Asianet Suvarna News Asianet Suvarna News

ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ: ಚಿನ್ನ, ಬೆಳ್ಳಿ ದರವೇನು ಅನ್ನೋರಿಗೆ ಇಲ್ಲಿದೆ ಉತ್ತರ!

ಚಿನ್ನದ ದರದಲ್ಲಿ ಕೇವಲ ಒಂದು ದಿನದಲ್ಲಿ ಭಾರೀ ಬದಲಾವಣೆ| ಹಾವು ಏಣಿ ಆಟವಾಡುತ್ತಿದ್ದ ಬಂಗಾರ ದರ ಮತ್ತೆ ಏರಿಕೆ| ಇಲ್ಲಿದೆ ನೋಡಿ ಸೆಪ್ಟೆಂಬರ್ 28ರ ದರ
 

Gold Rate In Bengaluru 29th September 2020 in Kannada pod
Author
Bangalore, First Published Sep 29, 2020, 4:42 PM IST

ಬೆಂಗಳೂರು(ಸೆ.28): ಕೊರೋನಾತಂಕ ನಡುವೆ ಚಿನ್ನದ ಬೇಡಿಕೆ ಕಡಿಮೆ ಇದ್ದರೂ ಉದ್ಯಮಗಳು ನೆಲ ಕಚ್ಚಿದ ಪರಿಣಾಮ ಅನೇಕ ಮಂದಿ ಹಳದಿ ಲೋಹದಲ್ಲಿ ಹೂಡಿಕೆ ಮಾಡಿದ್ದರು. ಇದರ ಪರಿಣಾಮವೆಂಬಂತೆ ಬಂಗಾರ ದರ ಮಹಾಮಾರಿ ನಡುವೆಯೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಸದ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗತೊಡಗಿದ್ದು, ಗ್ರಾಹಕರೂ ಖರೀದಿಸಬೇಕಾ? ಬೇಡವಾ? ಎಂಬ ಗೊಂದಲದಲ್ಲಿದ್ದಾರೆ.

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 500 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,400 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ  540 ರೂಪಾಯಿ ಏರಿಕೆ ಕಂಡಿದ್ದು, 51,700 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲಿ 2,700 ರೂ. ಏರಿಕೆಯಾಗಿ. ಒಂದು ಕೆ. ಜಿ ಬೆಳ್ಳಿಯ ಬೆಲೆ 60,700 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

Follow Us:
Download App:
  • android
  • ios