Asianet Suvarna News Asianet Suvarna News

ಈ ವರ್ಷದ ಭಾರತದ ಆರ್ಥಿಕತೆ ಶೇ.12 ವೃದ್ಧಿ ಮೂಡೀಸ್‌ ಸಂಸ್ಥೆಯಿಂದ ವರದಿ!

ಕೊರೋನಾ ಲಾಕ್ಡೌನ್‌ ಕಾರಣದಿಂದಾಗಿ ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದ ದೇಶದ ಆರ್ಥಿಕತೆ| ಈ ವರ್ಷದ ಭಾರತದ ಆರ್ಥಿಕತೆ ಶೇ.12 ವೃದ್ಧಿ ಮೂಡೀಸ್‌ ಸಂಸ್ಥೆಯಿಂದ ವರದಿ!

Moody Analytics sees India GDP growth at 12pc in 2021 pod
Author
Bangalore, First Published Mar 20, 2021, 1:07 PM IST

ನವದೆಹಲಿ(ಮಾ.20): ಕೊರೋನಾ ಲಾಕ್ಡೌನ್‌ ಕಾರಣದಿಂದಾಗಿ ಕಳೆದ ವರ್ಷ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದ ದೇಶದ ಆರ್ಥಿಕತೆ ಈ ವರ್ಷ ಭರ್ಜರಿ ಪ್ರಮಾಣದಲ್ಲಿ ಪುಟಿದೇಳಲಿದ್ದು, 2021ರಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ.12ರಷ್ಟುದಾಖಲಾಗಲಿದೆ ಎಂದು ಮೂಡಿಸ್‌ ಅನಾಲೆಟಿಕ್ಸ್‌ ಹೇಳಿದೆ.

ಕಳೆದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ.0.4ರಷ್ಟುದಾಖಲಾಗಿತ್ತು. ಅದಕ್ಕೂ ಹಿಂದಿನ 2 ತ್ರೈಮಾಸಿಕದಲ್ಲಿ ಬೆಳವಣಿಗೆ ದರ ಮೈನಸ್‌ 7.5ರಷ್ಟುದಾಖಲಾಗಿದ್ದನ್ನು ಗಮನಿಸಿದಾಗ ಇದು ಅತ್ಯಂತ ಭರವಸೆದಾಯಕ ಬೆಳವಣಿಗೆ. ಈ ಗತಿ ಮುಂದಿನ ದಿನಗಳಲ್ಲಿ ಇನ್ನಷ್ಟುಭರವಸೆದಾಯಕವಾಗಿದೆ ಎಂದು ವರದಿ ಹೇಳಿದೆ.

ಕೋವಿಡ್‌ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ದೇಶೀಯ ಮತ್ತು ಬಾಹ್ಯ ಬೇಡಿಕೆಯಲ್ಲಿ ಉತ್ತಮ ಹೆಚ್ಚಳ ಕಂಡುಬಂದಿದೆ. ಇದರ ಪರಿಣಾಮ ಇತ್ತೀಚಿನ ತಿಂಗಳಲ್ಲಿ ಉತ್ಪಾದನಾ ವಲಯವು ಪ್ರಗತಿ ದಾಖಲಿಸಿದೆ. ದರ ಜೊತೆಗೆ ಮುಂದಿನ ದಿನಗಳಲ್ಲಿ ಖಾಸಗಿ ಬಳಕೆ ಪ್ರಮಾಣ ಮತ್ತು ವಸತಿಯೇತರ ಹೂಡಿಕೆ ಮತ್ತಷ್ಟುಹೆಚ್ಚಳದ ನಿರೀಕ್ಷೆ ಇದೆ. ಒಟ್ಟು ಒಟ್ಟಾರೆಯಾಗಿ 2021ರಲ್ಲಿ ದೇಶೀಯ ಬೇಡಿಕೆ ಹೆಚ್ಚಳದ ಮೂಲಕ ಆರ್ಥಿಕತೆಗೆ ಉತ್ತಮ ಚೇತರಿಕೆ ನೀಡಲಿದೆ ಎಂದು ವರದಿ ಹೇಳಿದೆ.

ಕಳೆದ ವರ್ಷ ಜಿಡಿಪಿಗೆ ಹೋಲಿಸಿ ಈ ವರ್ಷದ ಬೆಳವಣಿಗೆ ದರ ನಿರ್ಧರಿಸಲಾಗುತ್ತದೆ. ಕಳೆದ ವರ್ಷದ ಒಟ್ಟಾರೆ ಜಿಡಿಪಿ ದರ ಅತ್ಯಂತ ಕಡಿಮೆ ಇರುವ ಕಾರಣ ಈ ವರ್ಷದ ಜಿಡಿಪಿ ಬೆಳವಣಿಗೆ ದರ ಶೇ.12ರಷ್ಟುದಾಖಲು ಎಂದು ಪರಿಗಣಿಸಬಹುದು. ಇದನ್ನು ಕೋವಿಡ್‌ ಪೂರ್ವ ಸ್ಥಿತಿ ಅಂದರೆ 2020ರ ಮಾಚ್‌ರ್‍ಗೆ ಹೋಲಿಸಿದರೆ ಅದು ಶೇ.4.4ರಷ್ಟಾಗುತ್ತದೆ ಎಂದು ವರದಿ ಹೇಳಿದೆ.

Follow Us:
Download App:
  • android
  • ios