Asianet Suvarna News Asianet Suvarna News

ಕೊರೋನಾ ಹೊಡೆತಕ್ಕೆ ಭಾರತದ ಜಿಡಿಪಿ 7.3% ಕುಸಿತ; ಕಳೆದ 40 ವರ್ಷಗಳಲ್ಲೇ ಗರಿಷ್ಠ!

  • 2020-21 ಹಾಗೂ 2021-22 ರ ಸಾಲಿನ ಜಿಡಿಪಿಗೆ ಕೊರೋನಾ ಹೊಡೆತ
  • ಕಳೆದ ನಾಲ್ಕು ದಶಕಗಳಲ್ಲೇ ಪಾತಾಳಕ್ಕೆ ಕುಸಿದ ಜಿಡಿಪಿ
  • ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಡಿಪಿ 7.3 ಶೇಕಜಾ ಕುಸಿತ
GDP contracted 7 3 percent in Covid 19 affected financial year 2020 21 ckm
Author
Bengaluru, First Published May 31, 2021, 8:43 PM IST

ನವದೆಹಲಿ(ಮೇ.31): ಕೊರೋನಾ ವೈರಸ್ ಹೊಡೆತಕ್ಕೆ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿಯುತ್ತಿದೆ. ಇದಕ್ಕೆ ಪೂರಕವಾಗಿರುವ ಜಿಡಿಪಿ ಈಗಾಗಲೇ ಭಾರಿ ಕುಸಿತ ಕಂಡಿದೆ. ಕಳೆದ ನಾಲ್ಕು ದಶಕಗಳಲ್ಲಿ ಕಾಣದ ಕುಸಿತ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅನುಭವಿಸಿದೆ. 2020-21ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಶೇಕಡಾ 7.3 ರಷ್ಟು ಕುಸಿತ ಕಂಡಿದೆ.

ಲಾಕ್‌ಡೌನ್‌ನಿಂದ ಈ ಬಾರಿ ಆರ್ಥಿಕತೆಗೆ ಹೆಚ್ಚು ಪೆಟ್ಟಿಲ್ಲ!.

ಕಳೆದ ಹಣಕಾಸು ವರ್ಷ(2019-20)ಕ್ಕೆ ಹೋಲಿಸಿದರೆ 4 ಪ್ರತಿಶತದಷ್ಟು ಅಭಿವೃದ್ಧಿ ಕಂಡಿದೆ. ಆದರೆ ಒಟ್ಟಾರೆ ಕುಸಿತ ಭಾರತಕ್ಕೆ ತೀವ್ರ ಸಂಕಷ್ಟ ತಂದಿದೆ.  2020-21ರ ಹಣಕಾಸು ವರ್ಷ ಅಂತ್ಯಕ್ಕೆ 134.09 ಲಕ್ಷ ಕೋಟಿ ರೂ  ಎಂದು ಅಂದಾಜಿಸಲಾಗಿದೆ. ಇದು ಜಿಡಿಪಿಯ ಮೊದಲ ಪರಿಷ್ಕೃತ ಅಂದಾಜುಗೆ ಹೋಲಿಸಿದರೆ 145.69 ಲಕ್ಷ ಕೋಟಿ ರೂ. ಅಥವಾ $ 2.01 ಟ್ರಿಲಿಯನ್. 2019-20ಕ್ಕೆ  ಹೋಲಿಸಿದರೆ 2020-21ರ ಅವಧಿಯಲ್ಲಿ ಜಿಡಿಪಿಯಲ್ಲಿನ ಬೆಳವಣಿಗೆ -8.0 ಶೇಕಡಾ ಎಂದು ಅಂದಾಜಿಸಲಾಗಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 1.6 ರಷ್ಟು ಏರಿಕೆಯಾಗಿದೆ. ಸ್ಥಿರ (2011-12) ಜಿಡಿಪಿ 2020-21ರ  ನಾಲ್ಕನೇ ತ್ರೈಮಾಸಿಕ ಬೆಲೆಗಳು 38.96 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದೆ.  2019-20ರ ತ್ರೈಮಾಸಿಕದಲ್ಲಿ 38.33 ಲಕ್ಷ ಕೋಟಿ ರೂ.ಗಳಂತೆ 1.6 ಶೇಕಡಾ ಬೆಳವಣಿಗೆಯನ್ನು ತೋರಿಸಿದೆ ಎಂದು ಅಂಕಿಅಂಶ ಮತ್ತು ಸಚಿವಾಲಯ ತಿಳಿಸಿದೆ. 

ಈ ವರ್ಷದ ಭಾರತದ ಆರ್ಥಿಕತೆ ಶೇ.12 ವೃದ್ಧಿ ಮೂಡೀಸ್‌ ಸಂಸ್ಥೆಯಿಂದ ವರದಿ!.

2019-20ರಲ್ಲಿ ದೇಶದ ಜಿಡಿಪಿ ಶೇ. 4ರಷ್ಟು ಬೆಳವಣಿಗೆ ಕಂಡಿತ್ತು. ಇದು ಕಳೆದ 11 ವರ್ಷಗಳಲ್ಲಿ ಕನಿಷ್ಠವಾಗಿತ್ತು. 2020-21ರ ಮೊದಲ ತ್ರೈಮಾಸಿಕದಲ್ಲಿ 24.38ರಷ್ಟು ಕುಸಿತ ಕಾಣೋ ಮೂಲಕ ಆತ್ಯಂತ ಶೋಚನೀಯ ಪರಿಸ್ಥಿತಿಗೆ ತಲುಪಿತ್ತು.   2021ರ ಹಣಕಾಸು ವರ್ಷದಲ್ಲಿ ಶೇಕಡಾ 8 ರಷ್ಟು ಕುಸಿತ ನಿರೀಕ್ಷಿಸಲಾಗಿತ್ತು. ಆದರೆ 7.5 ರಷ್ಟು ಕುಸಿತ ಕಾಣೋ ಮೂಲಕ ಕಳೆದ ನಾಲ್ಕು ದಶಕಗಳಲ್ಲಿ ಅತ್ಯಂತ ಗರಿಷ್ಠ ಕುಸಿತ ಕಂಡ ಹಣಕಾಸು ವರ್ಷ ಅನ್ನೋ ಕುಖ್ಯಾತಿಗೆ ಗುರಿಯಾಗಿದೆ.

Follow Us:
Download App:
  • android
  • ios