Ginger Price Hike: ಶುಂಠಿ ಬೆಳೆದ ರೈತ ರಾತ್ರೋ ರಾತ್ರಿ ಕುಬೇರ!
ಟಮೋಟೋ ದರ ಏರಿಕೆ ಬಳಿಕ ಇದೀಗ ಶುಂಠಿ ಸರದಿ, 60 ಕೆ.ಜಿ. ಶುಂಠಿ ಚೀಲಕ್ಕೆ 16-18 ಸಾವಿರ ರೂ ಬೆಲೆ. ಶುಂಠಿಗೆ ಬೆಲೆ ಇದೆ, ಆದ್ರೆ ಬಹುತೇಕ ರೈತರ ಬಳಿ ಬೆಳೆ ಇಲ್ಲ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜು.17): ರಾಜ್ಯದಲ್ಲಿ ಟೊಮೆಟೋಗೆ ಚಿನ್ನದ ಬೆಲೆ ಬಂದಿದೆ. ಹಾಗಾಗಿ, ರೈತರು ಬೆಳೆಯನ್ನ ಉಳಿಸಿಕೊಳ್ಳೋದೇ ಸಾಹಸವಾಗಿದೆ. ಹಗಲಿರುಳೆನ್ನದೆ ಟೊಮೆಟೋವನ್ನ ಕಾದಿದ್ದಾರೆ, ರೇಟ್ ನೋಡಿ ಫುಲ್ ಖುಷ್ ಆಗಿದ್ದಾರೆ. ಇದು ಟೊಮೆಟೋ ಕಥೆಯಾದ್ರೆ ಶುಂಠಿ ಕಥೆ ಟೊಮೆಟೋಗಿಂತ ಭಿನ್ನವಾಗಿದೆ. ಮಾರುಕಟ್ಟೆಯಲ್ಲಿ ತರಿಕಾರಿ ಬೆಲೆಗಳು ಗಗನಕಸುಮವಾಗಿದ್ರೆ ಶುಂಠಿ ಬೆಲೆ ಒಂದೇ ಸಲ ಮೂರಷ್ಟು ಹೆಚ್ಚಳವಾಗಿದ್ದು ಕಾಫಿನಾಡಿನಲ್ಲಿ ಶುಂಠಿ ಬೆಳೆ ಬೆಳೆದಿರುವ ರೈತರಿಗೆ ಡಬಲ್ ಖುಷಿಯಾಗಿದೆ.
60 ಕೆ.ಜಿ. ಶುಂಠಿ ಚೀಲಕ್ಕೆ 16-18 ಸಾವಿರ :
ಟೊಮೆಟೋ ಟ್ರೇಗೆ 3-4 ಸಾವಿರಕ್ಕೆ ಮಾರಾಟವಾಗಿದೆ. ಆದ್ರೆ, ಶುಂಠಿ ಬೆಲೆ ಗೊತ್ತಾ. 60 ಕೆ.ಜಿ. ಚೀಲಕ್ಕೆ 16-18 ಸಾವಿರ. ಅದೇ 60 ಕೆ.ಜಿ. ಚೀಲಕ್ಕೆ 3 ಸಾವಿರ ರೇಟ್ ಸಿಕ್ರೆ ರೈತರು ನೆಮ್ಮದಿಯ ನಿಟ್ಟುಸಿರು ಬಿಡ್ತಾರೆ. ಹಾಕಿದ ಬಂಡವಾಳಕ್ಕೆ ಡಬಲ್ ದುಡ್ಡು ಡು ಮಾಡಿಕೊಂಡು ಮುಂದಿನ ಬೆಳೆ ಬಗ್ಗೆ ಯೋಚನೆ ಮಾಡ್ತಾರೆ. ಆದ್ರೆ, ಅದೇ 60 ಕೆ.ಜಿ.ಚೀಲಕ್ಕೆ 16-18 ಸಾವಿರ ಇದ್ರೆ ಹೇಗಾಗ್ಬೋದು. ಎಕರೆಗೆ ಐದು ಲಕ್ಷ ಖರ್ಚು ಮಾಡಿದೋರು ವಾರ-ಹದಿನೈದು ದಿನದಲ್ಲಿ 2-3 ಕೋಟಿ ದುಡ್ಡು ನೋಡಿದ್ರು ಆಶ್ಚರ್ಯವಿಲ್ಲ. ಪ್ರಸ್ತುತ ಮಾರ್ಕೆಟ್‌ನಲ್ಲಿ ಶುಂಠಿ ರೇಟ್ 16-18 ಸಾವ್ರ ಇದೆ. ಆದ್ರೆ, ಬೆಳೆ ಕಡಿಮೆಯಿದ್ದು ಹೊದಲಲ್ಲಿ ಅರಳುತ್ತಿದೆ. ಡಿಸೆಂಬರ್ ವೇಳೆಗೂ ಶುಂಠಿ ರೇಟ್ ಹೀಗೆ ಇದ್ರೆ ಶುಂಠಿ ಬೆಳೆದ ರೈತರು ಕೋಟ್ಯಧೀಶ್ವರರಾಗುತ್ತಾರೆ.
Ginger Price Hike: ಇತಿಹಾಸದಲ್ಲಿ ಇದೇ ಮೊದಲು, ಶುಂಠಿ ಬೆಲೆ 20 ಸಾವಿರಕ್ಕೆ ಏರಿಕೆ!
ಬೆಲೆ ಇದೆ ಆದ್ರೆ ಬೆಳೆ ಇಲ್ಲ:
ಶುಂಠಿಯ ಇಂದಿನ ಮಾರ್ಕೆಟ್ ದರ ನೋಡಿ ಶುಂಠಿ ರೈತರು ಇದೇ ರೇಟ್ ಇರ್ಲಪ್ಪಾ ಅಂತ ಬೇಡಿಕೊಳ್ತಿದ್ದಾರೆ. ಶುಂಠಿ ದರ ನೋಡಿದರೆ ಆಕಾಶ ಮುಟ್ಟಿದೆ. ಆದ್ರೆ, ಮಾರ್ಕೆಟ್‌ನಲ್ಲಿ ಇರೋ ಶುಂಠಿಗಿಂತ ಹೊಲದಲಿರೋ ಶುಂಠಿಯೇ ಜಾಸ್ತಿ. ಯಾಕಂದ್ರೆ, ಶುಂಠಿ ಬೆಳೆ ಹಾಕೋದೆ ಏಪ್ರಿಲ್-ಮೇ ತಿಂಗಳಿನಲ್ಲಿ. ಶುಂಠಿ ಬೆಳೆ ಬರೋದಕ್ಕೆ ನವಂಬರ್-ಡಿಸೆಂಬರ್ವರೆಗೂ ಕಾಯಲೇಬೇಕು. ಆದ್ರೆ, ಅಲ್ಲಿವರಿಗೂ ಈ ದರ ಇರುತ್ತಾ ಅನ್ನೋದು ಯಕ್ಷಪ್ರಶ್ನೆಯಾಗಿದೆ. ರೇಟ್ ಇದ್ದೇ ಇರುತ್ತೆ ಅನ್ನೋದು ರೈತ ಆಶಾವಾದ. ಯಾಕಂದ್ರೆ, ಕಳೆದ ನಾಲ್ಕೈದು ವರ್ಷಗಳಿಂದ ಅತಿವೃಷ್ಠಿಯಿಂದ ಶುಂಠಿ ಬಹುತೇಕ ಹಾಳಾಗಿದೆ. ಈ ಬಾರಿ ಸಾಧಾರಣ ಮಳೆಯಾಗಿದ್ದು ಬೆಳೆ ಉತ್ತಮವಾಗಿದೆ.
ಇನ್ಫೋಸಿಸ್ ಬಳಿಕ ಉದ್ಯೋಗಿಗಳಿಗೆ ವೇತನ ಹೆಚ್ಚಿಸದೆ ಸೈಲೆಂಟಾದ ಟೆಕ್ ದೈತ್ಯ ವಿಪ್ರೋ
ಹಾಗಾಗಿ, ಈ ಬಾರಿ ಒಳ್ಳೆ ಫಸಲಿನ ಜೊತೆ ಹಣ ನೋಡುವ ನಿರೀಕ್ಷೆ ರೈತರದ್ದು. ಎಕರೆಗೆ 300-400 ಚೀಲ ಶುಂಠಿ ಬೆಳೆ ಬರುತ್ತೆ. ಅಷ್ಟು ಬೆಳೆ ಬಂದಾಗ 3 ಸಾವಿರಕ್ಕೆ ತೃಪ್ತಿ ಪಡೋ ರೈತರಿಗೆ 16-18 ಸಾವಿರ ಸಿಕ್ರೆ ಬಂಪರ ಲಾಟರಿಯೇ ಸರಿ. ಒಟ್ಟಾರೆ, ಸದಾ ನಷ್ಟ-ನಷ್ಟ ಅನ್ನೋ ರೈತರು ಈ ಬಾರಿ ಒಂದಷ್ಟು ಹಣ ನೋಡಿದ್ದಾರೆ. ಅದ್ರಲ್ಲೂ ಟೊಮೋಟೋ ಬೆಳೆದ ರೈತರಂತು ಡಬಲ್ ಖುಷಿಯಾಗಿದ್ದಾರೆ. ಟೊಮೋಟೋ ಬೆಳೆದು ಕೋಟ್ಯಧೀಶ್ವರರಾಗಿದ್ದನ್ನು ನೋಡಿದ್ದೇವೆ. ಮುಂದೆ ಶುಂಠಿ ಬೆಳೆದು ಕೋಟ್ಯಧೀಶ್ವರರಾಗೋದನ್ನು ನೋಡಬೇಕು.