ಸುದ್ದಿ ಸಂಸ್ಥೆಯ ಸ್ವಾಧೀನವು ಕಾರ್ಯತಂತ್ರದ ಸ್ವರೂಪದ್ದಾಗಿದೆ ಎಂದು ಕಂಪನಿ ಹೇಳಿದೆ.

ನವದೆಹಲಿ (ಡಿ.16): ಅದಾನಿ ಗ್ರೂಪ್ ಒಡೆತನದ ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್ ಸುದ್ದಿ ಸಂಸ್ಥೆ ಐಎಎನ್‌ಎಸ್ ಇಂಡಿಯಾ ಪ್ರೈವೇಟ್‌ನಲ್ಲಿ ಹೆಚ್ಚಿನ ಪಾಲನ್ನು ಪಡೆದುಕೊಂಡಿದೆ. ಎಎಂಜಿ ಮೀಡಿಯಾ ನೆಟ್‌ವರ್ಕ್ಸ್ 50.5% ಪಾಲನ್ನು ಹೊಂದಿದೆ. ಇದರಲ್ಲಿ ಈಕ್ವಿಟಿ ಷೇರುಗಳನ್ನು ಹೊಂದಿದ್ದು, ಮತದಾನದ ಹಕ್ಕುಗಳೊಂದಿಗೆ ಮತ್ತು ಮತದಾನದ ಹಕ್ಕುಗಳಿಲ್ಲದ ಷೇರುಗಳನ್ನೂ ಹೊಂದಿದೆ ಎಂದು ಐಎಎನ್‌ಎಸ್‌ ಇಂಡಿಯಾ, ಕಂಪನಿಯು ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ. ಸ್ವಾಧೀನಕ್ಕೆ ಅನುಗುಣವಾಗಿ, ಐಎಎನ್‌ಎಸ್‌ ಅದಾನಿ ಮೀಡಿಯಾ ನೆಟ್‌ವರ್ಕ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ.

AMNL ಐಎಎನ್‌ಎಸ್ ಮತ್ತು ಐಎಎನ್‌ಎಸ್‌ನ ಷೇರುದಾರ ಸಂದೀಪ್ ಬಾಮ್‌ಜೈ ಅವರೊಂದಿಗೆ ಐಎಎನ್‌ಎಸ್‌ಗೆ ಸಂಬಂಧಿಸಿದಂತೆ ತಮ್ಮ ಅಂತರ-ಹಕ್ಕುಗಳನ್ನು ದಾಖಲಿಸಲು ಷೇರುದಾರರ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ತಿಳಿಸಿದೆ. 

2 ಕೋಟಿ ಹಣ, ಐಷಾರಾಮಿ ವಸ್ತುಗಳ ಲಂಚ ಪಡೆದ ಮಹುವಾ! ಇನ್ನೂ 30 ವರ್ಷ ಹೋರಾಡುವೆ ಎಂದು ಗುಡುಗು

ಮಾಧ್ಯಮ ಜಾಲವನ್ನು ಸ್ವಾಧೀನಪಡಿಸಿಕೊಳ್ಳುವುದು ಕಾರ್ಯತಂತ್ರದ ಸ್ವರೂಪದ್ದಾಗಿದೆ ಎಂದು ಕಂಪನಿ ಹೇಳಿದೆ. ಐಎಎನ್‌ಎಸ್‌ ಅಧಿಕೃತ ಷೇರು ಬಂಡವಾಳ 20 ಲಕ್ಷ ರೂ. 2023 ರ ಆರ್ಥಿಕ ವರ್ಷದಲ್ಲಿ ಕಂಪನಿಯು 11.86 ಕೋಟಿ ರೂಪಾಯಿಗಳ ವಹಿವಾಟು ವರದಿ ಮಾಡಿದೆ. ಅದಾನಿ ಗ್ರೂಪ್‌ ಈಗಾಗಲೇ ಎನ್‌ಡಿಟಿವಿ ಸುದ್ದಿವಾಹಿನಿಯನ್ನೂ ಖರೀದಿ ಮಾಡಿದೆ.

ಒಂದು ವಾರದಲ್ಲಿ 1.83 ಲಕ್ಷ ಕೋಟಿ ಸಂಪತ್ತು ಹೆಚ್ಚಿಸಿಕೊಂಡ ಗೌತಮ್‌ ಅದಾನಿ: ಶುಕ್ರದೆಸೆ ಅಂದ್ರೆ ಇದಪ್ಪಾ!