ದೀಪಾವಳಿ ಬಳಿಕ ಸತತ ಐದು ದಿನ ಇಳಿಕೆ ಕಂಡಿದ್ದ ಚಿನ್ನ| ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿದ್ದ ಬೆಲೆ| ಆರನೇ ದಿನ ಏರಿಕೆಯಾದ ಹಳದಿ ಲೋಹ| ಇಲ್ಲಿದೆ ನೋಡಿ ನ. 21ರ ಬೆಲೆ

ಬೆಂಗಳೂರು(ನ. 21) ಭಾರತದಲ್ಲಿ ಅತಿ ಹೆಚ್ಚು ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬ ಕೊನೆಗೊಂಡ ಬೆನ್ನಲ್ಲೇ ಚಿನ್ನದ ದರವೂ ದಾಖಲೆಯ ಇಳಿಕೆ ಕಂಡಿತ್ತು. ಸತತ ಐದು ದಿನ ಇಳಿಕೆ ಹಾದಿಯಲ್ಲಿದ್ದ ಚಿನ್ನ ಇಂದಸು ಕೊಂಚ ಏರಿಕೆಯಾಗಿದೆ. ಈ ಮೂಲಕ ಬಂಗಾರ ಬೆಲೆ ಇಳಿಯಬಹುದೆಂದು ಕಾದವರಿಗೆ ಕೊಂಚ ನಿರಾಸೆಯಾಗಿದೆ. ಇಲ್ಲಿದೆ ನೋಡಿ ನ. 21ರ ರೇಟ್

Add Asianetnews Kannada as a Preferred SourcegooglePreferred

ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ!

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 200 ರೂ. ಏರಿಕೆಯಾಗಿ 47,100 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 140 ರೂ. ಏರಿಕೆಯಾಗಿ, 51,380 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರ 100ರೂ ಇಳಿಕೆ ಕಂಡಿದ್ದು, ಒಂದು ಕೆ. ಜಿ ಬೆಳ್ಳಿ ಬೆಲೆ 62,800 ರೂ. ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.