Gold ATM: ಮುತ್ತಿನ ನಗರಿಯ ಈ ಎಟಿಎಂನಲ್ಲಿ ಹಣ ಅಲ್ಲ, ಚಿನ್ನ ಬರುತ್ತೆ..!

ಗೋಲ್ಡ್‌ಸಿಕ್ಕಾ ಕಂಪನಿ ತನ್ನ ಮೊದಲ ಚಿನ್ನದ ಎಟಿಎಂ ಅನ್ನು ಬೇಗಂಪೇಟೆಯಲ್ಲಿ ಹೈದರಾಬಾದ್ ಮೂಲದ ಸಂಸ್ಥೆ ಓಪನ್‌ಕ್ಯೂಬ್ ಟೆಕ್ನಾಲಜೀಸ್‌ನ ಸಹಾಯದಿಂದ ಅನಾವರಣಗೊಳಿಸಿದೆ.

golden news for city of nizams hyderabad gets indias first real time gold atm ash

ಎಟಿಎಂನಲ್ಲಿ (ATM) ಹಣ (Money) ಬರುವುದು ಸಾಮಾನ್ಯ. ಆದರೆ, ಇನ್ಮುಂದೆ ಎಟಿಎಂನಲ್ಲೇ ಚಿನ್ನ (Gold) ಬರುತ್ತೆ. ಅರೇ, ಇದೇನಿದು ಸುಳ್ಳು ಸುದ್ದಿ ಅಂತೀರಾ..? ಖಂಡಿತವಾಗಿಯೂ ಇದು ಸತ್ಯ. ಈ ಎಟಿಎಂನಲ್ಲಿ ಹಣ ಅಲ್ಲ, ಚಿನ್ನದ ನಾಣ್ಯ (Gold Coin) ಬರುತ್ತೆ. ಹೌದು, ಮುತ್ತಿನ ನಗರಿ ಹೈದರಾಬಾದ್‌ನಲ್ಲಿ (Hyderabad) ದೇಶದ ಮೊದಲ ಚಿನ್ನದ ಎಟಿಎಂ (Gold ATM) ಉದ್ಘಾಟನೆಯಾಗಿದೆ. ಬೇಗಂಪೇಟೆಯಲ್ಲಿರುವ ರಘುಪತಿ ಚೇಂಬರ್ಸ್‌ನಲ್ಲಿ ಗ್ರಾಹಕರು ತಮ್ಮ ಡೆಬಿಟ್ (Debit Card) ಅಥವಾ ಕ್ರೆಡಿಟ್ ಕಾರ್ಡ್‌ಗಳ (Credit Card) ಮೂಲಕ ಎಟಿಎಂನಿಂದ ಶುದ್ಧ ಚಿನ್ನದ ನಾಣ್ಯಗಳನ್ನು ಖರೀದಿಸಲು ಈ ಎಟಿಎಂ ಅನ್ನು ಬಳಸಬಹುದಾಗಿದೆ. 

ಗೋಲ್ಡ್‌ಸಿಕ್ಕಾ ಕಂಪನಿ (Gold Sikka) ತನ್ನ ಮೊದಲ ಚಿನ್ನದ ಎಟಿಎಂ ಅನ್ನು ಬೇಗಂಪೇಟೆಯಲ್ಲಿ ಹೈದರಾಬಾದ್ ಮೂಲದ ಸಂಸ್ಥೆ ಓಪನ್‌ಕ್ಯೂಬ್ ಟೆಕ್ನಾಲಜೀಸ್‌ನ (OpenCube Technologies) ಸಹಾಯದಿಂದ ಅನಾವರಣಗೊಳಿಸಿದೆ. ಇದನ್ನು ಭಾರತದಲ್ಲಿ ಮೊದಲ ಚಿನ್ನದ ಎಟಿಎಂ ಮತ್ತು ಜಗತ್ತಿನ ಮೊದಲ ನೈಜ-ಸಮಯದ ಚಿನ್ನದ ಎಟಿಎಂ ಎಂದು ಹೇಳಿಕೊಂಡಿದೆ. ಗ್ರಾಹಕರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ 0.5 ಗ್ರಾಂನಿಂದ 100 ಗ್ರಾಂಗಳವರೆಗೆ ವಿವಿಧ ಪ್ರಮಾಣದಲ್ಲಿ ಚಿನ್ನದ ನಾಣ್ಯಗಳನ್ನು ಈ ಎಟಿಎಂ ಬಳಸಿ ಖರೀದಿಸಬಹುದು ಎಂದು ಗೋಲ್ಡ್‌ಸಿಕ್ಕಾ ಸಿಇಒ ಸೈ ತರುಜ್ ಹೇಳಿದ್ದಾರೆ. "ಗ್ರಾಹಕರಿಗೆ ಪಾರದರ್ಶಕ ಮತ್ತು ಸ್ಪಷ್ಟವಾಗುವಂತೆ ಬೆಲೆಗಳನ್ನು ಪರದೆಯ ಮೇಲೆ ನೇರವಾಗಿ ಪ್ರದರ್ಶಿಸಲಾಗುತ್ತದೆ. ಮತ್ತು ಈ ನಾಣ್ಯಗಳನ್ನು 999 ಶುದ್ಧತೆಯೊಂದಿಗೆ ಪ್ರಮಾಣೀಕರಿಸಿದ ಟ್ಯಾಂಪರ್ ಪ್ರೂಫ್ ಪ್ಯಾಕ್‌ಗಳಲ್ಲಿ ವಿತರಿಸಲಾಗುತ್ತದೆ" ಎಂದೂ ಅವರು ಹೇಳಿದರು.

ಇದನ್ನು ಓದಿ: ಎಟಿಎಂನಿಂದ ಡ್ಯಾಮೇಜ್ ಆಗಿರುವ ನೋಟು ಸಿಕ್ಕಿದ್ಯಾ? ಡೋಂಟ್ ವರಿ, ಹೊಸ ನೋಟು ಪಡೆಯಲು ಹೀಗೆ ಮಾಡಿ

ಇನ್ನು, ಚಿನ್ನದ ನಾಣ್ಯ ನೀಡುವ ಈ ಎಟಿಎಂ ಅನ್ನು ವಾರಂಗಲ್, ಕರೀಂನಗರ ಮತ್ತು ಪ್ರಾಚೀನ ನಗರವಾದ ಹೈದರಾಬಾದ್‌ನಲ್ಲಿ ಮೂರು ಯಂತ್ರಗಳನ್ನು ಪರಿಚಯಿಸಲು ಹಾಗೂ ಏರ್‌ಪೋರ್ಟ್‌ನಲ್ಲೂ ಯಂತ್ರ ಅಳವಡಿಸಲು ಈ ಕಂಪನಿ ಪ್ರಸ್ತಾಪಿಸುತ್ತದೆ. ಅಲ್ಲದೆ,  ಮುಂದಿನ ಎರಡು ವರ್ಷಗಳಲ್ಲಿ ಭಾರತದಾದ್ಯಂತ 3,000 ಸಾಧನಗಳನ್ನು ಪರಿಚಯಿಸಲಾಗುವುದು ಎಂದೂ ಗೋಲ್ಡ್‌ಸಿಕ್ಕಾ ಸಿಇಒ ಸೈ ತರುಜ್ ಹೇಳಿದ್ದಾರೆ. 

 ದೇಶದ ಮೊದಲ ಚಿನ್ನದ ನಾಣ್ಯ ನೀಡುವ ಎಟಿಎಂ ಉದ್ಘಾಟನೆ ಸಮಾರಂಭದಲ್ಲಿ  ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ, ಗೋಲ್ಡ್‌ಸಿಕ್ಕಾ ಅಧ್ಯಕ್ಷೆ ಅಂಬಿಕಾ ಬರ್ಮನ್, ಓಪನ್‌ಕ್ಯೂಬ್ ಟೆಕ್ನಾಲಜೀಸ್‌ನ ಸಿಇಒ ಪಿ.ವಿನೋದ್ ಕುಮಾರ್ ಮತ್ತು ಟಿ-ಹಬ್‌ನ ಸಿಇಒ ಎಂ. ಶ್ರೀನಿವಾಸ್ ರಾವ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. 

ಇದನ್ನೂ ಓದಿ: ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಅವರು ಚಿನ್ನದ ಎಟಿಎಂ ಕೇಂದ್ರವನ್ನು ಸ್ಥಾಪಿಸಿದ್ದರು. ಗ್ರಾಹಕರು 0.5 ರಿಂದ 100 ಗ್ರಾಂ ಚಿನ್ನದ ನಾಣ್ಯಗಳನ್ನು ಖರೀದಿಸಬಹುದು ಮತ್ತು ಅವುಗಳ ಶುದ್ಧತೆ ಮತ್ತು ತೂಕವನ್ನು ಪರಿಶೀಲಿಸುವ ಪ್ರಮಾಣಪತ್ರವನ್ನು ಪಡೆಯಬಹುದು ಎಂದು ಕಂಪನಿ ತಿಳಿಸಿದೆ. ಚಿನ್ನದ ಎಟಿಎಂಗಳು ದಿನದ 24 ಗಂಟೆಯೂ ಲಭ್ಯವಿರಲಿವೆ. ಇನ್ನು, ಈ ಗೋಲ್ಡ್ ಎಟಿಎಂಗಳನ್ನು ಸಿಕಂದರಾಬಾದ್‌ನ ಗುಲ್ಜಾರ್ ಹೌಸ್ ಮತ್ತು ಹೈದರಾಬಾದ್‌ನ ಅಬಿಡ್ಸ್‌ನಲ್ಲಿ ಹಾಗೂ ಪೆದ್ದಪಲ್ಲಿ, ಕರೀಂನಗರದಲ್ಲಿ ಸ್ಥಾಪಿಸಲಾಗುವುದು ಎಂದೂ ತಿಳಿದುಬಂದಿದೆ.

ಹೈದರಾಬಾದ್‌ನಲ್ಲಿ ಮುತ್ತಿಗೆ ದೇಶದ ಇತರೆಡೆಗಿಂತ ಕಡಿಮೆ ಬೆಲೆ ಇದೆ. ಆದರೆ, ಮುತ್ತಿನ ನಗರಿಯಲ್ಲಿ ದೇಶದ ಮೊದಲ ಚಿನ್ನದ ನಾಣ್ಯಗಳನ್ನು ನೀಡುವ ಎಟಿಎಂ ಸ್ಥಾಪನೆಯಾಗಿರುವುದು ವಿಶೇಷವೇ ಸರಿ. 

ಇದನ್ನೂ ಓದಿ: ನೀವು ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಎಟಿಎಂನಿಂದ ನಗದು ವಿತ್ ಡ್ರಾ ಮಾಡ್ತೀರಾ? ಹಾಗಾದ್ರೆ ಈ ಮಾಹಿತಿ ಗೊತ್ತಿರಲಿ

Latest Videos
Follow Us:
Download App:
  • android
  • ios