ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
ಇಂದು ಎಲ್ಲರ ಬಳಿ ಎಟಿಎಂ ಕಾರ್ಡ್ ಇದೆ. ಆದರೆ, ಎಟಿಎಂ ಕಾರ್ಡ್ ಕಳೆದು ಹೋದರೆ ಅಥವಾ ದುರ್ಬಳಕೆಯಾದ್ರೆ ತಕ್ಷಣ ಏನು ಮಾಡಬೇಕು? ಬ್ಲಾಕ್ ಮಾಡಿಸಬೇಕು. ಅನೇಕ ವಿಧಾನಗಳ ಮೂಲಕ ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸುವ ಅವಕಾಶವಿದೆ.
Business Desk:ಇಂದು ಬಹುತೇಕ ಎಲ್ಲರ ಬಳಿ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಇದೆ. ಎಟಿಎಂ ಕಾರ್ಡ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕೂಡ ಮುಖ್ಯ. ಏಕೆಂದ್ರೆ ಎಟಿಎಂ ಕಾರ್ಡ್ ಬಳಸಿ ನಿಮ್ಮ ಉಳಿತಾಯ ಖಾತೆಗೆ ವಂಚಕರು ಕನ್ನ ಹಾಕುವ ಸಾಧ್ಯತೆ ಇದೆ. ಒಂದು ವೇಳೆ ನಿಮ್ಮ ಡೆಬಿಟ್ ಕಾರ್ಡ್ ಕಳೆದು ಹೋಗಿದ್ರೆ ಅಥವಾ ಯಾರಾದರೂ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಸಣ್ಣ ಅನುಮಾನ ಮೂಡಿದ್ರೂ ತಕ್ಷಣ ಅದನ್ನು ಬ್ಲಾಕ್ ಮಾಡಿಸೋದು ಇಲ್ಲವೆ ನಿಷ್ಕ್ರಿಯಗೊಳಿಸೋದು ಉತ್ತಮ. ಎಟಿಎಂ ಕಾರ್ಡ್ ಅನ್ನು ಸುಲಭ ಹಾಗೂ ತ್ವರಿತವಾಗಿ ಬ್ಲಾಕ್ ಮಾಡಲು ಅನೇಕ ಬ್ಯಾಂಕ್ ಗಳು ಅನೇಕ ವಿಧದ ಪ್ರಕ್ರಿಯೆಗಳನ್ನು ಪ್ರಾರಮಭಿಸಿದ್ದು, ತ್ವರಿತವಾಗಿ ಎಟಿಎಂ ಕಾರ್ಡ್ ಬ್ಲಾಕ್ ಮಾಡಲು ಸಾಧ್ಯವಾಗಲಿದೆ. ಹಾಗಾಗಿ ಎಟಿಎಂ ಕಾರ್ಡ್ ಬ್ಲಾಕ್ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದಾಗ ಏನು ಮಾಡಬೇಕು ಎಂಬ ಮಾಹಿತಿಯನ್ನು ಪ್ರತಿಯೊಬ್ಬರೂ ಹೊಂದಿರೋದು ಅಗತ್ಯ. ಇದ್ರಿಂದ ತುರ್ತು ಸಂದರ್ಭದಲ್ಲಿ ಶೀಘ್ರವಾಗಿ ಎಟಿಎಂ ಕಾರ್ಡ್ ಬ್ಲಾಕ್ ಮಾಡಲು ಸಾಧ್ಯವಾಗಲಿದೆ. ಹಾಗಾದ್ರೆ ಎಟಿಎಂ ಕಾರ್ಡ್ ಬ್ಲಾಕ್ ಮಾಡಲು ಏನ್ ಮಾಡ್ಬೇಕು? ಇಲ್ಲಿದೆ ಮಾಹಿತಿ.
ಕಸ್ಟಮರ್ ಕೇರ್ ಮೂಲಕ
ಎಟಿಎಂ ಕಾರ್ಡ್ (ATM card) ಹಿಂಬದಿಯಲ್ಲಿ ಟೋಲ್ ಫ್ರೀ ಸಂಖ್ಯೆ (Toll Free Number) ಪ್ರಿಂಟ್ ಆಗಿರುತ್ತದೆ. ಈ ಸಂಖ್ಯೆಯನ್ನು ಮೊಬೈಲ್ ಫೋನ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳೋದು ಒಳ್ಳೆಯದು. ಯಾವಾಗ ನಿಮಗೆ ಎಟಿಎಂ ಕಾರ್ಡ್ (ATM card) ಬ್ಲಾಕ್ ಮಾಡಬೇಕೋ ಆಗ ಈ ಸಂಖ್ಯೆಗೆ ಕರೆ ಮಾಡಿದ್ರೆ ಆಯ್ತು. ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಕೂಡ ತಕ್ಷಣ ನಿಮಗೆ ಲಭ್ಯವಾಗುವಂತೆ ಒಂದೆಡೆ ಸೇವ್ ಮಾಡಿಟ್ಟುಕೊಳ್ಳಿ.
ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕಿಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತೆ ಈ ಬ್ಯಾಂಕ್!
ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ನಿಮ್ಮ ಎಟಿಎಂ ಕಾರ್ಡ್ ಸಂಖ್ಯೆ ಹಾಗೂ ಖಾತೆ ಸಂಖ್ಯೆಯೊಂದಿಗೆ ಸಮೀಪದ ಬ್ಯಾಂಕ್ ಶಾಖೆಗೆ (Bank Branch) ಭೇಟಿ ನೀಡಿ. ಬ್ಯಾಂಕ್ ಅಧಿಕಾರಿಗಳ ಬಳಿ ಡೆಬಿಟ್ ಕಾರ್ಡ್(Debit card) ಬ್ಲಾಕ್ ಮಾಡಲು ಮನವಿ ಸಲ್ಲಿಸಿ.
ಆನ್ ಲೈನ್ ನಲ್ಲಿ ಬ್ಲಾಕ್ ಮಾಡೋದು ಹೇಗೆ?
ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಆ ಬಳಿಕ ನೆಟ್ ಬ್ಯಾಂಕಿಂಗ್ ಗೆ (Net Banking) ಲಾಗಿನ್ (Login) ಆಗಿ. ಈಗ 'ATM Card Block' ವಿಭಾಗ ಎಲ್ಲಿದೆ ನೋಡಿ. ಆ ಬಳಿಕ ಬ್ಯಾಂಕ್ ಸೂಚಿಸಿದ ಹಂತಗಳನ್ನು ಅನುಸರಿಸಿ.
ಮೊಬೈಲ್ ಬ್ಯಾಂಕಿಂಗ್ ಮೂಲಕ ಹೇಗೆ?
ಬಹುತೇಕ ಬ್ಯಾಂಕ್ ಗಳು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಗಳನ್ನು ಹೊಂದಿವೆ. ಇದರ ಮೂಲಕ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಗಳನ್ನು ಬ್ಲಾಕ್ ಮಾಡಬಹುದು.
ಎಸ್ ಬಿಐ, ಎಚ್ ಡಿಎಫ್ ಸಿ ಬ್ಯಾಂಕಿಗಿಂತ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುತ್ತೆ ಈ ಬ್ಯಾಂಕ್!
ಸ್ವಯಂಚಾಲಿತ ವರದಿ ವ್ಯವಸ್ಥೆ ಮೂಲಕ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಅವರ ಖಾತೆಯಲ್ಲಿ ಮಾಡಿದ ಪ್ರತಿ ವಹಿವಾಟಿಗೆ ಸಂಬಂಧಿಸಿ ಗ್ರಾಹಕರಿಗೆ ವಹಿವಾಟಿನ ಅಲರ್ಟ್ ಗಳನ್ನು ಕಳುಹಿಸುವಂತೆ ಬ್ಯಾಂಕುಗಳಿಗೆ ಸೂಚಿಸಿದೆ. ಈ ಎಸ್ ಎಂಎಸ್ ಅಥವಾ ಇ-ಮೇಲ್ ಅಲರ್ಟ್ ಯಾವಾಗಲೂ ಮೊಬೈಲ್ ಸಂಖ್ಯೆಯನ್ನು ಒಳಗೊಂಡಿರುತ್ತದೆ. ಗ್ರಾಹಕ ಈ ಸಂಖ್ಯೆಗೆ ಎಸ್ ಎಂಎಸ್ ಕಳುಹಿಸಿದ್ರೆ ಕೂಡ ತಕ್ಷಣ ಎಟಿಎಂ ಕಾರ್ಡ್ ಬ್ಲಾಕ್ ಮಾಡಲಾಗುತ್ತದೆ. ಯಾವುದಾದ್ರೂ ವಂಚನೆಯ ವಹಿವಾಟು ನಿಮ್ಮ ಖಾತೆಯಿಂದ ನಡೆದಿದ್ರೆ ಈ ರೀತಿ ಎಸ್ ಎಂಎಸ್ ಕಳುಹಿಸುವ ವ್ಯವಸ್ಥೆ ನೆರವು ನೀಡುತ್ತದೆ. ಆದರೆ, ಎಟಿಎಂ ಕಾರ್ಡ್ ಕಳವಾಗಿರುವ ಪ್ರಕರಣದಲ್ಲಿ ಯಾವುದೇ ವಹಿವಾಟು ನಡೆಯದ ಹೊರತು ಈ ವಿಧಾನ ನೆರವಿಗೆ ಬರೋದಿಲ್ಲ.