Asianet Suvarna News Asianet Suvarna News

ಬೆಂಗೂರಲ್ಲಿ ಬಂಗಾರದ ಬೆಲೆ ದಾಖಲೆಯ 79980 ರೂಪಾಯಿ!

ಹಬ್ಬದ ಸೀಸನ್‌ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಚಿನ್ನದ ಬೆಲೆಗಳು ಇತಿಹಾಸದಲ್ಲಿಯೇ ಅತ್ಯಧಿಕ ಎತ್ತರಕ್ಕೆ ಏರಿವೆ. ಅದೇ ಸಮಯದಲ್ಲಿ, ಬಾಂಬೆ ಷೇರು ಮಾರುಕಟ್ಟೆಯು ಕುಸಿತವನ್ನು ಕಂಡಿದೆ, ಇದು ಹೂಡಿಕೆದಾರರಿಗೆ ಗಣನೀಯ ನಷ್ಟವನ್ನು ಉಂಟುಮಾಡಿದೆ.

Gold Rate In Bengaluru Reaches 79980 Rupees san
Author
First Published Oct 5, 2024, 7:43 AM IST | Last Updated Oct 5, 2024, 7:43 AM IST

ನವದೆಹಲಿ (ಅ.5): ಹಬ್ಬದ ಋತುಗಳ ಆರಂಭ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟು ಉಲ್ಬಣವಾಗುತ್ತಿರುವ ಬೆನ್ನಲ್ಲೇ ಚಿನ್ನದ ಬೆಲೆ ಹೊಸ ದಾಖಲೆ ಮಟ್ಟಕ್ಕೆ ಏರಿದೆ. ಶುಕ್ರವಾರ ಬೆಂಗಳೂರಿನಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ದರ ಪ್ರತಿ 10 ಗ್ರಾಂಗೆ 110 ರು. ಏರಿಕೆಯಾಗಿ 79,980ಕ್ಕೆ ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ದಾಖಲೆ ಬೆಲೆಯಾಗಿದೆ. ಅದೇ ರೀತಿ ರಾಷ್ಟ್ರ ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ದರ 150 ರೂಪಾಯಿ ಏರಿ ಏರಿ 78,325 ರು.ಗೆ ತಲುಪಿದೆ. ಕೋಲ್ಕತಾದಲ್ಲಿ 78,295 ರು., ಚೆನ್ನೈನಲ್ಲಿ 78, 320 ರು. ಹಾಗೂ ಮುಂಬೈನಲ್ಲಿ 78,065 ರು.ಗೆ ತಲುಪಿದೆ.ಇನ್ನು ಬೆಳ್ಳಿದರ ಬೆಂಗಳೂರಿನಲ್ಲಿ ಪ್ರತಿ ಕೇಜಿಗೆ 1,100 ರು. ಏರಿಕೆಯಾಗಿ 98,200 ರು, ತಲುಪಿದೆ. ದೆಹಲಿಯಲ್ಲಿ 94,200 ರು., ಚೆನ್ನೈನಲ್ಲಿ 1,01,000 ರು., ಮುಂಬೈ, ಕೋಲ್ಕತಾದಲ್ಲಿ 95,000 ರು. ನಷ್ಟಿದೆ.

5 ದಿನಕ್ಕೆ 16 ಲಕ್ಷ ಕೋಟಿ ಹೂಡಿಕೆ ನಷ್ಟ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಶುಕ್ರವಾರ 808 ಅಂಕಗಳು ಕುಸಿದು 81688ರಲ್ಲಿ ಅಂತ್ಯವಾಗಿದೆ. ಇದು ಕಳೆದ 3 ವಾರಗಳ ಕನಿಷ್ಠವಾಗಿದೆ. ಇದೇ ವೇಳೆ ನಿಫ್ಟಿ ಕೂಡಾ 235 ಅಂಕ ಕುಸಿತ ಕಂಡು 25014 ಅಂಕ ಗಳಲ್ಲಿ ಕೊನೆಗೊಂಡಿತು.

ಫೇಸ್‌ಬುಕ್‌ನ ಮಾರ್ಕ್‌ ಜುಕರ್‌ಬರ್ಗ್‌ ಈಗ ವಿಶ್ವದ 2ನೇ ಶ್ರೀಮಂತ ವ್ಯಕ್ತಿ!

ಮಧ್ಯಪ್ರಾಚ್ಯದಲ್ಲಿ ಬಂದಿರುವ ಯುದ್ಧ ಭೀತಿ, ಕಳೆದ 5 ದಿನಗಳಿಂದ ಸೆನೆಕ್ ಸತತವಾಗಿ ಕುಸಿಯುವಂತೆ ಮಾಡಿದೆ. ಪರಿಣಾಮ ಹೂಡಿಕೆದಾರರ 16.2 ಲಕ್ಷಕೋಟಿ ರು.ನಷ್ಟು ಸಂಪತ್ತು ಕರಗಿ ಹೋಗಿದೆ. ಕಳೆದ 5 ದಿನಗಳಲ್ಲಿ ಸೆನ್ಸೆಕ್ಸ್ 3883 ಅಂಕ ಮತ್ತು ನಿಫ್ಟಿ 1164 ಕುಸಿತ ಕಂಡಿದೆ. ಇದು ಕಳೆದ 2 ವರ್ಷಗಳಲ್ಲೇ ವಾರವೊಂದರಲ್ಲಿ ಸೆನ್ಸೆಕ್ಸ್‌ ಮತ್ತು ನಿಫ್ಟಿಯ ಅತ್ಯಂತ ಗರಿಷ್ಠ ಕುಸಿತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಮೋಟಾರ್ಸ್‌, ಟೆಕ್ ಮಹೇಂದ್ರ, ಇನ್ಫೋಸಿಸ್, ಟಿಸಿಎಸ್‌ ಹಾಗೂ ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳು ಲಾಭ ಗಳಿಸಿವೆ.

ಜಸ್ಟ್ ಒಂದೇ ದಿನದಲ್ಲಿ ಮುಕೇಶ್ ಅಂಬಾನಿಗೆ ಬರೋಬ್ಬರಿ 77 ಸಾವಿರ ಕೋಟಿ ರೂ ನಷ್ಟ!

Latest Videos
Follow Us:
Download App:
  • android
  • ios