ನವದೆಹಲಿ[ಜೂ. 18] ಚಿನ್ನದ ದರ ಏರಿಕೆ ಮತ್ತು ಇಳಿಕೆ  ಸುದ್ದಿ ಗಮನ ಸೆಳೆಯದೇ ಇರುವುದೇ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ.

ಯುಎಸ್ ಫೆಡರಲ್ ಬ್ಯಾಂಕ್ ಪಾಲಿಸಿ ಮೀಟಿಂಗ್ ಹತ್ತಿರದಲ್ಲಿ ಇರುವುದರಿಂದ  ರೂಪಾಯಿ ಎದುರು ಡಾಲರ್ ಮತ್ತಷ್ಟು ಶಕ್ತಿಶಾಲಿಯಾಗಿ ಕಂಗೊಳಿಸಿದ್ದು ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.

ಕದ್ದ ಚಿನ್ನ ಕಳ್ಳನ ಹೆಂಡ್ತಿಗೆ ಕೊಡಿಸಿದ ಇನ್ಸ್‌ಪೆಕ್ಟರ್‌ !

ಸಹಜವಾಗಿಯೇ ಡಾಲರ್ ಏರಿಕೆ ಕಂಡಾಗ ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡುತ್ತಾರೆ. ಇನ್ನು ಕೈಗಾರಿಕಾ ಘಟಕಗಳು ಬೆಳ್ಳಿ ಖರೀದಿಯನ್ನು ಹೆಚ್ಚಿಗೆ ಮಾಡಿದ್ದರಿಂದ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಎಂಸಿಎಕ್ಸ್[ಮಲ್ಟಿ ಕಾಮಾಡಿಟಿ ಎಕ್ಸ್ ಚೆಂಜ್]  ನಲ್ಲಿ 10 ಗ್ರಾಂ ಚಿನ್ನ 33,134 ರಲ್ಲಿ ಟ್ರೇಡ್ ಆಗುತ್ತ 113 ರೂ. ಏರಿಕೆ ಕಂಡಿದ್ದರೆ ಬೆಳ್ಳಿ ಕೆಜಿಗೆ 37,208 ರೂ. ಅಂದರೆ 116 ರೂ. ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.