Petrol- Diesel Price Today: ಕರ್ನಾಟಕದ ಜಿಲ್ಲೆಗಳಲ್ಲಿ ಇಂಧನ ದರ ಏರಿಳಿತ: ಇಂದಿನ ಬೆಲೆ ಎಷ್ಟಿದೆ ನೋಡಿ

Petrol Diesel Price in Karnataka Today: ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಇಂದು, ಮೇ 1, ರವಿವಾರದಂದು ಬಿಜಾಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್‌ ಬೆಲೆ ಏರಿಕೆಯಾಗಿದೆ. ಚಿತ್ರದುರ್ಗ ಹಾಗೂ ದಾವಣಗೆರೆ  ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ. 

Petrol diesel price in Karnataka today May 1 2022 district wise price list mnj

ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಗಗನಕ್ಕೇರಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್‌ - ಡೀಸೆಲ್‌ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಇನ್ನು ದೇಶದಲ್ಲಿ ಕೊರನಾ 4ನೇ ಅಲೆ ಭೀತಿ ಎದುರಾಗಿದೆ. ಈ ಬೆನ್ನಲ್ಲೇ ಹಲವು ರಾಜ್ಯಗಳನ್ನು ಕೊರೋನಾ ಗೈಡ್‌ಲೈನ್ಸ್ ಜಾರಿಗೊಳಿಸಿವೆ. ಈ ನಡುವೆ ಪೆಟ್ರೋಲ್‌ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್‌ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ. 

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಇಂದು, ಮೇ 1, ರವಿವಾರದಂದು ಬಿಜಾಪುರ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡಿಸೇಲ್‌ ಬೆಲೆ ಏರಿಕೆಯಾಗಿದೆ. ಚಿತ್ರದುರ್ಗ ಹಾಗೂ ದಾವಣಗೆರೆ  ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆಯಲ್ಲಿ ಇಳಿಕೆಯಾಗಿದೆ. ವಾಹನ ಇಂಧನದ ಬೆಲೆಗಳು ಹಲವಾರು ತಿಂಗಳುಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ ಮತ್ತು ದೇಶಾದ್ಯಂತ ದಾಖಲೆಯ ಹಣದುಬ್ಬರದ ನಡುವೆ ಕಾರ್ಯನಿರ್ವಹಿಸುತ್ತಿವೆ. 

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅನೇಕ ಅಂಶಗಳನ್ನು ಅವಲಂಬಿಸಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಇವುಗಳಲ್ಲಿ ಕೆಲವು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ದೈನಂದಿನ ಬದಲಾವಣೆಗಳು ಮತ್ತು ವಿದೇಶಿ ವಿನಿಮಯ ಏರಿಳಿತಗಳು ಮತ್ತು ವಿವಿಧ ರಾಜ್ಯಗಳಲ್ಲಿ ವಿಭಿನ್ನ ತೆರಿಗೆ ದರಗಳನ್ನು ಒಳಗೊಂಡಿವೆ. ದೇಶದಾದ್ಯಂತ ಇಂಧನ ಬೆಲೆಗಳು ಬದಲಾಗುತ್ತಿರುವುದಕ್ಕೆ ಸಾರಿಗೆ ವೆಚ್ಚವೂ ಒಂದು ಪ್ರಮುಖ ಕಾರಣ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್‌ - ಡೀಸೆಲ್‌ ಇಂದಿನ ದರ ಈ ಕೆಳಗಿದೆ. 

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

  • ಬಾಗಲಕೋಟೆ - ರೂ. 111.61   (25 ಪೈಸೆ ಇಳಿಕೆ)
  • ಬೆಂಗಳೂರು - ರೂ. 111.09  (0 ಪೈಸೆ ಏರಿಕೆ)
  • ಬೆಂಗಳೂರು ಗ್ರಾಮಾಂತರ - ರೂ. 111.09 (13 ಪೈಸೆ ಇಳಿಕೆ)
  • ಬೆಳಗಾವಿ - ರೂ. 111.67 (82 ಪೈಸೆ ಇಳಿಕೆ)
  • ಬಳ್ಳಾರಿ - ರೂ. 112.46 (27 ಪೈಸೆ ಇಳಿಕೆ)
  • ಬೀದರ್ - ರೂ. 111.39 (0 ಪೈಸೆ ಏರಿಕೆ)
  • ವಿಜಯಪುರ - ರೂ. 111.34 (53 ಪೈಸೆ ಏರಿಕೆ)
  • ಚಾಮರಾಜನಗರ - ರೂ. 111.22  (0 ಪೈಸೆ ಏರಿಕೆ)
  • ಚಿಕ್ಕಬಳ್ಳಾಪುರ - ರೂ. 111.09 (25 ಪೈಸೆ ಏರಿಕೆ)
  • ಚಿಕ್ಕಮಗಳೂರು - ರೂ. 112.62  (99 ಪೈಸೆ ಏರಿಕೆ)
  • ಚಿತ್ರದುರ್ಗ - ರೂ. 112.16  (73 ಪೈಸೆ ಇಳಿಕೆ)
  • ದಕ್ಷಿಣ ಕನ್ನಡ - ರೂ. 111.00  (10 ಪೈಸೆ ಏರಿಕೆ)
  • ದಾವಣಗೆರೆ - ರೂ. 112.40  (75 ಪೈಸೆ ಇಳಿಕೆ)
  • ಧಾರವಾಡ - ರೂ. 110.84  (0 ಪೈಸೆ ಏರಿಕೆ)
  • ಗದಗ - ರೂ. 111.50 (0 ಪೈಸೆ ಏರಿಕೆ)
  • ಕಲಬುರಗಿ - ರೂ. 110.81 (0 ಪೈಸೆ ಏರಿಕೆ)
  • ಹಾಸನ - ರೂ. 111.31 (06 ಪೈಸೆ ಏರಿಕೆ)
  • ಹಾವೇರಿ - ರೂ. 111.53 (03 ಪೈಸೆ ಇಳಿಕೆ)
  • ಕೊಡಗು - ರೂ. 112.36  (19 ಪೈಸೆ ಇಳಿಕೆ)
  • ಕೋಲಾರ - ರೂ. 110.96  (0 ಪೈಸೆ ಏರಿಕೆ)
  • ಕೊಪ್ಪಳ - ರೂ. 112.23  (05 ಪೈಸೆ ಏರಿಕೆ)
  • ಮಂಡ್ಯ - ರೂ. 111.29 (21 ಪೈಸೆ ಏರಿಕೆ)
  • ಮೈಸೂರು - ರೂ. 110.61 (0 ಪೈಸೆ ಇಳಿಕೆ)
  • ರಾಯಚೂರು - ರೂ. 110.91  (0 ಪೈಸೆ ಏರಿಕೆ)
  • ರಾಮನಗರ - ರೂ. 111.54   (02 ಪೈಸೆ ಇಳಿಕೆ)
  • ಶಿವಮೊಗ್ಗ - ರೂ. 111.89   (67 ಪೈಸೆ ಇಳಿಕೆ)
  • ತುಮಕೂರು - ರೂ. 111.97  (22 ಪೈಸೆ ಏರಿಕೆ)
  • ಉಡುಪಿ - ರೂ. 110.97   (43 ಪೈಸೆ ಏರಿಕೆ)
  • ಉತ್ತರ ಕನ್ನಡ - ರೂ. 112.94 ( 78 ಪೈಸೆ ಏರಿಕೆ)
  • ಯಾದಗಿರಿ - ರೂ. 111.53 (0 ಪೈಸೆ ಏರಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

  • ಬಾಗಲಕೋಟೆ - ರೂ. 95.28
  • ಬೆಂಗಳೂರು - ರೂ. 94.79
  • ಬೆಂಗಳೂರು ಗ್ರಾಮಾಂತರ - ರೂ. 94.79
  • ಬೆಳಗಾವಿ - ರೂ. 95.34
  • ಬಳ್ಳಾರಿ - ರೂ. 96.05
  • ಬೀದರ್ - ರೂ. 95.08
  • ವಿಜಯಪುರ - ರೂ. 95.03
  • ಚಾಮರಾಜನಗರ - ರೂ. 94.90 
  • ಚಿಕ್ಕಬಳ್ಳಾಪುರ - ರೂ. 94.79
  • ಚಿಕ್ಕಮಗಳೂರು - ರೂ. 96.03
  • ಚಿತ್ರದುರ್ಗ - ರೂ. 95.62
  • ದಕ್ಷಿಣ ಕನ್ನಡ - ರೂ. 94.68 
  • ದಾವಣಗೆರೆ - ರೂ. 95.84
  • ಧಾರವಾಡ - ರೂ. 94.59
  • ಗದಗ - ರೂ. 95.18
  • ಕಲಬುರಗಿ - ರೂ. 94.56
  • ಹಾಸನ - ರೂ. 94.86
  • ಹಾವೇರಿ - ರೂ. 95.21
  • ಕೊಡಗು - ರೂ. 95.80
  • ಕೋಲಾರ - ರೂ. 94.68
  • ಕೊಪ್ಪಳ - ರೂ. 95.84
  • ಮಂಡ್ಯ - ರೂ. 94.97
  • ಮೈಸೂರು - ರೂ. 94.35
  • ರಾಯಚೂರು - ರೂ. 94.67
  • ರಾಮನಗರ - ರೂ. 95.20
  • ಶಿವಮೊಗ್ಗ - ರೂ. 95.43
  • ತುಮಕೂರು - ರೂ. 95.59
  • ಉಡುಪಿ - ರೂ. 94.65
  • ಉತ್ತರ ಕನ್ನಡ - ರೂ. 96.43
  • ಯಾದಗಿರಿ - ರೂ. 95.21
Latest Videos
Follow Us:
Download App:
  • android
  • ios