ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್‌ ಮಾಡಬಹುದು..!

ಯುಪಿಐ ಭಾರತದಲ್ಲಿ ಚಿಲ್ಲರೆ ಡಿಜಿಟಲ್ ಪಾವತಿಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಇನ್ಮುಂದೆ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು ಈ ದೇಶದಲ್ಲಿರುವಾಗ ತಮ್ಮ ವ್ಯಾಪಾರಿ ಪಾವತಿಗಳಿಗೆ ಯುಪಿಐ ಅನ್ನು ಬಳಸಲು ಅನುಮತಿಸಲು ಈಗ ಪ್ರಸ್ತಾಪಿಸಲಾಗಿದೆ.

now travellers from these countries can make upi payments in india ash

ನವದೆಹಲಿ (ಫೆಬ್ರವರಿ 8, 2023): ಭಾರತಕ್ಕೆ ಭೇಟಿ ನೀಡುವವರು ದೇಶದಲ್ಲಿ ಶಾಪಿಂಗ್ ಮಾಡಲು ಯುಪಿಐ ಅಥವಾ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಗೆ ಪ್ರವೇಶ ಹೊಂದಿರುತ್ತಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಖ್ಯಸ್ಥ ಶಕ್ತಿಕಾಂತ ದಾಸ್ ಬುಧವಾರ ಮಾಹಿತಿ ನೀಡಿದ್ದಾರೆ. ಪ್ರಾರಂಭದಲ್ಲಿ ಜಿ - 20 ದೇಶಗಳ ಪ್ರವಾಸಿಗರಿಗೆ ಹಾಗೂ ಕೆಲವು ವಿಮಾನ ನಿಲ್ದಾಣಗಳಿಗೆ ಆಗಮಿಸುವವರಿಗೆ ಮಾತ್ರ ಯುಪಿಐ ಪಾವತಿಗಳನ್ನು ಮಾಡಲು ಅನುಮತಿಸಲಾಗುವುದು ಎಂದು ತಿಳಿದುಬಂದಿದೆ. 

ಯುಪಿಐ ಭಾರತದಲ್ಲಿ ಚಿಲ್ಲರೆ ಡಿಜಿಟಲ್ ಪಾವತಿಗಳಿಗೆ ಹೆಚ್ಚು ಜನಪ್ರಿಯವಾಗಿದೆ. ಇನ್ಮುಂದೆ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು ಈ ದೇಶದಲ್ಲಿರುವಾಗ ತಮ್ಮ ವ್ಯಾಪಾರಿ ಪಾವತಿಗಳಿಗೆ (P2M) ಯುಪಿಐ ಅನ್ನು ಬಳಸಲು ಅನುಮತಿಸಲು ಈಗ ಪ್ರಸ್ತಾಪಿಸಲಾಗಿದೆ. ಪ್ರಾರಂಭದಲ್ಲಿ, ಈ ಸೌಲಭ್ಯವನ್ನು ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಆಗಮಿಸುವ G-20 ದೇಶಗಳ ಪ್ರಯಾಣಿಕರಿಗೆ ವಿಸ್ತರಿಸಲಾಗುವುದು ಎಂದು ಶಕ್ತಿಕಾಂತ್‌ ದಾಸ್ ಹೇಳಿದರು. ನವೆಂಬರ್‌ವರೆಗೆ ಭಾರತವು ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿರುವುದರಿಂದ, ದೇಶದಲ್ಲಿ ಅನೇಕ ಕಾರ್ಯಕ್ರಮಗಳಿಗೆ ವಿದೇಶಿ ಪ್ರತಿನಿಧಿಗಳಿಗೆ ಆಹ್ವಾನಿಸಲಾಗಿದೆ.

ಇದನ್ನು ಓದಿ: ಕೇಂದ್ರದಿಂದ ಮಹತ್ವದ ಹೆಜ್ಜೆ, ಭೀಮ್, ಯುಪಿಐ, ರುಪೇ ಡೆಬಿಟ್ ಕಾರ್ಡ್‌ ವಹಿವಾಟಿಗೆ ಪ್ರೋತ್ಸಾಹ ಧನ!

ಭಾರತದಲ್ಲಿ ಎಲೆಕ್ಟ್ರಾನಿಕ್ ಪಾವತಿಗಳಿಗೆ ಯುಪಿಐ ಒಂದು ಜನಪ್ರಿಯ ಸಾಧನವಾಗಿದೆ. ಕಳೆದ 6 ವರ್ಷಗಳಲ್ಲಿ, ಯುಪಿಐ ವಹಿವಾಟುಗಳಲ್ಲಿ ಭಾರಿ ಜಿಗಿತ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ಯುಪಿಐ ವಹಿವಾಟು ದಾಖಲೆಯ ಗರಿಷ್ಠ ₹ 12.82 ಲಕ್ಷ ಕೋಟಿ ತಲುಪಿದೆ. ಕಳೆದ ತಿಂಗಳು, ಇತರ ದೇಶಗಳಲ್ಲಿನ ಭಾರತೀಯರು ತಮ್ಮ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಯುಪಿಐ ಅನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ವಿದೇಶದಲ್ಲಿರುವ ಭಾರತೀಯರು ಏಪ್ರಿಲ್ 30 ರೊಳಗೆ ಯುಪಿಐ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.

10 ದೇಶಗಳಲ್ಲಿನ ಅನಿವಾಸಿ ಭಾರತೀಯರು (NRIಗಳು) ತಮ್ಮ ಭಾರತದ ಫೋನ್ ಸಂಖ್ಯೆಯನ್ನು ಅವಲಂಬಿಸದೆಯೇ ವಹಿವಾಟುಗಳಿಗಾಗಿ ಯುಪಿಐ ಸೇವೆಗಳನ್ನು ಬಳಸಬಹುದು. ಸಿಂಗಾಪುರ, ಅಮೆರಿಕ (ಯುಎಸ್), ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಸೇರಿ 10 ದೇಶಗಳಿಗೆ ಅವಕಾಶ ನೀಡಲಾಗಿದೆ. 
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಗಳೊಂದಿಗೆ NRE/NRO (ನಾನ್‌ ರೆಸಿಡೆಂಟ್‌ ಎಕ್ಸ್‌ಟರ್ನಲ್‌ ಮತ್ತು ನಾನ್ ರೆಸಿಡೆಂಟ್ ಆರ್ಡಿನರಿ) ಖಾತೆಗಳು ಯುಪಿಐ ಬಳಸಿ ವಹಿವಾಟು ನಡೆಸಬಹುದು. ಎನ್‌ಆರ್‌ಇ ಖಾತೆಯು ಎನ್‌ಆರ್‌ಐಗಳಿಗೆ ವಿದೇಶಿ ಗಳಿಕೆಯನ್ನು ಭಾರತಕ್ಕೆ ವರ್ಗಾಯಿಸಲು ಸಹಾಯ ಮಾಡುತ್ತದೆ. ಆದರೆ ಎನ್‌ಆರ್‌ಒ ಖಾತೆಯು ಭಾರತದಲ್ಲಿ ಗಳಿಸಿದ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಗೂಗಲ್ ಪೇ, ಪೇಟಿಎಂ ವಹಿವಾಟುಗಳಿಗೆ ಕಡಿವಾಣ? ಶೀಘ್ರದಲ್ಲೇ ಯುಪಿಐ ಪಾವತಿ ಆ್ಯಪ್ ಗಳಿಗೆ ಮಿತಿ ಹೇರಿಕೆ

ಫೋನ್‌ ಪೇ ಮೂಲಕ ಇನ್ನು ವಿದೇಶಗಳಲ್ಲೂ ಹಣ ಪಾವತಿ
ಭಾರತದಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಯುಪಿಐ ಆಧಾರಿತ ಹಣ ವರ್ಗಾವಣೆ ಆ್ಯಪ್‌ ಫೋನ್‌ ಪೇ ಇದೀಗ ವಿದೇಶಗಳಲ್ಲೂ ತನ್ನ ಸೇವೆಯನ್ನು ಆರಂಭಿಸಿದೆ. ಈ ಮೂಲಕ ಈ ಮಾದರಿಯ ಸೇವಯನ್ನು ಒದಗಿಸುತ್ತಿರುವ ದೇಶದ ಮೊದಲ ಆ್ಯಪ್‌ ಎಂಬ ಹಿರಿಮೆಗೆ ಪಾತ್ರವಾಗಿದೆ. ಅಂತಾರಾಷ್ಟ್ರೀಯ ಡೆಬಿಟ್‌ ಕಾರ್ಡ್‌ನಂತೆಯೇ ಈ ಫೋನ್‌ ಪೇ ಕೆಲಸ ನಿರ್ವಹಿಸಲಿದೆ. ಆ್ಯಪ್‌ನಲ್ಲಿ ಈ ಪೇಮೆಂಟ್‌ ವಿಧಾನವನ್ನು ಯಾವಾಗ ಬೇಕಾದರೂ ಆನ್‌ ಮಾಡಿಕೊಳ್ಳಬಹುದಾಗಿದೆ.

ಪೇಟಿಎಂ ಆ್ಯಪ್‌ ಬಳಸಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ವಿದೇಶಗಳಲ್ಲಿ ಹಣ ಪಾವತಿಸಿದಾಗ, ಅಲ್ಲಿನ ಹಣದ ಮೌಲ್ಯವೇ ಸಂದಾಯವಾಗಲಿದೆ. ಸದ್ಯಕ್ಕೆ ಯುಎಇ, ಸಿಂಗಾಪುರ, ಮಾರಿಷಿಯಸ್‌, ನೇಪಾಳ ಮತ್ತು ಭೂತಾನ್‌ ದೇಶಗಳಲ್ಲಿ ಈ ಸೇವೆ ನೀಡಲಾಗುತ್ತಿದ್ದು, ಶೀಘ್ರವೇ ಉಳಿದ ದೇಶಗಳಿಗೂ ಇದನ್ನು ವಿಸ್ತರಿಸಲಾಗುವುದು. ವಿದೇಶ ಪ್ರವಾಸ ಕೈಗೊಳ್ಳುವವರಿಗೆ ಇದು ಸಹಾಯಕವಾಗಲಿದೆ ಎಂದು ಫೋನ್‌ಪೇ ಸಹ ಸಂಸ್ಥಾಪಕ ರಾಹುಲ್‌ ಚಾರಿ ಹೇಳಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ಯುಪಿಐ ಹಣ ವರ್ಗಾವಣೆಯಲ್ಲಿ ಶೇ.49ರಷ್ಟನ್ನು ಫೋನ್‌ಪೇ ಹೊಂದಿದೆ.

ಇದನ್ನೂ ಓದಿ: ಭಾರತದ ಕೊನೆಯ ಟೀ ಸ್ಟಾಲ್‌ನಲ್ಲಿ ಡಿಜಿಟಲ್ ಪೇಮೆಂಟ್‌ಗೆ ಅವಕಾಶ; ಆನಂದ್ ಮಹೀಂದ್ರಾ ಟ್ವೀಟ್

Latest Videos
Follow Us:
Download App:
  • android
  • ios