Asianet Suvarna News Asianet Suvarna News

ಇದು ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರೋದು ಖಂಡಿತ, ಜೂನ್ 1 ರಿಂದ ಬದಲಾಗಲಿದೆ ಈ 5 ನಿಯಮ!

ದೈನಂದಿನ ಆರ್ಥಿಕತೆ ವಿಚಾರದಲ್ಲಿ ಜೂನ್ ತಿಂಗಳಿಂದ ಐದು ಪ್ರಮುಖ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ನೇರವಾಗಿ ನಮ್ಮ ಜೇಬಿನ ಮೇಲೆ ಪರಿಣಾಮ ಬೀರುವುದು ಖಂಡಿತ. ಜೂನ್ 1 ರಿಂದ ಬದಲಾಗಲಿರುವ ಐದು ಪ್ರಮುಖ ವಿಚಾರಗಳು ಇಲ್ಲಿವೆ.

business news Inflation hit these 5 rules are changing from June will directly affect your pocket personal finance san
Author
Bengaluru, First Published May 27, 2022, 11:54 AM IST

ಬೆಂಗಳೂರು (ಮೇ. 27): ವರ್ಷದ ಐದನೇ ತಿಂಗಳು, ಮೇ ಮುಕ್ತಾಯವಾಗಲು ಇನ್ನೇನು ಕೆಲವೇ ದಿನಗಳಿವೆ. ಕೆಲಸದ ದಿನಗಳಲ್ಲಿ ಲೆಕ್ಕ ಹಾಕುವುದಾದರೆ, ಇಂದಿನ ದಿನವನ್ನು ಹೊರತುಪಡಿಸಿ ಕೇವಲ 2 ದಿನಗಳು ಮಾತ್ರವೇ ಬಾಕಿ ಇದೆ. ಪ್ರತಿ ತಿಂಗಳು ಆರಂಭವಾಗುವ ಹೊತ್ತಿಗೆ ಕೆಲ ಬದಲಾವಣೆಗಳು ಘೋಷಣೆ ಆಗುತ್ತವೆ.

ಅದರಂತೆ, ಈ ಬಾರಿಯೂ ಜೂನ್ 1 ರಿಂದ ಆಗಲಿರುವ ಬದಲಾವಣೆಗಳು ನೇರವಾಗಿ ನಮ್ಮ ಜೇಬಿಗೆ ಕತ್ತರಿ ಹಾಕಲಿದೆ. ಅಂಥದ್ದೊಂದು ಬದಲಾವಣೆ ಪೋಸ್ಟ್ ಆಫೀಸ್ ನಿಂದ ಬ್ಯಾಂಕ್ ನವರೆಗೂ ಆಗುತ್ತಿದೆ. ಜೂನ್ 1 ರಿಂದ ಆಗಲಿರುವ ಬದಲಾವಣೆಗಳು ಹಾಗೂ ಅದರಿಂದ ನಮ್ಮ ಆರ್ಥಿಕ ಜೀವನದ ಮೇಲಾಗಹುದಾದ ಪರಿಣಾಮಗಳು ಇಲ್ಲಿವೆ.

ಎಸ್ ಬಿಐ ಗೃಹ ಸಾಲದ ಬಡ್ಡಿ ಹೆಚ್ಚಳ: ಸಾರ್ವಜನಿಕ ವಲಯದ ದೇಶದ ಅತಿ ದೊಡ್ಡ ಬ್ಯಾಂಕ್ ಎಸ್ ಬಿಐ (SBI) ಗೃಹ ಸಾಲಗಳಿಗೆ ಬಾಹ್ಯ ಬೆಂಚ್‌ಮಾರ್ಕ್ ಲೆಂಡಿಂಗ್ ದರವನ್ನು (EBLR) ಹೆಚ್ಚಿಸಿದೆ. ಈಗ ಈ ಮಾನದಂಡದ ದರವು ಶೇಕಡಾ 0.40 ರಿಂದ ಶೇಕಡಾ 7.05 ಕ್ಕೆ ಏರಿದೆ. ಅದೇ ರೀತಿ, ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ಕೂಡ ಶೇ 0.40 ರಿಂದ ಶೇ 6.65 ಕ್ಕೆ ಏರಿಕೆಯಾಗಿದೆ. ಈ ಹಿಂದೆ ಈ ಎರಡೂ ದರಗಳು ಕ್ರಮವಾಗಿ ಶೇ.6.65 ಮತ್ತು ಶೇ.6.25ರಷ್ಟಿದ್ದವು. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಹೆಚ್ಚಿದ ಬಡ್ಡಿದರಗಳು ಜೂನ್ 01 ರಿಂದ ಅನ್ವಯವಾಗಲಿವೆ. ಎಸ್‌ಬಿಐ ಕನಿಷ್ಠ ವೆಚ್ಚ ಆಧಾರಿತ ಸಾಲದ ದರವನ್ನು ಶೇಕಡಾ 0.10 ರಷ್ಟು ಹೆಚ್ಚಿಸಿದೆ, ಇದು ಮೇ 15 ರಿಂದ ಜಾರಿಗೆ ಬಂದಿದೆ.

ಮೋಟಾರು ವಿಮೆ ಪ್ರೀಮಿಯಂ ದುಬಾರಿ (Motor insurance premium): ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇತ್ತೀಚಿನ ಅಧಿಸೂಚನೆಯ ಪ್ರಕಾರ, 1000 ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯದ ಕಾರುಗಳಿಗೆ ವಿಮಾ ಪ್ರೀಮಿಯಂ 2,094 ರೂಪಾಯಿ ಆಗಿತ್ತು. ಕೋವಿಡ್‌ಗೂ ಮುನ್ನ 2019-20ರಲ್ಲಿ 2,072 ರೂಪಾಯಿ ಆಗಿತ್ತು. ಅದೇ ಸಮಯದಲ್ಲಿ, 1000 ಸಿಸಿಯಿಂದ 1500 ಸಿಸಿ ವರೆಗಿನ ಕಾರುಗಳಿಗೆ ವಿಮಾ ಕಂತು 3,416 ರೂ ಆಗಿತ್ತು. ಇದು ಮೊದಲು ರೂ 3,221 ಆಗಿತ್ತು. ಇದಲ್ಲದೆ, ನಿಮ್ಮ ಕಾರಿನ ಎಂಜಿನ್ 1500 ಸಿಸಿಗಿಂತ ಹೆಚ್ಚಿದ್ದರೆ, ಈಗ ವಿಮಾ ಪ್ರೀಮಿಯಂ ರೂ 7,890 ಕ್ಕೆ ಇಳಿಯುತ್ತದೆ. ಮೊದಲು 7,897 ರೂಪಾಯಿ ಆಗಿತ್ತು. ಸರ್ಕಾರವು 3 ವರ್ಷಗಳ ಏಕ ಪ್ರೀಮಿಯಂ ಅನ್ನು ಹೆಚ್ಚಿಸಿದೆ. ಇನ್ನು 1000ಸಿಸಿವರೆಗಿನ ಕಾರುಗಳಿಗೆ ರೂ.6,521, 1500ಸಿಸಿವರೆಗಿನ ಕಾರುಗಳಿಗೆ ರೂ.10,540 ಮತ್ತು 1500ಸಿಸಿ ಮೇಲ್ಪಟ್ಟ ಕಾರುಗಳಿಗೆ ರೂ.24,596 ವೆಚ್ಚವಾಗಲಿದೆ. ಅದೇ ರೀತಿ ದ್ವಿಚಕ್ರ ವಾಹನಗಳ ವಿಮಾ ಕಂತು ಕೂಡ ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ, ಈಗ ಜೂನ್ 1 ರಿಂದ ಯಾವುದೇ ವಾಹನವನ್ನು ಖರೀದಿಸುವುದು ದುಬಾರಿಯಾಗಲಿದೆ.

ಚಿನ್ನದ ಹಾಲ್‌ಮಾರ್ಕಿಂಗ್:  ಎರಡನೇ ಹಂತದ ಕಡ್ಡಾಯ ಚಿನ್ನದ ಹಾಲ್‌ಮಾರ್ಕಿಂಗ್ (Gold Hallmarking)  ಜೂನ್ 01 ರಿಂದ ಜಾರಿಗೆ ಬರಲಿದೆ. ಈಗ 256 ಹಳೆಯ ಜಿಲ್ಲೆಗಳನ್ನು ಹೊರತುಪಡಿಸಿ, 32 ಹೊಸ ಜಿಲ್ಲೆಗಳಲ್ಲಿ ಮೌಲ್ಯಮಾಪನ ಮತ್ತು ಹಾಲ್‌ಮಾರ್ಕಿಂಗ್ ಕೇಂದ್ರಗಳು ತೆರೆಯಲಿವೆ. ಇದರ ನಂತರ, ಈ ಎಲ್ಲಾ 288 ಜಿಲ್ಲೆಗಳಲ್ಲಿ ಚಿನ್ನದ ಆಭರಣಗಳ ಹಾಲ್‌ಮಾರ್ಕ್ ಅನ್ನು ಕಡ್ಡಾಯಗೊಳಿಸಲಾಗುತ್ತದೆ. ಈಗ ಈ ಜಿಲ್ಲೆಗಳಲ್ಲಿ 14, 18, 20, 22, 23 ಮತ್ತು 24 ಕ್ಯಾರೆಟ್‌ಗಳ ಆಭರಣಗಳನ್ನು ಮಾತ್ರ ಮಾರಾಟ ಮಾಡಬಹುದು. ಹಾಲ್‌ಮಾರ್ಕ್ ಇಲ್ಲದೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

business news Inflation hit these 5 rules are changing from June will directly affect your pocket personal finance san

PETROL-DIESEL PRICE TODAY: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ ? ಇಲ್ಲಿದೆ ಪಟ್ಟಿ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಸೇವೆಗೂ ಹಣ ವೆಚ್ಚ:  ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಗೆ ಈಗ ವಿತರಕರ ಶುಲ್ಕವಿರುತ್ತದೆ ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಹೇಳಿದೆ. ಈ ಶುಲ್ಕಗಳು ಜೂನ್ 15 ರಿಂದ ಅನ್ವಯವಾಗುತ್ತವೆ. ಬದಲಾವಣೆಯ ನಂತರ, ಪ್ರತಿ ತಿಂಗಳ ಮೊದಲ ಮೂರು ವಹಿವಾಟುಗಳು ಉಚಿತವಾಗಿರುತ್ತದೆ. ನಾಲ್ಕನೇ ವಹಿವಾಟಿನಿಂದ ಪ್ರತಿ ಬಾರಿ 20 ರೂಪಾಯಿ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ನಗದು ಹಿಂಪಡೆಯುವಿಕೆ ಮತ್ತು ನಗದು ಠೇವಣಿ ಹೊರತುಪಡಿಸಿ, ಮಿನಿ ಸ್ಟೇಟ್‌ಮೆಂಟ್ ಹಿಂಪಡೆಯುವಿಕೆಯನ್ನು ಸಹ ವಹಿವಾಟಿನಲ್ಲಿ ಎಣಿಸಲಾಗುತ್ತದೆ. ಆದಾಗ್ಯೂ, ಮಿನಿ ಸ್ಟೇಟ್‌ಮೆಂಟ್‌ಗೆ ಶುಲ್ಕ 5 ರೂ ಮತ್ತು ಜಿಎಸ್‌ಟಿ ಆಗಿರುತ್ತದೆ.

ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು

ಆಕ್ಸಿಸ್ ಬ್ಯಾಂಕ್ ಈ ಖಾತೆಗಳಲ್ಲಿ ಹೆಚ್ಚಿನ ಹಣವನ್ನು ಇಡಬೇಕು:  
ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ (Axis Bank ) ಅರೆ-ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸುಲಭ ಉಳಿತಾಯ ಮತ್ತು ಸಂಬಳ ಖಾತೆಗಳಿಗಾಗಿ ಸರಾಸರಿ ಮಾಸಿಕ ಬ್ಯಾಲೆನ್ಸ್‌ನ ಮಿತಿಯನ್ನು 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಿದೆ. ಗ್ರಾಹಕರು ರೂ 01 ಲಕ್ಷ ಅವಧಿಯ ಠೇವಣಿ ಇರಿಸಿದರೆ, ಅವರು ಈ ಷರತ್ತಿನಿಂದ ವಿನಾಯಿತಿ ಪಡೆಯುತ್ತಾರೆ. ಅದೇ ರೀತಿ ಲಿಬರ್ಟಿ ಉಳಿತಾಯ ಖಾತೆಯ ಮಿತಿಯನ್ನು ಸಹ 15,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಹಕರು 25 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿದರೆ, ಅವರು ಈ ಹೆಚ್ಚಳದ ಮಿತಿಯಿಂದ ವಿನಾಯಿತಿ ಪಡೆಯುತ್ತಾರೆ. ಈ ಎರಡೂ ಬದಲಾವಣೆಗಳು ಜೂನ್ 01 ರಿಂದ ಜಾರಿಗೆ ಬರುತ್ತವೆ.

Follow Us:
Download App:
  • android
  • ios