Asianet Suvarna News Asianet Suvarna News

ಗೌತಮ್ ಅದಾನಿ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ; ಬರೀ 15 ದಿನಗಳಲ್ಲಿ ನಂ.3ನಿಂದ ನಂ.2 ಪಟ್ಟಕ್ಕೆ ಜಿಗಿತ

*ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಅಲಂಕರಿಸಲು ಇನ್ನು ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ 
*ಅದಾನಿ ಹಾಗೂ  ಅವರ ಕುಟುಂಬ ಸದಸ್ಯರ ಒಟ್ಟು ಸಂಪತ್ತು ಅಂದಾಜು 155.7 ಬಿಲಿಯನ್ ಡಾಲರ್ 
*ಬರ್ನಾರ್ಡ್ ಅರ್ನಾಲ್ಟ್  ಅವರ ಸಂಪತ್ತು 155.2 ಬಿಲಿಯನ್ ಡಾಲರ್
 

Gautam Adani edges past Bernard Arnault to become worlds second richest person
Author
First Published Sep 16, 2022, 1:45 PM IST

ನವದೆಹಲಿ (ಸೆ.16): ಅದಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೌತಮ್ ಅದಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಅಲಂಕರಿಸಲು ಇನ್ನು ಕೇವಲ ಒಂದು ಹೆಜ್ಜೆಯಷ್ಟೇ ಬಾಕಿ ಉಳಿದಿದೆ. ಹೌದು, ಫೋರ್ಬ್ಸ್ ಅಂಕಿಅಂಶಗಳ ಪ್ರಕಾರ ಶುಕ್ರವಾರ ಗೌತಮ್ ಅದಾನಿ ಜೆಫ್‌ ಬೆಜೋಸ್‌ ಹಾಗೂ ಫ್ರಾನ್ಸ್ ನ ಬರ್ನಾರ್ಡ್ ಅರ್ನಾಲ್ಟ್ ಇಬ್ಬರನ್ನೂ ಹಿಂದಿಕ್ಕಿವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅದಾನಿ ಹಾಗೂ  ಅವರ ಕುಟುಂಬ ಸದಸ್ಯರ ಒಟ್ಟು ಸಂಪತ್ತು ಅಂದಾಜು 155.7 ಬಿಲಿಯನ್ ಡಾಲರ್ ಇತ್ತು. ಅದೇ ಬರ್ನಾರ್ಡ್ ಅರ್ನಾಲ್ಟ್  ಅವರ ಸಂಪತ್ತು 155.2 ಬಿಲಿಯನ್ ಡಾಲರ್ ಇತ್ತು. ಇನ್ನು ಜೆಫ್‌ ಬೆಜೋಸ್‌ ಅವರ ಒಟ್ಟು ಸಂಪತ್ತು 149.7 ಬಿಲಿಯನ್ ಡಾಲರ್ ನಷ್ಟಿದೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ 273.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಭಾರತದ ಉದ್ಯಮಿ ಗೌತಮ್ ಅದಾನಿ ಪಾಲಿಗೆ 2022 ಅದೃಷ್ಟದ ವರ್ಷ ಅಂದ್ರೆ ತಪ್ಪಿಲ್ಲ.ಈ ವರ್ಷದ ಫೆಬ್ರವರಿಯಲ್ಲಿ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಅದಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಗುರುತಿಸಿಕೊಂಡಿದ್ದರು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದ ಅದಾನಿ, 2022ರ ಏಪ್ರಿಲ್ ನಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಇನ್ನು ಆಗಸ್ಟ್ ಅಂತ್ಯದಲ್ಲಷ್ಟೇ ಅದಾನಿ ವಿಶ್ವದ ಮೂರನೇ ಶ್ರೀಮಂತ ಉದ್ಯಮಿ ಸ್ಥಾನಕ್ಕೇರಿದ್ದರು. ಅಂದ್ರೆ ಇದಾಗಿ ಒಂದು ತಿಂಗಳು ಕಳೆಯುವ ಮುನ್ನವೇ ಎರಡನೇ ಸ್ಥಾನಕ್ಕೇರಿದ ಸಾಧನೆ ಮಾಡಿದ್ದಾರೆ

ಮೈಕ್ರೋಸಾಫ್ಟ್ (Microsoft) ಸಂಸ್ಥಾಪಕ  ಬಿಲ್ ಗೇಟ್ಸ್ (Bill Gates) 105.3 ಬಿಲಿಯನ್ ಡಾಲರ್, ಲಾರೆ ಎಲಿಸನ್ (Larry Ellison) 98.3 ಬಿಲಿಯನ್ ಡಾಲರ್ ಹಾಗೂ ವಾಲ್ ಸ್ಟ್ರೀಟ್ (Wall Street)  ಹೂಡಿಕೆದಾರ ವಾರೆನ್ ಬಫೆಟ್ (Warren Buffet) 96.5 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಸಾಲದ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಬಿಪಿಎಲ್ ಆರ್ ಶೇ.13.45ಕ್ಕೆ ಏರಿಕೆ

2022ರಲ್ಲಿ ಸಂಪತ್ತಿನಲ್ಲಿ ಭಾರೀ ಏರಿಕೆ
ಬರೀ 2022ರಲ್ಲೇ ಅದಾನಿ ಸಂಪತ್ತಿಗೆ 60.9 ಬಿಲಿಯನ್ ಅಮೆರಿಕನ್ ಡಾಲರ್‌ ಸೇರ್ಪಡೆಗೊಂಡಿದೆ. ಇದು ಇತರ ಉದ್ಯಮಿಗಳಿಗಿಂತ ಐದು ಪಟ್ಟು ಹೆಚ್ಚಿನ ಏರಿಕೆಯಾಗಿದೆ. ಕೋವಿಡ್ ಪ್ರಾರಂಭಕ್ಕೂ ಮುನ್ನ ಅಂದ್ರೆ 2020ರ ಜನವರಿ 1ರಂದು ಗೌತಮ್ ಅದಾನಿ ಸಂಪತ್ತು 10 ಬಿಲಿಯನ್ ಡಾಲರ್ ಆಗಿತ್ತು. ಅದೇ ಸಮಯದಲ್ಲಿ ಮುಖೇಶ್ ಅಂಬಾನಿ ಸಂಪತ್ತು 59 ಬಿಲಿಯನ್ ಅಮೆರಿಕನ್ ಡಾಲರ್. ಆದ್ರೆ ಕೇವಲ ಎರಡು ವರ್ಷಗಳ ಅವಧಿಯಲ್ಲಿ ಅದಾನಿ ಸಂಪತ್ತು ಆರು ಪಟ್ಟು ಹೆಚ್ಚಳವಾಗಿದೆ. ಇಂದು ಅದಾನಿ ಬಳಿಯಿರುವ ಸಂಪತ್ತು 155.7 ಬಿಲಿಯನ್ ಡಾಲರ್. ಅದೇ ಮುಖೇಶ್ ಅಂಬಾನಿ ಅವರ ಸಂಪತ್ತು 92.3 ಬಿಲಿಯನ್ ಡಾಲರ್. ಅದಾನಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿಎರಡನೇ ಸ್ಥಾನಕ್ಕೇರಿದ್ರೆ, ಅಂಬಾನಿ 8ನೇ ಸ್ಥಾನದಲ್ಲಿದ್ದಾರೆ. 

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶ: ಸಿಎಂ ಬೊಮ್ಮಾಯಿ

ಉದ್ಯಮ ವಿಸ್ತರಣೆ 
60 ವರ್ಷದ ಅದಾನಿ ಕಳೆದ ಐದು ವರ್ಷಗಳಲ್ಲಿ ತನ್ನ ಉದ್ಯಮ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿಕೊಂಡಿದ್ದಾರೆ. ಕಲ್ಲಿದ್ದಲು ಗಣಿಗಾರಿಕೆಯಿಂದ ಹಿಡಿದು ಬಂದರು ತನಕ, ಸಿಮೆಂಟ್, ಮಾಧ್ಯಮ, ಸಿಟಿ ಗ್ಯಾಸ್ ವಿತರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅದಾನಿ ಗ್ರೂಪ್ ಪ್ರಸ್ತುತ ಭಾರತದ ಅತೀದೊಡ್ಡ ಖಾಸಗಿ ವಲಯದ ಬಂದರು ಹಾಗೂ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಯಾಗಿದೆ. ಸೆಪ್ಟೆಂಬರ್ 2021ರಲ್ಲಿ ಗೌತಮ್ ಅದಾನಿ 1ಲಕ್ಷ ಕೋಟಿ ರೂ.( 13 ಬಿಲಿಯನ್ ಡಾಲರ್) ಮಾರುಕಟ್ಟೆ ಮೌಲ್ಯ ಹೊಂದಿರುವ 5 ಕಂಪನಿಗಳನ್ನು ಸ್ಥಾಪಿಸಿದ್ದರು. ಹುರುನ್ ಇಂಡಿಯಾ (Hurun India) ಶ್ರೀಮಂತರ ಪಟ್ಟಿ ಪ್ರಕಾರ ಇತರರಿಗೆ ಹೋಲಿಸಿದ್ರೆ 2021ರಲ್ಲಿ ಅದಾನಿ ಅವರ ಸಂಪತ್ತು ಭಾರೀ ಹೆಚ್ಚಳ ಕಂಡಿತ್ತು. ಅವರ ಸಂಪತ್ತಿಗೆ 49 ಬಿಲಿಯನ್ ಡಾಲರ್ ಸೇರ್ಪಡೆಯಾಗಿತ್ತು. ಅಂದ್ರೆ ಆ ಅವಧಿಯಲ್ಲಿ ವಾರಕ್ಕೆ  6,000 ಕೋಟಿ ರೂ.ನಂತೆ ಅವರ ಸಂಪತ್ತು ಹೆಚ್ಚಳಗೊಳ್ಳುತ್ತ ಸಾಗಿತ್ತು. 

Follow Us:
Download App:
  • android
  • ios