ಸೆಪ್ಟೆಂಬರ್ 8 ರಂದು ಭಾರತಕ್ಕೆ ಬರ್ತಿದ್ದಾರೆ ವಿಶ್ವದ ದೊಡ್ಡಣ್ಣ ಜೋ ಬೈಡೆನ್: ಜಿ-20 ಶೃಂಗಸಭೆಯಲ್ಲಿ ಭಾಗಿ
ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜಿ 20 ನಾಯಕರ ಶೃಂಗಸಭೆ ನಡೆಯಲಿದ್ದು, ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಭಾಗಿಯಾಗಲಿದ್ದಾರೆ.
ನವದೆಹಲಿ (ಆಗಸ್ಟ್ 6, 2023): ಪ್ರಧಾನಿ ಮೋದಿ ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದು, ಈ ವೇಳೆ ಮೋದಿಯ ಭೇಟಿ ವಿಶ್ವಾದ್ಯಂತ ಜನಪ್ರಿಯವಾಗಿತ್ತು. ಈ ಭೇಟಿ ಬೆನ್ನಲ್ಲೇ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ ಭಾರತ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಸೆಪ್ಟೆಂಬರ್ 8 ರಂದು ಭಾರತಕ್ಕೆ ಜೋ ಬೈಡೆನ್ ಆಗಮಿಸಲಿದ್ದಾರೆ. ಅಲ್ಲದೆ, ಜಿ - 20 ಶೃಂಗಸಭೆಯಲ್ಲಿ ವಿಶ್ವದ ದೊಡ್ಡಣ್ಣ ರಾಷ್ಟ್ರದ ಅಧ್ಯಕ್ಷ ಭಾಗಿಯಾಗಲಿದ್ದಾರೆ.
ಭಾರತ ಈ ಬಾರಿಯ ಶೃಂಗಸಭೆಯ ಅಧ್ಯಕ್ಷ ಸ್ಥಾನ ಪಡೆದಿದ್ದು, ಈ ಹಿನ್ನೆಲೆ ದೇಶದಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ಜಿ 20 ನಾಯಕರ ಶೃಂಗಸಭೆಯನ್ನು ಆಯೋಜಿಸಲಿದೆ. ಭಾರತವು ಡಿಸೆಂಬರ್ 1, 2022 ರಿಂದ ನವೆಂಬರ್ 30, 2023 ರವರೆಗೆ ಜಿ20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ರಾಷ್ಟ್ರಾದ್ಯಂತ ಹಲವಾರು ಸಭೆಗಳನ್ನು ಸಕ್ರಿಯವಾಗಿ ಆಯೋಜಿಸಿದೆ. ಇನ್ನು, ಜೂನ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯುನೈಟೆಡ್ ಸ್ಟೇಟ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೆಪ್ಟೆಂಬರ್‌ನಲ್ಲಿ ಹೊಸ ದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ನಿರೀಕ್ಷೆಯನ್ನು ವ್ಯಕ್ತಪಡಿದ್ದರು.
ಇದನ್ನು ಓದಿ: ಅಮೆರಿಕ ಪ್ರವಾಸದ ಜೊತೆಗೆ ಈಜಿಪ್ಟ್‌ಗೂ ಮೋದಿ ಭೇಟಿ: ವಿದೇಶಾಂಗ ಸಚಿವಾಲಯ
ಭಾರತ ಮತ್ತು ಯುಎಸ್ ಜಂಟಿ ಹೇಳಿಕೆಯು ಅದರ ಪ್ರಸ್ತುತ ಜಿ20 ಪ್ರೆಸಿಡೆನ್ಸಿಯಲ್ಲಿ ಭಾರತದ ನಾಯಕತ್ವಕ್ಕಾಗಿ ಜೋ ಬೈಡೆನ್ ಅವರ ಮೆಚ್ಚುಗೆಯನ್ನು ಒತ್ತಿ ಹೇಳುತ್ತದೆ. ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಸಂಘರ್ಷಗಳು ಮತ್ತು ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯಂತಹ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸುವ ಪ್ರಯತ್ನಗಳನ್ನು ಈ ನಾಯಕತ್ವವು ಪುನಶ್ಚೇತನಗೊಳಿಸಿದೆ. ಇದು ದೃಢವಾದ, ಸಮರ್ಥನೀಯ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಗೆ ಅಡಿಪಾಯವನ್ನು ಹಾಕುತ್ತದೆ.
ಜಿ20 ನಾಯಕರ ಶೃಂಗಸಭೆಗೆ ಹಂಚಿಕೆಯ ಆದ್ಯತೆಗಳನ್ನು ಪೂರೈಸಲು ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಒಗ್ಗಟ್ಟಿನ ನಿರ್ಣಯವನ್ನು ಹೇಳಿಕೆಯು ದೃಢಪಡಿಸಿದೆ. ಇವುಗಳಲ್ಲಿ ಸಾರ್ವಭೌಮ ಸಾಲ ಪುನರ್ರಚನೆ ಪ್ರಕ್ರಿಯೆಯನ್ನು ಹೆಚ್ಚಿಸುವುದು, ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ವಿಕಾಸ ಕಾರ್ಯಸೂಚಿಯನ್ನು ಮುಂದುವರಿಸುವುದು ಮತ್ತು ಚೇತರಿಸಿಕೊಳ್ಳುವ ಮೂಲಸೌಕರ್ಯಕ್ಕಾಗಿ ಖಾಸಗಿ ವಲಯದ ಹೂಡಿಕೆಯನ್ನು ಹೆಚ್ಚಿಸುವುದು ಸೇರಿವೆ. ಜಾಗತಿಕ ಮೂಲಸೌಕರ್ಯ ಮತ್ತು ಹೂಡಿಕೆಗಾಗಿ ಪಾಲುದಾರಿಕೆಯಂತಹ ಉಪಕ್ರಮಗಳ ಮೂಲಕ ಈ ಹೂಡಿಕೆಯು ವಿಶೇಷವಾಗಿ ಮುಖ್ಯವಾಗಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಮೋದಿ ಭೇಟಿ ಸಂಚಲನ: ಹೋಟೆಲ್, ವಿಮಾನ ಪ್ರಯಾಣದ ದರ ಭಾರಿ ಏರಿಕೆ; ಅಧ್ಯಕ್ಷ ದಂಪತಿಯಿಂದ ಆತ್ಮೀಯ ಔತಣ
ಇದಕ್ಕೂ ಮೊದಲು, ಸೆಪ್ಟೆಂಬರ್‌ನಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಬೈಡೆನ್ ಅವರ ಉಪಸ್ಥಿತಿಯನ್ನು ದಕ್ಷಿಣ ಮತ್ತು ಮಧ್ಯ ಏಷ್ಯಾದ ಯುಎಸ್ ಸಹಾಯಕ ಕಾರ್ಯದರ್ಶಿ ಡೊನಾಲ್ಡ್ ಲೂ ದೃಢಪಡಿಸಿದರು. ಭಾರತ ಜಿ - 20 ಆತಿಥ್ಯ ವಹಿಸುತ್ತಿದ್ದರೆ, ಅಮೆರಿಕ APEC ನ ಆತಿಥ್ಯ ವಹಿಸುತ್ತಿದೆ ಮತ್ತು G7 ನಲ್ಲಿ ಜಪಾನ್ ನಾಯಕತ್ವವನ್ನು ಪಡೆಯಲಿದೆ. ಈ ಹಿನ್ನೆಲೆ ಭಾರತ-ಯುಎಸ್ ಸಂಬಂಧಕ್ಕೆ ಈ ವರ್ಷದ ಮಹತ್ವವನ್ನು ಡೊನಾಲ್ಡ್ ಲೂ ಒತ್ತಿ ಹೇಳಿದರು. ಈ ಅವಕಾಶಗಳು QUAD ಸದಸ್ಯರ ನಡುವೆ ಬಲಗೊಂಡ ಸಂಬಂಧಗಳನ್ನು ಸುಗಮಗೊಳಿಸುತ್ತದೆ.
ಇದನ್ನೂ ಓದಿ: ಒಡಿಶಾ ರೈಲು ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ವಿಶ್ವದ ದೊಡ್ಡಣ್ಣ ಜೋ ಬೈಡೆನ್, ಕ್ಸಿ ಜಿನ್‌ಪಿಂಗ್