ನವದೆಹಲಿ(ಜ.31): ಸತತ 4 ದಿನಗಳಿಂದ ಏರಿಕೆಯತ್ತ ಮುಖ ಮಾಡಿರುವ ಚಿನ್ನ ಬೆಳ್ಳಿಯ ದರ, ಇಂದೂ ಕೂಡ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇಶೀಯ ವರ್ತಕರಿಂದ ಬೇಡಿಕೆ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಕೆ ಕಂಡು ಬಂದಿದೆ.

ಅದರಂತೆ 10 ಗ್ರಾಂ ಶುದ್ಧ ಚಿನ್ನದ ಬೆಲೆಯಲ್ಲಿ 320 ರೂ. ಏರಿಕೆಯಾಗಿದ್ದು, 34,070 ರೂ. ಆಗಿದೆ. ಅದರಂತೆ ಬೆಳ್ಳಿ ದರದಲ್ಲಿ ಕೂಡ ಏರಿಕೆ ಕಂಡು ಬಂದಿದ್ದು, 1 ಕೆಜಿ ಬೆಳ್ಳಿ ಬೆಲೆಯಲ್ಲಿ 330 ರೂ. ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ ಇದೀಗ 41,330  ರೂ. ಆಗಿದೆ.

ಅಮೆರಿಕ ಮತ್ತು ಚೀಣಾ ನಡುವಿನ ವಾಣಿಜ್ಯ ಸಮರ ಇಷ್ಟು ಬೇಗ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ. ಹೀಗಾಗಿ ಆಭರಣ ದರದಲ್ಲಿನ ಈ ಹಾವು ಏಣಿ ಆಟ ಕೂಡ ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಪಾತಾಳಕ್ಕೆ ಕುಸಿದ ಬೆಲೆ: ಹೆಡ್ಲೈನ್ ‘ಅರ್ಥ’ವಾದ ಮೇಲೆ!

ಕುಸಿದಿದೆ ಚಿನ್ನದ ದರ: 10 ಗ್ರಾಂ ಚಿನ್ನಕ್ಕೆಷ್ಟು ಬೆಲೆ...!