿಗಳಿಗೆ ನಡುಕ ಶುರುವಾಗಿದ್ದರೆ, ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್‌ಸ್ಟಾಂಟ್ ಡಿಸ್ಕೌಂಟ್, ನೋ ಕಾಸ್ಟ್ ಇಎಂಐ, ಬ್ಯಾಂಕ್ ಕಾರ್ಡ್ ಆಫರ್ ಸೇರಿದಂತೆ ಹಲವು ಕಾರಣಗಳಿಂದ ಇದೀಗ ಮುಕೇಶ್ ಅಂಬಾನಿ ತಮ್ಮ ರಿಲಯನ್ಸ್ ಡಿಜಿಟಲ್‌ನಲ್ಲಿ ಭಾರಿ ಡಿಸ್ಕೌಂಟ್ ಮೊತ್ತಕ್ಕೆ ಐಫೋನ್ 16 ನೀಡುತ್ತಿದ್ದಾರೆ.

ಹಬ್ಬಗಳ ಸೀಸನ್‌ನಲ್ಲಿ ನೀವು ರಿಲಯನ್ಸ್ ಡಿಜಿಟಲ್ ಮೂಲಕ ಆ್ಯಪಲ್ ಐಫೋನ್ ಖರೀದಿಸಲು ಪ್ಲಾನ್ ಮಾಡಿದ್ದರೆ ಹಲವು ಡಿಸ್ಕೌಂಟ್ ಆಫರ್ ನೀಡಲಾಗಿದೆ. ಐಫೋನ್ 16 ಫೋನ್ 128 ಜಿಬಿ ಸ್ಟೋರೇಜ್ ಬೆಲೆ 79,900 ರೂಪಾಯಿಂದ ಆರಂಭಗೊಳ್ಳುತ್ತಿದೆ. ರಿಲಯನ್ಸ್ ಡಿಜಿಟಲ್ ಮೂಲಕ ಐಪೋನ್ 16 ಸೀರಿಸ್ ಖರೀದಿಸುತ್ತಿದ್ದರೆ, ಇನ್‌ಸ್ಟಾಂಟ್ ಡಿಸ್ಕೌಂಟ್ 5,000 ರೂಪಾಯಿ ಆಫರ್ ನೀಡಲಾಗಿದೆ.

ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಐಫೋನ್ 15 ಬೆಲೆ 25,000ರೂ ಕಡಿತ!

ರಿಲಯನ್ಸ್ ಡಿಜಿಟಲ್‌ನಲ್ಲಿ ಐಸಿಐಸಿ, ಎಸ್‌ಬಿಐ, ಕೋಟಕ್ ಬ್ಯಾಂಕ್ ಕ್ರಿಡಿಟ್ ಕಾರ್ಡ್ ಬಳಸಿ ಫೋನ್ ಖರೀದಿಸುತ್ತಿದ್ದರೆ 5,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಇದರ ಜೊತೆಗೆ ನೋ ಕಾಸ್ಟ್ ಇಎಂಐ ಕೂಡ ಲಭ್ಯವಿದೆ. ಐಫೋನ್ 16 ಫೋನ್ 128 ಜಿಬಿ ಸ್ಟೋರೇಜ್ ಫೋನ್ ಖರೀದಿಸಲು ಬಯಸಿದರೆ ನೋ ಕಾಸ್ಟ್ ಇಎಂಐ ಮೂಲಕ ತಿಂಗಳಿಗೆ 12,483 ರೂಪಾಯಿ ಪಾವತಿಸಿದರೆ ಸಾಕು. 6 ತಿಂಗಳ ಅವಧಿಗೆ ಈ ಮೊತ್ತಪಾವತಿಸಿದರೆ ಐಫೋನ್ ನಿಮ್ಮದಾಗಲಿದೆ.

ರಿಲಯನ್ಸ್ ಡಿಜಿಟಲ್‌ನಲ್ಲಿ ಐಫೋನ್ 16 ಪ್ಲಸ್‌ಗೆ 5,000 ರೂಪಾಯಿ ಇನ್‌ಸ್ಟಾಂಟ್ ಡಿಸ್ಕೌಂಟ್, ನೋ ಕಾಸ್ಟ್ ಇಎಂಐ ಮೂಲಕ ಖರೀದಿಸಿದರೆ 5,000 ರೂಪಾಯಿ ಇನ್‌ಸ್ಟಾಂಟ್ ಡಿಸ್ಕೌಂಟ್ ನೀಡಲಾಗಿದೆ. ಇದು ಐಫೋನ್ 16ಗೂ ಅನ್ವಯಿಸಲಿದೆ. ಇನ್ನು ಐಫೋನ್ 16 ಪ್ರೋ ಹಾಗೂ ಐಫೋನ್ 16 ಪ್ರೋಮ್ಯಾಕ್ಸ್ 4,000 ರೂಪಾಯಿ ಫುಲ್ ಕ್ಯಾಶ್ ವೇಳೆ ಡಿಸ್ಕೌಂಟ್ ಹಾಗೂ 6 ತಿಂಗಳ ನೋ ಕಾಸ್ಟ್ ಇಎಂಐ ಮೂಲಕವೂ 4,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ನವರಾತ್ರಿ, ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳ ಪ್ರಯುಕ್ತ ಮುಕೇಶ್ ಅಂಬಾನಿ ಭರ್ಜರಿ ಡಿಸ್ಕೌಂಟ್ ನೀಡಿದ್ದಾರೆ. ಇತ್ತ ಫ್ಲಿಪ್‌ಕಾರ್ಟ್, ಅಮೆಜಾನ್ ಕೂಡ ಇದೇ ರೀತಿಯ ಕೆಲ ಆಫರ್ ನೀಡುತ್ತಿದೆ. ಇದೀಗ ರಿಲಯನ್ಸ್ ಡಿಜಿಟಲ್ ಮಹತ್ವದ ನಡೆಯಿಂದ ಇ ಕಾಮರ್ಸ್ ದಿಗ್ಗಜರೇ ಬೆಚ್ಚಿ ಬಿದ್ದಿದ್ದಾರೆ.

ಪರಿಶ್ರಮದ ಮೂಲಕ ಮಗನಿಗೆ ಐಫೋನ್ 16, ತನಗೆ 15 ಫೋನ್ ಖರೀದಿಸಿದ ಚಿಂದಿ ಆಯುವ ವ್ಯಕ್ತಿ!
 

Latest Videos
Follow Us:
Download App:
  • android
  • ios