Asianet Suvarna News Asianet Suvarna News

Ginger Price Hike: ಇತಿಹಾಸದಲ್ಲಿ ಇದೇ ಮೊದಲು, ಶುಂಠಿ ಬೆಲೆ 20 ಸಾವಿರಕ್ಕೆ ಏರಿಕೆ!

ದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಗೂ ಬಂಗಾರದ ಬೆಲೆ ಬಂದಿದೆ. ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ  100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ. ಏರಿಕೆ ಕಂಡಿದೆ.

Ginger  Quintal  price  increased  farmers happy in Karnataka gow
Author
First Published Jul 14, 2023, 4:59 PM IST

ಬೆಂಗಳೂರು (ಜು.14): ತರಕಾರಿ ಬೆಲೆ ಏರಿಕೆ ಬೆನ್ನಲ್ಲೇ ದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಗೂ ಬಂಗಾರದ ಬೆಲೆ ಬಂದಿದೆ. ಮಾರುಕಟ್ಟೆ ಇತಿಹಾಸದಲ್ಲೇ ಮೊದಲ ಬಾರಿಗೆ  100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ. ಏರಿಕೆ ಕಂಡಿದೆ.  2022ರಲ್ಲಿ 100 ಕೆಜಿ ಶುಂಠಿಗೆ 900 ರೂ. ರಿಂದ 1200 ರೂಪಾಯಿ ಇತ್ತು. ಅದಕ್ಕೆ ಹೋಲಿಸಿದರೆ ಶುಂಠಿ ಬೆಲೆ ಗಣನೀಯ ಏರಿಕೆ ಕಂಡಿದ್ದು, ರೈತರಿಗೆ ಜಾಕ್‌ಪಾಟ್ ಹೊಡೆದಿದೆ. ಹೀಗಾಗಿ ಹಳೆ ಶುಂಠಿಗೆ 18ರಿಂದ 20 ಸಾವಿರ ರೂ. ಇದ್ದು, ಈ ವರ್ಷ ಬೆಳೆದಿರುವ ಹೊಸ ಶುಂಠಿಗೆ 10 ರಿಂದ 12 ಸಾವಿರ ರೂ. ಇದೆ.

ರೈತನಿಗೆ ಸವಾಲಾದ ಟೊಮೆಟೋ ಬೆಳೆ ರಕ್ಷಣೆ: ತೋಟದಲ್ಲಿ ದೊಣ್ಣೆ ಹಿಡಿದು ಕಾವಲು

ಕಳೆದ ವರ್ಷದ ಶುಂಠಿಯನ್ನ ಹೊಲದಲ್ಲೇ ಉಳಿಸಿಕೊಂಡ ರೈತರಿಗೆ ಈ ಬಾರಿ ಚಿನ್ನದ ಬೆಲೆ ಸಿಗುತ್ತಿದೆ. ದೆಹಲಿ ಮತ್ತು ಉತ್ತರ ಭಾರತದಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, 2011 ರಿಂದ 2023 ರಲ್ಲಿ ಇದೆ ಮೊದಲ ಬಾರಿಗೆ ಶುಂಠಿ ಬೆಲೆ 20 ಸಾವಿರ ರೂ. ಗಡಿ ದಾಟಿರುವುದು. ಹೀಗಾಗಿ ಈಗಿನ ಲೆಕ್ಕದ ಪ್ರಕಾರ ಒಂದು ಎಕರೆ ಶುಂಠಿ ಬೆಳೆದರೆ 25 ಲಕ್ಷ ರೂ. ಲಾಭ ಬರಲಿದೆ.

ಹುಬ್ಬಳ್ಳಿ: ಟೊಮ್ಯಾಟೋಗೆ ಹೆಚ್ಚಿನ ಬೆಲೆ, ರೈತ ಫುಲ್‌ ಖುಶ್‌

ಸಾಮಾನ್ಯವಾಗಿ ಏಪ್ರಿಲ್‌- ಮೇ ತಿಂಗಳಲ್ಲಿ ಶುಂಠಿ ಬಿತ್ತನೆ ಮಾಡಲಾಗುತ್ತದೆ. 8 ತಿಂಗಳಿಗೂ ಹೆಚ್ಚಿನ ಅವಧಿಯ ಈ ಬೆಳೆ ಜನವರಿ ಸಮಯದಲ್ಲಿ ಕೈಗೆ ಸಿಗುತ್ತದೆ. ಆದರೆ ಇದೀಗ  ರೈತರು ಜನವರಿಯಲ್ಲಿ ತೆಗೆದ ಬೆಳೆಯನ್ನು ಮಾರಿರುತ್ತಾರೆ. ಮಾರದೇ ಇಟ್ಟಿರುವ ರೈತನಿಗೆ ಮಾತ್ರ ಶುಂಠಿ ಚಿನ್ನದ ಬೆಲೆ ತಂದು ಕೊಟ್ಟಿದೆ. ಹೆಚ್ಚಿನ ರೈತರ ಕೈಯಲ್ಲಿ ಈಗ ಶುಂಠಿ ಇಲ್ಲದಿರುವುದರಿಂದ ಬೆಲೆ ಬಂದರೂ ನಿರಾಶೆಯಾಗಿದೆ. ಇನ್ನು ಮಾರಾಟ ಮಾಡದೇ ಇಟ್ಟುಕೊಂಡಿರುವ ರೈತರಿಗೆ ಮಾತ್ರ ಜಾಕ್​ಪಾಟ್ ಹೊಡೆದಿರುವುದಂತೂ ಸುಳ್ಳಲ್ಲ.

Follow Us:
Download App:
  • android
  • ios