ದೇಶದಲ್ಲಿ ಇಂದು ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಖುಷಿ ಮೂಡಿಸಿದೆ. 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಯಾಗಿದೆ.

ಬೆಂಗಳೂರು(ಆ.20): ದೇಶದಲ್ಲಿ ಇಂದು ಚಿನ್ನದ ದರದಲ್ಲಿ ಸ್ವಲ್ಪ ಮಟ್ಟಿನ ಇಳಿಕೆಯಾಗಿದ್ದು, ಆಭರಣ ಪ್ರಿಯರಲ್ಲಿ ಖುಷಿ ಮೂಡಿಸಿದೆ. 22 ಕ್ಯಾರೆಟ್ ಹಾಗೂ 24 ಕ್ಯಾರೆಟ್‌ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಯಾಗಿದೆ. ಯಾವಾಗ ಚಿನ್ನ ಹಾಗೂ ಬೆಳ್ಳಿ ಬೆಲೆ ತಗ್ಗುತ್ತದೋ ಆಗ ಖರೀದಿಸೋದು ಉತ್ತಮ. ಚಿನ್ನದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮೋಸವಂತೂ ಆಗೋದಿಲ್ಲ. ಚಿನ್ನ ಹಾಗೂ ಬೆಳ್ಳಿ ಒಡವೆ ಅಥವಾ ವಸ್ತುಗಳು ಕಷ್ಟ ಕಾಲದಲ್ಲಿ ನೆರವಿಗೆ ಬರುತ್ತವೆ ಕೂಡ. ಹಾಗಾಗಿ ಚಿನ್ನ ಹಾಗೂ ಬೆಳ್ಳಿ ಮೇಲಿನ ಹೂಡಿಕೆ ವ್ಯರ್ಥ ಎಂದು ಭಾವಿಸಬೇಕಾಗಿಲ್ಲ. ಹೀಗಾಗಿಯೇ ಇತ್ತೀಚೆಗೆ ಹೂಡಿಕೆದಾರರು ಚಿನ್ನದ ಮೇಲೆಯೇ ಹೆಚ್ಚಿನ ಹೂಡಿಕೆ ಮಾಡುತ್ತಾರೆ. ಹಾಗಾದ್ರೆ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಹೇಗಿದೆ? ಇಲ್ಲಿದೆ ಮಾಹಿತಿ.

ಒಂದು ಗ್ರಾಂ ಚಿನ್ನ (1GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ.4,700
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ.5,123

ಎಂಟು ಗ್ರಾಂ ಚಿನ್ನ (8GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 37,600

24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 40,984

ಹತ್ತು ಗ್ರಾಂ ಚಿನ್ನ (10GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 47,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 51,230

ನೂರು ಗ್ರಾಂ ಚಿನ್ನ (100GM)

22 ಕ್ಯಾರೆಟ್ ಆಭರಣ ಚಿನ್ನದ ಬೆಲೆ - ರೂ. 4,70,000
24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,12,300

ಬೆಂಗಳೂರು ಹಾಗೂ ಇತರೆಡೆ ಇಂದಿನ ಚಿನ್ನದ ದರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ.47,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 48,000, ರೂ. 47,000, ರೂ.47,000, ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 47,150 ರೂ. ಆಗಿದೆ. 

ಬೆಂಗಳೂರು ಹಾಗೂ ಇತರ ನಗರಗಳಲ್ಲಿ ಬೆಳ್ಳಿ ದರ

ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಒಂದು ಕೆಜಿ ಬೆಳ್ಳಿ ದರ 60,700 ರೂ.ಆಗಿದೆ. ಇಂದು, ಬೆಂಗಳೂರಿನಲ್ಲಿ 10 gm, 100 gm, 1000 gm (1ಕೆಜಿ) ಬೆಳ್ಳಿ ದರ ಕ್ರಮವಾಗಿ ರೂ.607, ರೂ. 6070 ಹಾಗೂ ರೂ. 61,700 ಗಳಾಗಿವೆ. ಇನ್ನುಳಿದಂತೆ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 60,700 ಆಗಿದ್ದರೆ, ಮುಂಬೈನಲ್ಲಿ ರೂ. 54,900 ಹಾಗೂ ಕೋಲ್ಕತ್ತದಲ್ಲಿ ಸಹ ರೂ. 54,900 ಗಳಾಗಿದೆ. ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೂಡ ಇಂದಿನ ಬೆಳ್ಳಿ ದರ ರೂ. 55,200 ಆಗಿದೆ.