ಬ್ಯಾಂಕಿಗೆ ಸಂಬಂಧಿಸಿ ಆರ್ ಬಿಐ ಪ್ರತಿ ತಿಂಗಳು ರಜಾಪಟ್ಟಿ ಬಿಡುಗಡೆ ಮಾಡುತ್ತದೆ.ಜೂನ್ ತಿಂಗಳ ರಜಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉಳಿದ ತಿಂಗಳುಗಳಿಗೆ ಹೋಲಿಸಿದ್ರೆ ಜೂನ್ ನಲ್ಲಿ ಬ್ಯಾಂಕಿಗೆ ಕಡಿಮೆ ರಜೆಗಳಿವೆ.
ನವದೆಹಲಿ (ಮೇ 24): ಮೇ (May) ತಿಂಗಳು ಮುಗಿದು ಜೂನ್ ಗೆ (June) ಕಾಲಿಡಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಜೂನ್ ತಿಂಗಳಲ್ಲಿ ಬ್ಯಾಂಕುಗಳಿಗೆ (Banks) ಎಷ್ಟು ದಿನ ರಜೆಯಿದೆ ಎಂಬ ಮಾಹಿತಿಯನ್ನು ಈಗಲೇ ತಿಳಿಯೋದು ಉತ್ತಮ. ಇದ್ರಿಂದ ಬ್ಯಾಂಕಿಗೆ ಸಂಬಂಧಿಸಿದ ಕೆಲಸಗಳನ್ನು ಯಾವ ದಿನ ಮಾಡಬಹುದು ಎಂಬ ಬಗ್ಗೆ ಈಗಲೇ ಒಂದು ಯೋಜನೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಅಂದ ಹಾಗೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಮಾಡಿರುವ ರಜಾ ದಿನಗಳ ಪಟ್ಟಿ ಅನ್ವಯ ಉಳಿದ ತಿಂಗಳುಗಳಿಗೆ ಹೋಲಿಸಿದ್ರೆ ಜೂನ್ ನಲ್ಲಿ (June) ಬ್ಯಾಂಕುಗಳಿಗೆ ಕನಿಷ್ಠ ದಿನಗಳ ರಜೆಯಿದೆ.
ಸ್ಥಳೀಯ ಹಬ್ಬಗಳ ಕಾರಣದಿಂದ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ಆರ್ ಬಿಐ (RBI) ರಜಾಪಟ್ಟಿಯಲ್ಲಿ (Holiday list) ನಿಗದಿಪಡಿಸಿರುವ ದಿನಗಳಿಗಿಂತ ಹೆಚ್ಚು ದಿನ ಮುಚ್ಚಿರುವ ಸಾಧ್ಯತೆಯಿದ್ದರೂ ಜೂನ್ ನಲ್ಲಿ ರಜಾದಿನಗಳು ಕಡಿಮೇನೆ. ಜೂನ್ ತಿಂಗಳಲ್ಲಿ ಬ್ಯಾಂಕಿಗೆ (Bank) ಭೇಟಿ ನೀಡಿ ಮಾಡಬೇಕಿರುವ ಕೆಲಸಗಳೇನಾದ್ರೂ ಇದ್ರೆ ನೀವು ಅವಶ್ಯವಾಗಿ ಆರ್ ಬಿಐ ರಜಾಪಟ್ಟಿಯನ್ನೊಮ್ಮೆ ಗಮನಿಸಲೇಬೇಕು. ಅಂದ ಹಾಗೇ ಬ್ಯಾಂಕುಗಳಿಗೆ ರಜೆಯಿದ್ರೂ ಆನ್ ಲೈನ್ ಬ್ಯಾಂಕಿಂಗ್ (Online Banking) ವ್ಯವಹಾರಗಳಿಗೆ ಯಾವುದೇ ತೊಂದರೆಯಿಲ್ಲ.ಹೀಗಾಗಿ ಇ-ಬ್ಯಾಂಕಿಂಗ್ (e-banking) ಹಾಗೂ ಎಟಿಎಂ (ATM) ಸೇವೆಗಳನ್ನು ಬಳಸಿಕೊಳ್ಳಬಹುದು. ಆದ್ರೆ ಬ್ಯಾಂಕ್ (Bank) ಶಾಖೆಗೆ ಭೇಟಿ ನೀಡಿಯೇ ಮಾಡಬೇಕಿರುವ ಕೆಲಸಗಳೇನಾದ್ರೂ ಇದ್ರೆ ಮಾತ್ರ ರಜಾದಿನಗಳನ್ನು (Holidays) ಗಮನಿಸಿಕೊಂಡು ಉಳಿದ ದಿನಗಳಲ್ಲಿ ಹೋಗೋದು ಉತ್ತಮ. ಇಲ್ಲವಾದರೆ ಸುಮ್ಮನೆ ಸಮಯ ವ್ಯರ್ಥವಾಗುತ್ತದೆ.
ಆರ್ ಬಿಐ (RBI) ರಜಾ ಕ್ಯಾಲೆಂಡರ್ (Holiday Calender) ಪ್ರಕಾರ ಜೂನ್ ನಲ್ಲಿ ವಾರದ ರಜೆಗಳನ್ನು ಹೊರತುಪಡಿಸಿ ಕೇವಲ 2 ದಿನಗಳಷ್ಟೇ ಬ್ಯಾಂಕುಗಳು (Banks) ಮುಚ್ಚಿರುತ್ತವೆ. ಅಂದರೆ ವಾರದ ರಜೆಗಳನ್ನು ಸೇರಿಸಿದ್ರೆ ಒಟ್ಟು 8 ದಿನ ಬ್ಯಾಂಕುಗಳು (Banks) ಕಾರ್ಯನಿರ್ವಹಿಸೋದಿಲ್ಲ. ಅಂದ ಹಾಗೇ ಎಲ್ಲ ಹಬ್ಬಗಳಿಗೆ ನೀಡುವ ರಜೆಗಳು ಎಲ್ಲ ರಾಜ್ಯಗಳು ಅಥವಾ ಪ್ರದೇಶಗಳಲ್ಲಿರುವ ಬ್ಯಾಂಕುಗಳಿಗೆ ಅನ್ವಯಿಸೋದಿಲ್ಲ. ಆಯಾ ರಾಜ್ಯ ಅಥವಾ ಪ್ರದೇಶಕ್ಕೆ ಸಂಬಂಧಿಸಿದ ಹಬ್ಬ (Festival) ಹಾಗೂ ಆಚರಣೆಗಳನ್ನು (Celebratons) ಪರಿಗಣಿಸಿ ರಜೆ ನೀಡಲಾಗುತ್ತದೆ. ಸಾರ್ವಜನಿಕ (Pulic) ಹಾಗೂ ಗೆಜೆಟೆಡ್ ರಜೆಗಳು (Gazetted holidays) ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಭಾನುವಾರ (Sunday) ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಬ್ಯಾಂಕ್ ರಜೆಗಳನ್ನು ಆರ್ ಬಿಐ (RBI) ಮೂರು ವರ್ಗಗಳನ್ನಾಗಿ ವಿಂಗಡಿಸಿದೆ. 1.ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, 2. ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜೆಗಳು ಹಾಗೂ 3.ಅಕೌಂಟ್ಸ್ ಕ್ಲೋಸಿಂಗ್ ರಜೆಗಳು. ಆರ್ ಬಿಐ (RBI) ರಜಾಪಟ್ಟಿಯಲ್ಲಿರೋ ರಜೆಗಳು ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಕೋಆಪರೇಟಿವ್ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಬ್ಯಾಂಕುಗಳಿಗೆ ಅನ್ವಯಿಸಲಿವೆ.
Crypto Market:ಮತ್ತೆ ಕುಸಿದ ಕ್ರಿಪ್ಟೋ ಮಾರುಕಟ್ಟೆ; ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
ಜೂನ್ ತಿಂಗಳ ರಜಾಪಟ್ಟಿ
ಜೂನ್ 2: ಮಹಾರಾಣಾ ಪ್ರತಾಪ್ ಜಯಂತಿ
ಜೂನ್ 5: ಭಾನುವಾರ
ಜೂನ್ 11: ಎರಡನೇ ಶನಿವಾರ
ಜೂನ್ 12: ಭಾನುವಾರ
ಜೂನ್ 15: ವೈ.ಎಂ.ಎ. ಡೇ/ಗುರು ಹರ್ ಗೋವಿಂದ್ ಜೀ ಜನ್ಮದಿನ/ ರಾಜಾ ಸಂಕ್ರಾಂತಿ
ಜೂನ್ 19: ಭಾನುವಾರ
ಜೂನ್ 25: ನಾಲ್ಕನೇ ಶನಿವಾರ
ಜೂನ್ 26: ಭಾನುವಾರ
