ಚಿನ್ನದ ದರದಲ್ಲಿ ಮುಂದುವರೆದ ಆಟ| ಹಾವು ಏಣಿ ಆಟವಾಡುತ್ತಿದ್ದ ಬಂಗಾರ ದರ ತಟಸ್ಥ| ಇಲ್ಲಿದೆ ನೋಡಿ ಅಕ್ಟೋಬರ್ 17ರರ ದರ

ಬೆಂಗಳೂರು(ಅ.117): ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ: ಚಿನ್ನ, ಬೆಳ್ಳಿ ದರವೇನು ಅನ್ನೋರಿಗೆ ಇಲ್ಲಿದೆ ಉತ್ತರ!

ಇಂದು ಶನಿವಾರ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ 47,850 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 52,200 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಘಿದೆ. ಒಂದು ಕೆ. ಜಿ ಬೆಳ್ಳಿ ಬೆಲೆ 100 ರೂ. ಏರಿಕೆಯಾಗಿ, 61,700 ರೂ. ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.