Asianet Suvarna News Asianet Suvarna News

Gold and Silver Price: ಚಿನ್ನ ದರ ಇಳಿಕೆ, ಬೆಳ್ಳಿ ಏರಿಕೆ: ಪ್ರಮುಖ ನಗರಗಳಲ್ಲಿ ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

Gold and Silver price today: ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ದೊಡ್ಡದಿದೆ. ಜತೆಗೆ ಚಿನ್ನದ ಮೇಲಿನ ವ್ಯಾಮೋಹವೂ ಹಲವರಿಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿನಿತ್ಯ ಏರುಪೇರಾಗುತ್ತದೆ. ಪ್ರತಿನಿತ್ಯದ ಬೆಲೆ ನೋಡಿಯೇ ಜನ ಹೂಡಿಕೆ ಮಾಡುತ್ತಾರೆ. ಹಾಗಾದರೆ ಇಂದು ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ?

Gold and silver price on May 1 2022 in Karnataka mnj
Author
Bengaluru, First Published May 1, 2022, 8:19 AM IST

ಬೆಂಗಳೂರು(ಮೇ.01): ಚಿನ್ನ ಮತ್ತು ಬೆಳ್ಳಿ ಅಂದರೆ ಬಹುತೇಕ ಮಹಿಳೆಯರಿಗೆ ಪ್ರಾಣ, ಮತ್ತು ಎಷ್ಟೋ ಕಷ್ಟದ ಸಮಯಗಳಲ್ಲಿ ಮನೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲುವುದೇ ಮನೆಯಲ್ಲಿರುವ ಚಿನ್ನ. ಇದೇ ಕಾರಣಕ್ಕಾಗಿ ಕೆಲವರು ಆಪತ್ಕಾಲಕ್ಕಾಗಿ ಎಂದು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇನ್ನು ಕೆಲವರು ಆಭರಣದ ಮೇಲಿನ ವ್ಯಾಮೋಹಕ್ಕಾಗಿ ಚಿನ್ನ ಕೊಳ್ಳುತ್ತಾರೆ. ಒಟ್ಟಿನಲ್ಲಿ ಚಿನ್ನ ಮತ್ತು ಬೆಳ್ಳಿಗೆ ಸದಾಕಾಲ ಬೇಡಿಕೆ ಇದ್ದೇ ಇದೆ. ಚಿನ್ನ ಮತ್ತು ಬೆಳ್ಳಿ ಇಂದಿನ ಬೆಲೆ ಈ ಕೆಳಗಿನಂತಿದೆ.

ಒಂದು ಗ್ರಾಂ (1GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  4,840
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.  5,280

ಎಂಟು ಗ್ರಾಂ (8GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.  38,720
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 42,240

ಹತ್ತು ಗ್ರಾಂ (10GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 48,400
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.  52,800

ನೂರು ಗ್ರಾಂ (100GM)

  • 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,84,000
  • 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,28,000

ಬೆಂಗಳೂರು ಹಾಗೂ ಇತರೆಡೆ ಇಂದಿನ ಗೋಲ್ಡ್ ರೇಟ್: ರಾಜಧಾನಿ ನಗರ ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 48,400 ಆಗಿದ್ದರೆ ಚೆನ್ನೈಯಲ್ಲಿ ಬೆಲೆ ರೂ. 49,030 ರೂ. ಆಗಿದೆ.  ಮುಂಬೈ, ಕೋಲ್ಕತ್ತಾ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 48,400 ರೂ. ಆಗಿದೆ.

ಇಂದಿನ ಬೆಳ್ಳಿ ದರ: ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಬೆಳ್ಳಿ ದರ ಕೆಜಿಗೆ 300ರೂ. ಏರಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಅವಲಂಬಿತವಾಗಿದ್ದು ಏರಿಕೆ, ಇಳಿಕೆಗಳು ಆಗುತ್ತಿರುತ್ತವೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ.

ಬೆಂಗಳೂರು ಹಾಗೂ ಇತರೆಡೆ ಸಿಲ್ವರ್ ರೇಟ್: ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ. 695, ರೂ. 6,950 ಹಾಗೂ ರೂ. 69,500 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ 69,500 ಆಗಿದ್ದರೆ ದೆಹಲಿ, ಮುಂಬೈ ಹಾಗೂ ಕೋಲ್ಕತ್ತದಲ್ಲಿ ಬೆಳ್ಳಿ ದರ ರೂ.63,500ಗಳಾಗಿದೆ.

ಇದನ್ನೂ ಓದಿ: Petrol- Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಏರಿಳಿತ: ಇಂದಿನ ಬೆಲೆ ಎಷ್ಟಿದೆ ನೋಡಿ

Follow Us:
Download App:
  • android
  • ios