ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಈಗ ವಿಶ್ವದ 2ನೇ ಶ್ರೀಮಂತ ವ್ಯಕ್ತಿ!
ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯ 206.2 ಶತಕೋಟಿ ಡಾಲರ್‌ಗೆ ತಲುಪಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ವರ್ಷದ ಆರಂಭದಿಂದಲೂ ಮೆಟಾ ಷೇರುಗಳು ಸುಮಾರು 70% ರಷ್ಟು ಏರಿಕೆಯಾಗಿವೆ. ಹೂಡಿಕೆದಾರರು ಕಂಪನಿಯ ಕೃತಕ ಬುದ್ಧಿಮತ್ತೆ (AI) ಹೂಡಿಕೆಗಳು ಮತ್ತು ಮಾರಾಟದ ಬೆಳವಣಿಗೆಯ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದ್ದಾರೆ.
ಮುಂಬೈ (ಅ.4): ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ನಿವ್ವಳ ಮೌಲ್ಯ 206.2 ಶತಕೋಟಿ ಡಾಲರ್‌ಗೆ ತಲುಪಿದ ಕಾರಣ ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇದರೊಂದಿಗೆ, ಮಾರ್ಕ್ ಜುಕರ್‌ಬರ್ಗ್ ಅವರು ಅಮೆಜಾನ್ ಮಾಜಿ ಸಿಇಒ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ ಅವರ 205.1 ಬಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹಿಂದಿಕ್ಕಿದರು. ಪ್ರಸ್ತುತ, ಫೇಸ್‌ಬುಕ್ ಸಹ-ಸಂಸ್ಥಾಪಕರು, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ಅಂಪತ್ತಿನಿಂದ ಸುಮಾರು $ 50 ಬಿಲಿಯನ್‌ಗಳಷ್ಟು ಹಿಂದಿದ್ದಾರೆ ಎಂದು ಸೂಚ್ಯಂಕ ತೋರಿಸಿದೆ. ಕ್ಯಾಲಿಫೋರ್ನಿಯಾ ಮೂಲದ ಮೆನ್ಲೋ ಪಾರ್ಕ್ ಕಂಪನಿಯಲ್ಲಿ 13% ಪಾಲನ್ನು ಹೊಂದಿರುವ ಮಾರ್ಕ್ ಜುಕರ್‌ಬರ್ಗ್, ಈ ವರ್ಷ ಇಲ್ಲಿಯವರೆಗೆ 78 ಶತಕೋಟಿ ಡಾಲರ್‌ನಷ್ಟು ಅವರ ಸಂಪತ್ತು ಬೆಳೆದಿದೆ ಮತ್ತು ಸಂಪತ್ತಿನ ಸೂಚ್ಯಂಕದಲ್ಲಿ ಈ ವರ್ಷ ನಾಲ್ಕು ಸ್ಥಾನ ಏರಿಕೆ ಕಂಡಿದ್ದಾರೆ.
2024 ರಲ್ಲಿ, ಮಾರ್ಕ್ ಜುಕರ್‌ಬರ್ಗ್ ಅವರ ನಿವ್ವಳ ಮೌಲ್ಯವು 78 ಶತಕೋಟಿ ಡಾಲರ್‌ನಷ್ಟು ಹೆಚ್ಚಾಗಿದೆ. ಬ್ಲೂಮ್‌ಬರ್ಗ್ ರಿಯಲ್ ಟೈಮ್ ಬಿಲಿಯನೇರ್ ಇಂಡೆಕ್ಸ್ ಟ್ರ್ಯಾಕ್ ಮಾಡುವ ವಿಶ್ವದ 500 ಶ್ರೀಮಂತರ ಪೈಕಿ, ಯಾರೂ ಕೂಡ ಈ ವರ್ಷವೊಂದರಲ್ಲೇ ಇಷ್ಟು ಪ್ರಮಾಣದ ಸಂಪತ್ತು ಗಳಿಕೆ ಮಾಡಿಲ್ಲ.
ಹೂಡಿಕೆದಾರರ ಉತ್ಸಾಹದ ಜೊತೆಗೆ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ಸಂಪತ್ತಿನ ಹೆಚ್ಚಳದಿಂದಾಗಿ ಈ ವರ್ಷದ ಆರಂಭದಿಂದ ಮೆಟಾ ಷೇರುಗಳು ಸುಮಾರು 70% ರಷ್ಟು ಜಿಗಿದಿವೆ. ಮೆಟಾ ತನ್ನ ಕೃತಕ ಬುದ್ಧಿಮತ್ತೆ (AI) ಹೂಡಿಕೆಗಳನ್ನು ತನ್ನ ಮಾರಾಟದ ಬೆಳವಣಿಗೆಗೆ ಕಾರಣವೆಂದು ಪದೇ ಪದೇ ಹೆಮ್ಮೆಪಡುತ್ತದೆ.
2022 ರ ಕೊನೆಯಲ್ಲಿ 21,000 ಉದ್ಯೋಗಿಗಳನ್ನು ತೆಗೆದು ಹಾಕಿದ್ದ ಕಂಪನಿಗೆ ಇದು ಒಂದು ದೊಡ್ಡ ತಿರುವು, ಏಕೆಂದರೆ ಮಾರ್ಕ್ ಜುಕರ್‌ಬರ್ಗ್ ಅವರು ಪ್ರಮುಖ ವೆಚ್ಚ ಕಡಿತ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದು ಕಂಪನಿಯು ಆದಾಯದಲ್ಲಿ ದೊಡ್ಡ ಪ್ರಮಾಣದ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ಒಂದೇ ವರ್ಷದಲ್ಲಿ ಇಷ್ಟೊಂದು ಸಂಪತ್ತಾ?..ಈ ವರ್ಷದಲ್ಲಿಯೇ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಳ್ಳಲಿದ್ದಾರೆ ಮಾರ್ಕ್ ಜುಕರ್‌ಬರ್ಗ್!
ಮೆಟಾದಲ್ಲಿ ಹೂಡಿಕೆದಾರರ ವಿಶ್ವಾಸ ಈಗ ಸ್ಥಿರವಾಗಿದೆಯೇ?: ಪ್ರಸ್ತುತ, ವರ್ಚುವಲ್ ಮತ್ತು ವರ್ಧಿತ ರಿಯಾಲಿಟಿ ತಂತ್ರಜ್ಞಾನಗಳಿಗಾಗಿ ಮೆಟಾ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡುತ್ತಿದೆ, ಆದರೆ ಹೂಡಿಕೆದಾರರು ತಮ್ಮ ಪ್ರಮುಖ ಜಾಹೀರಾತು ವ್ಯವಹಾರವು ಆರೋಗ್ಯಕರವಾಗಿ ಉಳಿದಿರುವ ಕಂಪನಿಯನ್ನು ಬೆಂಬಲಿಸುವುದನ್ನು ಮುಂದುವರೆಸಿದ್ದಾರೆ. ಕಳೆದ ವಾರ, ಮೆಟಾ ತನ್ನ ಓರಿಯನ್ ಎಆರ್ ಗ್ಲಾಸ್‌ಗಳನ್ನು ಪ್ರಾರಂಭಿಸಿತು, ಇದು ಮಾರುಕಟ್ಟೆಯಲ್ಲಿ ಪಾಸಿಟಿವ್ ರೆಸ್ಪಾನ್ಸ್ ಗಳಿಸಿದೆ.
ಮನೆ ಹಿತ್ತಲಿನಲ್ಲಿ ಪತ್ನಿಯ ಬೃಹತ್ ಪ್ರತಿಮೆ ಸ್ಥಾಪಿಸಿದ ಫೇಸ್‌ಬುಕ್ ಸಂಸ್ಥಾಪಕ ಜುಕರ್‌ಬರ್ಗ್