ಬೆಂಗಳೂರು(ಜ.25): ‘ಬಹುಜನ ಸುಖಾಯ ಬಹುಜನ ಹಿತಾಯ’ ಎಂಬುದು ಭಾರತದ ಪ್ರಾಚೀನ ಸಂಸ್ಕೃತಿ ಕಲಿಸಿಕೊಟ್ಟ ಅದ್ಭುತ ಪಾಠ. ನಾನು, ನನ್ನದು, ನಾನೇ ಎಂಬುದಕ್ಕೆ ಭಾರತದ ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿ ಸ್ಥಾನವಿಲ್ಲ.

ಎಲ್ಲದಕ್ಕಿಂತ ದೇಶ ಮೊದಲು ಎಂಬುದನ್ನು ಹೇಳಿಕೊಟ್ಟ ಅನೇಕ ಮಹನೀಯರ ಬೀಡು ಭಾರತ. ಅದರಂತೆ ಭಾರತದ ಆರ್ಥಿಕ ಕ್ಷೇತ್ರ ಕೂಡ ಇದಕ್ಕೆ ಹೊರತಲ್ಲ. ಎಲ್ಲರಿಗೂ ಸಮಪಾಲು ಎಂಬುದೇ ಭಾರತದ ಆರ್ಥಿಕ ನೀತಿಯ ತಿರುಳಾಗಿದೆ. ಇದನ್ನೇ ಭಾರತದ ಪ್ರಾಚೀನ ಆರ್ಥಿಕ ಪಂಡಿತ ಚಾಣಕ್ಯ ಹೇಳಿದ್ದು.

ಇದನ್ನೇ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಹೇಳಿದ್ದು. ಈ ಸಿದ್ಧಾಂತದಲ್ಲೇ ನಂಬಿಕೆ ಇಟ್ಟು ಭಾರತದ ಆರ್ಥಿಕ ಚಹರೆ ಬದಲಿಸಲು ಟೊಂಕ ಕಟ್ಟಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಕಾರ್ಯೋನ್ಮುಖವಾಗಿರುವುದು.

ನಿಮ್ಮ ಸುವರ್ಣನ್ಯೂಸ್.ಕಾಂ ಕೂಡ ಇದೇ ಸಿದ್ಧಾಂತದಲ್ಲಿ ಅಚಲ ವಿಶ್ವಾಸ ಇರಿಸಿದೆ. ದೇಶದ ಆಗುಹೋಗುಗಳ ಕುರಿತು ನಿರಂತರವಾಗಿ ಓದುಗರಿಗೆ ಸುದ್ದಿ ತಲುಪಿಸುವ ಸುವರ್ಣನ್ಯೂಸ್.ಕಾಂ, ದೇಶದ ಅರ್ಥ ವ್ಯವಸ್ಥೆಯಲ್ಲಾಗುವ ಸಣ್ಣ ಬದಲಾವಣೆಯನ್ನೂ ಸಮಾಜಕ್ಕೆ ತಲುಪಿಸುವ ಧ್ಯೇಯದೊಂದಿಗೆ ಮುನ್ನಡೆದಿದೆ.

ಅದರಂತೆ ದೇಶದ ಅರ್ಥ ವ್ಯವಸ್ಥೆಯ ಪ್ರಮುಖ ಅಂಗವಾದ ತೈಲದರ ಬದಲಾವಣೆ, ಆಭರಣ ದರಗಳಲ್ಲಿನ ವ್ಯತ್ಯಾಸವನ್ನು ನಿತ್ಯ ನಿರಂತರವಾಗಿ ತನ್ನ ಓದುಗರಿಗೆ ಸುವರ್ಣನ್ಯೂಸ್.ಕಾಂ ತಲುಪಿಸುತ್ತದೆ. ಆದರೆ ಈ ಸುದ್ದಿಗಳನ್ನು ಕೇವಲ ಒಬ್ಬ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಂಡು ಬರೆಯುವುದು ಪತ್ರಿಕಾಧರ್ಮವಲ್ಲ.

ತೈಲದರ, ಚಿನ್ನದ ದರದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಓರ್ವ ನಿರ್ದಿಷ್ಟ ವ್ಯಕ್ತಿಗೆ ಸಂಬಂಧಿಸಿದ್ದಲ್ಲ. ಪೈಸೆಗಳ ಲೆಕ್ಕಾಚಾರದಲ್ಲೂ ತೈಲದರ ಬದಲಾವಣೆಯಾದರೆ ಅದು ಭಾರತದ ಅರ್ಥ ವ್ಯವಸ್ಥೆಗೆ ಅಗಾಧ ಪರಿಣಾಮವನ್ನುಂಟು ಮಾಡಬಲ್ಲದು ಎಂಬುದು ಅರ್ಥಶಾಸ್ತ್ರ ಓದಿಲ್ಲದವನಿಗೂ ಗೊತ್ತಿರುತ್ತದೆ.

ಅದರಂತೆ ನೂರು ರೂ. ಗಳ ಆಸುಪಾಸಿನಲ್ಲಿ ಚಿನ್ನ ಅಥವಾ ಬೆಳ್ಳಿ ದರದಲ್ಲಿ ವ್ಯತ್ಯಾಸವಾದರೂ ಅದು ದೇಶದ ಅರ್ಥ ವ್ಯವಸ್ಥೆಗೆ ಸಾವಿರಾರು ಕೋಟಿ ರೂ.ಗಳ ವಹಿವಾಟು ತರಬಲ್ಲದು ಎಂಬುದಕ್ಕೆ ತುಂಬ ವಿಶೇಷ ಜ್ಞಾನವೇನೂ ಬೇಕಿಲ್ಲ.

ಹೀಗಾಗಿ ಆಧುನಿಕ ಭಾರತ ಕಟ್ಟಬೇಕಾದ ನಾವು ನೀವೆಲ್ಲಾ ಅರ್ಥ ವ್ಯವಸ್ಥೆಯ ಸಾಮೂಹಿಕ ಪರಿಣಾಮಗಳ ಬಗೆಗೆ ಚಿಂತಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಪಾತಾಳಕ್ಕೆ ಕುಸಿದ ಚಿನ್ನದ ದರ: 10 ಗ್ರಾಂ ಚಿನ್ನಕ್ಕೆ ಕೇವಲ...!

ತೈಲದರ ಬರೀ ಸುದ್ದಿ ಅನ್ನೋ ಮೂರ್ಖರು: ಇವ್ರೇ ಮೋದಿ ಹೇಳಿದ್ದ ಧೂರ್ತರು!