*2022ರ ಜೂನ್ 1ರಿಂದ  ಚಿನ್ನಾಭರಣಗಳ ಮಾರಾಟಕ್ಕೆ ಹಾಲ್ ಮಾರ್ಕ್ ಅತ್ಯಗತ್ಯ*ಈ ಕುರಿತು ಮಾಹಿತಿ ನೀಡಿರುವ BIS*ಹಾಲ್ ಮಾರ್ಕ್ ಕಡ್ಡಾಯಗೊಳಿಸಿರುವ ಜಿಲ್ಲೆಗಳ ಪಟ್ಟಿಯಲ್ಲಿ ಕೂಡ ತಿದ್ದುಪಡಿ

ನವದೆಹಲಿ ( ಮೇ 31): ನಾಳೆಯಿಂದ ಜೂನ್ (June) ತಿಂಗಳು ಆರಂಭ. ಹೊಸ ತಿಂಗಳ ಪ್ರಾರಂಭದಲ್ಲಿ ಹಣಕಾಸು ವಿಷಯಗಳಿಗೆ ಸಂಬಂಧಿಸಿದ ಕೆಲವು ನಿಯಮಗಳು ಬದಲಾಗೋದು ಸಹಜ. ಹಾಗೆಯೇ ಜೂನ್ 1ರಿಂದ ದೇಶಾದ್ಯಂತ ಚಿನ್ನದ ಹಾಲ್ ಮಾರ್ಕ್ ಗೆ (Hallmark) ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಕೇಂದ್ರ ಸರ್ಕಾರ (Central Government) ಹೊರಡಿಸಿರುವ ಅಧಿಸೂಚನೆ ( Notification) ಅನ್ವಯ ಭಾರತದಲ್ಲಿ (India) ಚಿನ್ನದ ವ್ಯಾಪಾರಿಗಳು (Jewellers) 2022ರ ಜೂನ್ 1ರಿಂದ ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳನ್ನು (Jewellery) ಮಾತ್ರ ಮಾರಾಟ ಮಾಡಬೇಕು.

ಈ ವರ್ಷದ ಏಪ್ರಿಲ್ ಪ್ರಾರಂಭದಲ್ಲಿ ನೋಡಲ್ ಏಜೆನ್ಸಿ ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಚಿನ್ನಾಭರಣಗಳು (Gold jewellery) ಹಾಗೂ ಚಿನ್ನದ ಕಲಾಕೃತಿಗಳ (Gold artefacts) ಹಾಲ್ ಮಾರ್ಕಿಂಗ್ ಆದೇಶ, 2020 ಅನ್ವಯ 2022ರ ಜೂನ್ 1ರಿಂದ ಭಾರತದಲ್ಲಿ ಜ್ಯುವೆಲ್ಲರಿಗಳು ಈಗಾಗಲೇ ನಿಗದಿಪಡಿಸಿರುವ 6 ಪರಿಶುದ್ಧತೆಯ ವರ್ಗಗಳೂ ಸೇರಿದಂತೆ ಉಳಿದವುಗಳಿಗೂ ಅನ್ವಯಿಸುವಂತೆ ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳನ್ನು ಮಾತ್ರ ಮಾರಾಟ ಮಾಡಬೇಕು. ಇನ್ನು ಮುಂದೆ 19 ಕ್ಯಾರೆಟ್‌ಗಳ ಆಭರಣಗಳನ್ನು ಮಾರಾಟ ಮಾಡೋವಾಗ ಕೂಡ ಹಾಲ್ ಮಾರ್ಕ್ (Hallmark) ಹೊಂದಿರೋದು ಕಡ್ಡಾಯ. 

Bank Holidays: ಜೂನ್ ತಿಂಗಳಲ್ಲಿ 8 ದಿನ ಬ್ಯಾಂಕಿಗೆ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ

ಈ ಹಿಂದಿನ ನಿಯಮದ ಅನ್ವಯ 14, 18, 20, 22, 23 ಮತ್ತು 24 ಕ್ಯಾರೆಟ್ ಪರಿಶುದ್ಧತೆಯ ಚಿನ್ನಾಭರಣಗಳಿಗೆ ಮಾತ್ರ ಹಾಲ್ ಮಾರ್ಕ್ ಕಡ್ಡಾಯವಾಗಿತ್ತು. ಆದರೆ, ಹೊಸ ನಿಯಮದ ಅನ್ವಯ ಉದಾಹರಣೆಗೆ ಗ್ರಾಹಕ 16 ಕ್ಯಾರೆಟ್ ಚಿನ್ನದ ಜ್ಯುವೆಲ್ಲರಿ ಅಥವಾ ಕಲಾಕೃತಿಗಳನ್ನು ಖರೀದಿಸಿದ್ರೆ ಕೂಡ ಚಿನ್ನದ ವ್ಯಾಪಾರಿ ಮಾರಾಟ ಮಾಡುವ ಮುನ್ನ ಬಿಐಎಸ್ (BIS) ಹಾಲ್ ಮಾರ್ಕ್ ಕೇಂದ್ರಗಳಿಂದ ಹಾಲ್ ಮಾರ್ಕ್ ಪಡೆಯೋದು ಅಗತ್ಯ. ದೇಶದ 256 ಜಿಲ್ಲೆಗಳಲ್ಲಿ 14,18 ಹಾಗೂ 22 ಕ್ಯಾರಟ್ (carat) ಚಿನ್ನಾಭರಣಗಳಿಗೆ 2021ರ ಜೂನ್ 23ರಿಂದ ಹಾಲ್ ಮಾರ್ಕ್ ಕಡ್ಡಾಯಗೊಳಿಸಲಾಗಿದೆ. 

ಹಾಲ್ ಮಾರ್ಕ್ ನಲ್ಲಿ ನಮೂದಿಸಿರುವ ಪರಿಶುದ್ಧತೆಯನ್ನೇ ಆ ಚಿನ್ನದ ವಸ್ತು ಹೊಂದಿರುವ ಕಾರಣ ಹೊಸ ಹಾಲ್ ಮಾರ್ಕ್ ನಿಯಮ ಚಿನ್ನದ ಆಭರಣಗಳು ಅಥವಾ ಕಲಾಕೃತಿಗಳನ್ನು ಖರೀದಿಸುವ ಗ್ರಾಹಕರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಲಿದೆ. ಹೊಸ ಬಿಐಎಸ್ ನಿಯಮ ಜೂನ್ 1ರಿಂದ ಹಾಲ್ ಮಾರ್ಕ್ ಕಡ್ಡಾಯಗೊಳಿಸಿರುವ ಜಿಲ್ಲೆಗಳ ಪಟ್ಟಿಯನ್ನು ಕೂಡ ತಿದ್ದುಪಡಿ ಮಾಡಿದೆ. ಕಳೆದ ವರ್ಷ ಜುಲೈಯಿಂದ ಸರ್ಕಾರ ಚಿನ್ನದ ಆಭರಣಗಳು ಹಾಗೂ ಕಲಾಕೃತಿಗಳ ಪರಿಶುದ್ಧತೆಗೆ ಸಂಬಂಧಿಸಿದ ಗುರುತುಗಳನ್ನು ಪರಿಷ್ಕರಿಸಿದೆ. ಇದರಲ್ಲಿ ಬಿಐಎಸ್ ಲೋಗೋ, ಪರಿಶುದ್ಧತೆ/ಪಿಟ್ ನೆಸ್ ಗ್ರೇಡ್ ಹಾಗೂ HUID ಎಂದು ಕರೆಯಲಾಗುವ ಆರು ಅಂಕೆಗಳ ಅಲ್ಫಾನ್ಯುಮರಿಕ್ ಕೋಡ್ ಕೂಡ ಇದೆ. ನೀವು ಖರೀದಿಸುವ ಪ್ರತಿ ಚಿನ್ನದ ವಸ್ತುವಿಗೆ 35ರೂ. ಹಾಲ್ ಮಾರ್ಕ್ ಶುಲ್ಕ ಕೂಡ ಇದೆ. ಚಿನ್ನಾಭರಣಗಳು ಹಾಗೂ ಚಿನ್ನದ ಕಲಾಕೃತಿಗಳ (ತಿದ್ದುಪಡಿ) ಆದೇಶ 2022ರ ಅನ್ವಯ ಹಾಲ್ ಮಾರ್ಕ್ ಕಡ್ಡಾಯ ಆದೇಶದ ಎರಡನೇ ಹಂತ 2022ರ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರ ಪ್ರತ್ಯೇಕ ಆದೇಶದಲ್ಲಿ ತಿಳಿಸಿದೆ. 

ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರೋದು ಖಂಡಿತ, ಜೂನ್ 1 ರಿಂದ ಬದಲಾಗಲಿದೆ ಈ 5 ನಿಯಮ!

ಹಾಲ್‌ಮಾರ್ಕ್ ಅಂದ್ರೇನು?
ಹಾಲ್ ಮಾರ್ಕ್ ಅಂದ್ರೆ ಚಿನ್ನಾಭರಣಗಳ ಶುದ್ಧತೆಯ ಮಾನದಂಡ ಪ್ರಮಾಣಪತ್ರ. ಹಾಲ್ ಮಾರ್ಕ್ ಇರೋ ಚಿನ್ನ ಪರಿಶುದ್ಧವಾಗಿದೆ ಎಂಬುದನ್ನು ಗ್ರಾಹಕರಿಗೆ ದೃಢಪಡಿಸುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಪರಿಶುದ್ಧತೆಗೆ ಮಾನದಂಡವಾಗಿದೆ. 2000ದಿಂದಲೇ ಹಾಲ್‌ಮಾರ್ಕ್ ಸೌಲಭ್ಯ ಭಾರತದಲ್ಲಿ ಆರಂಭವಾಗಿದ್ದು, 2005ರಿಂದ ಬೆಳ್ಳಿ ಮತ್ತಿತರ ಪ್ರಶಸ್ತ ಲೋಹಗಳ ಆಭರಣಗಳಿಗೂ ಹಾಲ್‌ಮಾರ್ಕ್ ಸೌಲಭ್ಯ ಶುರುವಾಗಿದೆ. ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟ ದೃಢೀಕರಿಸಲು ಹಾಲ್‌ಮಾರ್ಕ್ ಅಗತ್ಯ. ಹಾಲ್ ಮಾರ್ಕ್ ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ.