ಈ ಒಂದು ಕೆಲಸ ಮಾಡದಿದ್ರೆ ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆ ಸಾಧ್ಯವಿಲ್ಲ!

ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಂಡ ತಕ್ಷಣ ನೀವು ಅದಕ್ಕೆ ವಹಿವಾಟಿನ ಮಿತಿ ನಿಗದಿಪಡಿಸೋದು ಅಗತ್ಯ. ಅಂದರೆ ಮೊದಲಿಗೆ ನೀವು ಬ್ಯಾಂಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಕಾರ್ಡ್ ನಿಯಂತ್ರಣ ಆಯ್ಕೆಯನ್ನು ಸಕ್ರಿಯಗೊಳಿಸೋದು ಅಗತ್ಯ. 

Getting A New Debit Or Credit Card You Wont Be Able To Transact Without Doing THIS anu

Business Desk:ನೀವು ಅಥವಾ ನಿಮ್ಮ ಕುಟುಂಬ ಸದಸ್ಯರು ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆದಿದ್ದೀರಾ? ಹಾಗಾದ್ರೆ ನೀವು ಕೆಲವೊಂದು ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಹೊಸ ಕಾರ್ಡ್ ಪಡೆದ ತಕ್ಷಣ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಬೇಕು. ಇಲ್ಲವಾದ್ರೆ ಮುಂದೆ ತೊಂದರೆ ಎದುರಾಗಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಪಡೆದ ತಕ್ಷಣ ನೀವು ಅದಕ್ಕೆ ವಹಿವಾಟಿನ ಮಿತಿ ನಿಗದಿಪಡಿಸೋದು ಅಗತ್ಯ. ಅಂದರೆ ಮೊದಲಿಗೆ ನೀವು ಬ್ಯಾಂಕ್ ನಿಯಂತ್ರಣ ವ್ಯವಸ್ಥೆಯಲ್ಲಿ ಕಾರ್ಡ್ ನಿಯಂತ್ರಣ ಆಯ್ಕೆಯನ್ನು ಸಕ್ರಿಯಗೊಳಿಸೋದು ಅಗತ್ಯ. ನೀವು ನೆಟ್ ಬ್ಯಾಂಕಿಂಗ್, ಮೊಬೈಲ್ ಅಪ್ಲಿಕೇಷನ್ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ಈ ಕೆಲಸ ಮಾಡಬಹುದು. ಈ ಕಾರ್ಡ್ ನಿಯಂತ್ರಣ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳದಿದ್ದರೆ ಯಾವುದೇ ಎಟಿಎಂ, ಆನ್ ಲೈನ್ ಪಾವತಿ ಅಥವಾ ಇನ್ಯಾವುದೇ ಕಡೆ ಈ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಲು ಸಾಧ್ಯವಾಗೋದಿಲ್ಲ. ಇನ್ನು ಇದು ಕಾರ್ಡ್ ವಹಿವಾಟಿನ ಸುರಕ್ಷತೆಯನ್ನು ಹೆಚ್ಚಿಸುವ ಜೊತೆಗೆ ಕಾರ್ಡ್ ಅನ್ನು ಹೇಗೆ ಬಳಸಬೇಕು ಎಂಬುದರ ಮೇಲೆ ನಿಯಂತ್ರಣ ಸಾಧಿಸಲು ನೆರವು ನೀಡುತ್ತದೆ.

ಹೊಸ ಮಾರ್ಗಸೂಚಿಗಳ ಅನ್ವಯ ಕಾರ್ಡ್ ಬಳಕೆದಾರರು ಈಗ ದೇಶೀಯ ಅಥವಾ ಅಂತಾರಾಷ್ಟ್ರೀಯ ವಹಿವಾಟುಗಳಿಗೆ ತಮ್ಮ ಕಾರ್ಡ್ ಬಳಸುವ ಬಗ್ಗೆ ಕೂಡ ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ ಆನ್ ಲೈನ್ ಖರೀದಿಗೆ, ಸಂಪರ್ಕರಹಿತ ಪಾವತಿಗಳಿಗೆ ಕಾರ್ಡ್ ಬಳಕೆ ಹಾಗೂ ಕಾರ್ಡ್ ವೆಚ್ಚದ ಮಿತಿಗಳಿಗೆ ಸಂಬಂಧಿಸಿ ಮೊದಲೇ ಮಿತಿಗಳನ್ನು ನಿಗದಿಪಡಿಸಲು ಅವಕಾಶವಿದೆ. 

SBI ಡೆಬಿಟ್ ಕಾರ್ಡ್ ಕಳೆದು ಹೋಗಿದೆಯಾ? ನೆಟ್ ಬ್ಯಾಂಕಿಂಗ್‌ ಬಳಸಿ ಬ್ಲಾಕ್ ಮಾಡೋದು ಹೇಗೆ?

ಆನ್ ಲೈನ್ ಬಳಕೆಗೆ ಡೆಬಿಟ್ ಕಾರ್ಡ್ ಸಕ್ರಿಯಗೊಳಿಸೋದು ಹೇಗೆ?
ಹೊಸ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನೀಡಿದ ತಕ್ಷಣ ಅದರ ಜೊತೆಗೆ ಕಾರ್ಡ್ ನಿಯಂತ್ರಣ ವಿಧಾನ ಕೂಡ ಅದರಷ್ಟಕ್ಕೆ ಸ್ವಿಚ್ ಆಫ್ ಆಗುತ್ತದೆ. ಅಂದರೆ ವಹಿವಾಟಿನ ನಿಯಂತ್ರಣಗಳನ್ನು ಸಕ್ರಿಯಗೊಳಿಸದೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಆನ್ ಲೈನ್ ಅಥವಾ ಆಪ್ ಲೈನ್ ವಹಿವಾಟಿಗೆ ಬಳಸಲು ಸಾಧ್ಯವಾಗೋದಿಲ್ಲ. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕ್ ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅಥವಾ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಡೌನ್ಲೋಡ್ ಮಾಡುವ ಮೂಲಕ ಅಥವಾ ಅವರ ಖಾತೆಗೆ ಲಾಗಿನ್ ಆಗುವ ಮೂಲಕ ವಹಿವಾಟಿನ ಮಿತಿ ನಿಗದಿಪಡಿಸಬಹುದು. 

ಒಂದು ವೇಳೆ ಯಾವುದೇ ವ್ಯಕ್ತಿಗೆ ಕಾರ್ಡ್ ನಿಯಂತ್ರಣ ವ್ಯವಸ್ಥೆಯನ್ನು ಸಕ್ರಿಯಗೊಳಿಸೋದು ಮರೆತು ಹೋದರೆ ಆಗ ಆಕೆಗೆ ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್ ಬಳಸಲು ಸಾಧ್ಯವಾಗೋದಿಲ್ಲ. ಆಗ ಅವರು ದೇಶದ ಯಾವುದೇ ರಾಜ್ಯದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ವಹಿವಾಟಿನ ಮಿತಿಯನ್ನು ನಿಗದಿಪಡಿಸಬಹುದು. 

ಆನ್ ಲೈನ್ ವಂಚನೆಗಿದೆ ಬಹುಮುಖ; ವಂಚಕರು ನಿಮ್ಮನ್ನು ಹೇಗೆಲ್ಲ ವಂಚಿಸ್ಬಹುದು ಗೊತ್ತಾ?

ಈ ಎಟಿಎಂನಲ್ಲಿ ಹಣ ಡ್ರಾ ಮಾಡಲು ಡೆಬಿಟ್ ಕಾರ್ಡ್ ಬೇಕಿಲ್ಲ
ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ ಹಾಗೂ ಹಿಟಾಚಿ ಪೇಮೆಂಟ್ ಸರ್ವೀಸ್ ಜಂಟಿಯಾಗಿ UPI ATM ಅಭಿವೃದ್ಧಿಪಡಿಸಿದೆ. UPI  ಪೇಮೆಂಟ್ ಬಳಕೆ ಮಾಡುತ್ತಿರುವ ಗ್ರಾಹಕರು ಯಾವುದೇ ಎಟಿಎಂ ಕಾರ್ಡ್ ಇಲ್ಲದೆ ಎಟಿಎಂನಿಂದ ಸುಲಭವಾಗಿ ಹಣ ಪಡೆದುಕೊಳ್ಳಬಹುದು. UPI ATM ಮಶಿನ್ ಬಳಿ ತೆರಳಿ ಹಣ ವಿತ್‌ಡ್ರಾ ಆಯ್ಕೆ ಕ್ಲಿಕ್ ಮಾಡಬೇಕು. ಈ ವೇಳೆ ವಿತ್‌ಡ್ರಾ ಮಾಡಬೇಕಿರುವ ಹಣ ಎಷ್ಟು ಅನ್ನೋದನ್ನು ಮಶಿನ್ ಕೇಳಲಿದೆ. ಇದರ ಜೊತೆಗೆ ಆಯ್ಕೆಯನ್ನೂ ನೀಡಲಿದೆ. 500, 1000, 2000 ರೂಪಾಯಿ ಆಯ್ಕೆ ನೀಡಲಿದೆ. ಈ ಆಯ್ಕೆಯಲ್ಲಿ ಪಡೆಯಬೇಕಾಗಿರುವ ಹಣ ಕ್ಲಿಕ್ ಮಾಡಿದಾಗ ಸ್ಕ್ಯಾನ್ ಕೋಡ್ ತೆರೆದುಕೊಳ್ಳಲಿದೆ.

ಈ ವೇಳೆ ನಿಮ್ಮ ಮೊಬೈಲ್‌ನಲ್ಲಿರುವ ಯುಪಿಐ ಸ್ಕ್ಯಾನರ್ ಒಪನ್ ಮಾಡಿ ಸ್ಕ್ಯಾನ್ ಮಾಡಬೇಕು. ಇದು ಮರ್ಚೆಂಟ್ ಸ್ಕ್ಯಾನ್ ರೀತಿ ಇರುವುದಿಲ್ಲ. UPI ATM ಸ್ಕ್ಯಾನ್ ಕೋಡ್ ಸ್ಕ್ಯಾನ್ ಮಾಡಿದ ಬೆನ್ನಲ್ಲೇ ನೀವು ನಗದು ಹಣ ಪಡೆಯುತ್ತಿದ್ದೀರಿ ಅನ್ನೋನೋಟಿಫಿಕೇಶನ್ ನಿಮಗೆ ಕಾಣಲಿದೆ. ನೀವು UPI ATM ಮಶಿನ್‌ನಲ್ಲಿ ಎಷ್ಟುರೂಪಾಯಿ ಬೇಕೆಂದು ಕ್ಲಿಕ್ ಮಾಡಿದ್ದೀರೋ, ಅಷ್ಟು ಹಣವನ್ನು ನಮೂದಿಸಿ. ಬಳಿಕ UPI ಪಿನ್ ಕೋಡ್ ಹಾಕಿದರೆ ನಿಮ್ಮ ಹಣ UPI ATM ಮಶಿನ್‌ಗೆ ವರ್ಗಾವಣೆಯಾಗಲಿದೆ. ಕ್ಷಣಾರ್ಧದಲ್ಲೇ UPI ATM  ಮಶಿನ್‌ ನಿಮಗೆ ಹಣ ನೀಡಲಿದೆ.
 

Latest Videos
Follow Us:
Download App:
  • android
  • ios