ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಏರಿಕೆ| ಬೆಳ್ಳಿ ಬೆಲೆ ತಟಸ್ಥ| ಇಲ್ಲಿದೆ ನೋಡಿ ನ. 11ರ ಗೋಲ್ಡ್ ರೇಟ್

ಬೆಂಗಳೂರು(ನ.11): ಬುಧವಾರ 10 ಗ್ರಾಂಗೆ 1500 ರೂ. ಇಳಿಕೆ ಕಂಡು ಗ್ರಾಹಕರ ಮುಖದಲ್ಲಿ ಖುಷಿ ತುಂಬಿದ್ದ ಚಿನ್ನದ ದರ ಇಂದು ಕೊಂಚ ಏರಿಕೆ ಕಂಡಿದೆ. ಹೌದು ಕೊರೋನಾ ಆರಂಭವಾದಾಗಿನಿಂದಲೂ ಸಾರ್ವಕಾಲಿಕ ದಾಖಲೆ ಸೃಷ್ಟಿಸಿ ಬಳಿಕ ಕೊಂಚ ಇಳಿಕೆಯಾಗಿದ್ದ ಚಿನ್ನದ ದರ ಮತ್ತೆ ತನ್ನ ಹಾವೇಣಿ ಆಟ ಮುಂದುವರೆಸಿದೆ. ಹಾಗಾದ್ರೆ ಗುರುವಾರ ಚಿನ್ನದ ದರ ಎಷ್ಟಾಗಿದೆ? ಇಲ್ಲಿದೆ ನೋಡಿ ವಿವರ.

Add Asianetnews Kannada as a Preferred SourcegooglePreferred

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರ 100 ರೂ. ಏರಿಕೆಯಾಗಿ 47,200 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 110 ರೂ. ಏರಿಕೆಯಾಗಿ 51,490 ರೂಪಾಯಿ ಆಗಿದೆ. 

ಇನ್ನು ಇತ್ತ ಬೆಳ್ಳಿ ದರದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.. ಒಂದು ಕೆ. ಜಿ. ಬೆಳ್ಳಿ ದರ 66900 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ