ಕೇಂದ್ರದ ಹಣ ನೇರವಾಗಿ ಜನರ ಕೈಗೆ ಹೋಗ್ತಿದೆ; ಮೋದಿ ಸರ್ಕಾರದ ಡಿಜಿಟಲ್‌ ಕ್ಷೇತ್ರದ ಕ್ರಾಂತಿಯೇ ಕಾರಣ: ರಾಜೀವ್ ಚಂದ್ರಶೇಖರ್

ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಡಿಜಿಟಲ್ ಕೌಶಲ್ಯ ಕುರಿತ ಚರ್ಚೆಗಳು ನಡೆಯಲಿದೆ ಎಂದು ತಿಳಿದುಬಂದಿದೆ.
ಹಾಗೂ, ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯಲ್ಲಿ ಕಾರ್ಪೊರೇಟ್ಸ್ ಮತ್ತು ಸ್ಟಾರ್ಟ್ಅಪ್ ಎಕ್ಸಿಬಿಷನ್ ಕೂಡ ನಡೆಯಲಿದೆ.

g20 digital innovation alliance bengaluru summit inaugurated by rajeev chandrasekhar ash

ಬೆಂಗಳೂರು (ಆಗಸ್ಟ್‌ 17, 2023): ಭಾರತದಲ್ಲಿ ಜಿ20 - ಶೃಂಗಸಭೆಯ ಭಾಗವಾಗಿ ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆ ಬೆಂಗಳೂರಲ್ಲಿ ನಡೀತಿದೆ. G20 ದೇಶಗಳ ಪ್ರತಿನಿಧಿಗಳು ಸೇರಿದಂತೆ ಜಾಗತಿಕ ತಜ್ಞರು ಹಾಗೂ ಡಿಜಿಟಲ್ ಕ್ಷೇತ್ರದ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಈ ಶೃಂಗಸಭೆಯನ್ನು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಉದ್ಘಾಟನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಡಿಜಿಟಲ್ ಆರ್ಥಿಕತೆಯಲ್ಲಿ ಸುರಕ್ಷತೆ, ಡಿಜಿಟಲ್ ಕೌಶಲ್ಯ ಕುರಿತ ಚರ್ಚೆಗಳು ನಡೆಯಲಿದೆ ಎಂದು ತಿಳಿದುಬಂದಿದೆ.
ಹಾಗೂ, ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯಲ್ಲಿ ಕಾರ್ಪೊರೇಟ್ಸ್ ಮತ್ತು ಸ್ಟಾರ್ಟ್ಅಪ್ ಎಕ್ಸಿಬಿಷನ್ ಕೂಡ ನಡೆಯಲಿದೆ. ಎಡ್-ಟೆಕ್, ಹೆಲ್ತ್-ಟೆಕ್, ಅಗ್ರಿ-ಟೆಕ್, ಫಿನ್-ಟೆಕ್, ಸುರಕ್ಷಿತ ಡಿಜಿಟಲ್ ಮೂಲಸೌಕರ್ಯ ಮತ್ತು ಮರುಬಳಕೆ ಆರ್ಥಿಕತೆ ಎಂಬ ಆರು ಥೀಮ್‌ಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 

ಇದನ್ನು ಓದಿ: ಸೆಪ್ಟೆಂಬರ್ 8 ರಂದು ಭಾರತಕ್ಕೆ ಬರ್ತಿದ್ದಾರೆ ವಿಶ್ವದ ದೊಡ್ಡಣ್ಣ ಜೋ ಬೈಡೆನ್‌: ಜಿ-20 ಶೃಂಗಸಭೆಯಲ್ಲಿ ಭಾಗಿ

29 ದೇಶಗಳ ಒಟ್ಟು 174 ಸ್ಟಾರ್ಟ್ ಅಪ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆಗಸ್ಟ್ 18 ರಂದು ಅಂದರೆ ನಾಳೆ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದೆ. ಇನ್ನು, ಈ ಕಾರ್ಯಕ್ರಮದಲ್ಲಿ ಭಾಗಿಯಾದ ವಿವಿಧ ವಿಭಾಗಗಳಲ್ಲಿ 30 ಸ್ಟಾರ್ಟಪ್‌ಗಳನ್ನು ಗೌರವಿಸಲಾಗತ್ತೆ ಎಂದೂ ತಿಳಿದುಬಂದಿದೆ. 

ಇನ್ನು, ಕಾರ್ಯಕ್ರಮ ಉದ್ಘಾಟನೆಯ ಬಳಿಕ ಮಾತನಾಡಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬೆಂಗಳೂರು ಸ್ಟಾರ್ಟಪ್ ಹಾಗೂ ಹೊಸ ಇನ್ನೊವೇಷನ್‌ಗೆ ಎಪಿಕ್ ಸೆಂಟರ್ ಆಗಿದೆ. ಭಾರತ ಹೊಸ ಡಿಜಿಟಲ್ ಇನ್ನೋವೇಷನ್‌ನಲ್ಲಿ ಮುಂಚೂಣಿಯಲ್ಲಿದೆ. ದೇಶದ ಪ್ರತಿಯೊಬ್ಬರು ಡಿಜಿಟಲ್ ಅವಕಾಶಗಳನ್ನ ಬಳಸಿಕೊಳ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಮೇ 28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಡಿಜಿಟಲ್ ಭವಿಷ್ಯದ ಕುರಿತು 2021 ರಲ್ಲಿ ಹೇಳಿದ್ದರು. ಈ ದಶಕವನ್ನು ಟೆಕೇಡ್‌ ಅಂತ ಕರೆದಿದ್ದಾರೆ. ಅಂದರೆ ಭಾರತದಲ್ಲಿ ಡಿಜಿಟಲ್ ಭವಿಷ್ಯದ ಕುರಿತು ಆಗುವ ಬೆಳವಣಿಗೆ ಕಾರಣಕ್ಕಾಗಿ ಪ್ರಧಾನಿಗಳು ಟೆಕೇಡ್ ಅಂತ ಕರೆದ್ರು. ಭಾರತದ ಆಡಳಿತವನ್ನೇ ಒಂದು ಕೇಸ್ ಸ್ಟಡಿಯಾಗಿ ನೋಡಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದಲ್ಲಿ ಆಗಿರುವ ಡಿಜಿಟಲ್ ಕ್ರಾಂತಿ ಕುರಿತು ಕೇಸ್ ಸ್ಟಡಿ ಮಾಡಬಹುದು ಎಂದೂ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ.

ಅಲ್ಲದೆ, ಹಿಂದೆ ಒಂದು ಮಾತು ಹೇಳ್ತಿದ್ರು. ಕೇಂದ್ರದಿಂದ 100 ರೂಪಾಯಿ ಬಿಡುಗಡೆ ಆದರೆ 15 ರೂಪಾಯಿ ಮಾತ್ರ ಜನರಿಗೆ ತಲುಪುತ್ತೆ. ಉಳಿದ 85 ರೂಪಾಯಿ ಸೋರಿಕೆ ಆಗತ್ತೆ, ಮಧ್ಯವರ್ತಿಗಳಿಗೆ ಸೇರುತ್ತೆ ಎನ್ನುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ. ಕೇಂದ್ರದಿಂದ ಬಿಡುಗಡೆಯಾಗುವ ಹಣ ಜನರಿಗೆ ನೇರವಾಗಿ ತಲುಪುತ್ತಿದೆ. ಇದಕ್ಕೆ ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಆಗಿರುವ ಕ್ರಾಂತಿಯೇ ಕಾರಣ ಎಂದೂ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. 

ಇದನ್ನೂ ಓದಿ: ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು..!

Latest Videos
Follow Us:
Download App:
  • android
  • ios