ಮುಂಬೈ  (ಏ.  28): ಭಾರತದ ತನಿಖಾ ಸಂಸ್ಥೆಗಳ ಕೈಗೆ ಸಿಗದೆ ವಿದೇಶಗಳಲ್ಲಿ ಅವಿತಿರುವ ಆಭರಣ ಉದ್ಯಮಿ ಮೆಹುಲ್‌ ಚೋಕ್ಸಿ ಹಾಗೂ ಮದ್ಯದ ದೊರೆ ವಿಜಯ್‌ ಮಲ್ಯ ಅವರ ಕಂಪನಿಗಳೂ ಸೇರಿದಂತೆ 50 ಉದ್ಯಮಿಗಳ 68,607 ಕೋಟಿ ರು. ಸುಸ್ತಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ‘ಮನ್ನಾ’ (ರೈಟಾಫ್‌) ಮಾಡಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ಸಾವಿರಾರು ಕೋಟಿ ರು. ಸಾಲ ಮರುಪಾವತಿಸದೆ ಬಾರ್ಬಡೋಸ್‌ನ ಆ್ಯಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ಮೆಹುಲ್‌ ಚೋಕ್ಸಿ ಅತಿ ಹೆಚ್ಚು ಸಾಲ ಮನ್ನಾ ಮಾಡಿಸಿಕೊಂಡ ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅವರ ಗೀತಾಂಜಲಿ ಜೆಮ್ಸ್‌ನ 5492 ಕೋಟಿ ರು., ಗಿಲಿ ಇಂಡಿಯಾ ಲಿಮಿಟೆಡ್‌ನ 1447 ಕೋಟಿ ರು. ಹಾಗೂ ನಕ್ಷತ್ರ ಬ್ರಾಂಡ್ಸ್‌ನ 1109 ಕೋಟಿ ರು. ಸಾಲ ಮನ್ನಾ ಆಗಿದೆ. ಹಾಗೆಯೇ ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ವಿಜಯ್‌ ಮಲ್ಯ ಅವರ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ 1943 ಕೋಟಿ ರು. ಸಾಲ ಮನ್ನಾ ಆಗಿದೆ. ಬಾಬಾ ರಾಮದೇವ್‌ ಅವರ ರುಚಿ ಸೋಯಾ ಕಂಪನಿಯ 2212 ಕೋಟಿ ರು. ಸುಸ್ತಿಸಾಲ ಕೂಡ ಮನ್ನಾ ಆಗಿದೆ.

ಕನಿಷ್ಠ 10 ರೂ. ಸಾಕು ಪೋಸ್ಟ್ ಆಫೀಸ್ RD ಉಳಿತಾಯಕ್ಕೆ, ಪಡೆಯಿರಿ ಲಕ್ಷ ಲಕ್ಷ !

ಆರ್‌ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಎಂಬುವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಸ್ವತಃ ಆರ್‌ಬಿಐ ಈ ಮಾಹಿತಿ ನೀಡಿದೆ. ಉದ್ದೇಶಪೂರ್ವಕ ಸುಸ್ತಿದಾರರಾದ ಕಂಪನಿಗಳ ಹಾಗೂ ವಂಚನೆ ಎಸಗಿ ವಿದೇಶಕ್ಕೆ ಪರಾರಿಯಾದ ದೊಡ್ಡ ದೊಡ್ಡ ಉದ್ಯಮಿಗಳ ಸಾಲವನ್ನು ಸರ್ಕಾರ ಮನ್ನಾ ಮಾಡಿರುವ ವಿಷಯ ದೊಡ್ಡ ವಿವಾದಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಯಾರ್ಯಾರ ಸಾಲ ಮನ್ನಾ?

ಮೆಹುಲ್‌ ಚೋಕ್ಸಿ - 8048 ಕೋಟಿ

ಆರ್‌ಇಐ ಅಗ್ರೋ ಲಿ. (ಸಂದೀಪ್‌, ಸಂಜಯ್‌ ಜುಂಝನ್‌ವಾಲಾ) - 4314 ಕೋಟಿ

ವಿನ್ಸಮ್‌ ಡೈಮಂಡ್ಸ್‌ (ಜತಿನ್‌ ಮೆಹ್ತಾ) - 4076 ಕೋಟಿ

ರೊಟೋಮ್ಯಾಕ್‌ ಗ್ಲೋಬಲ್‌ (ಕೊಠಾರಿ) - 2850 ಕೋಟಿ

ಕುಡೋಸ್‌ ಕೆಮಿ, ಪಂಜಾಬ್‌ - 2326 ಕೋಟಿ

ರುಚಿ ಸೋಯಾ ಇಂಡಸ್ಟ್ರೀಸ್‌ (ಬಾಬಾ ರಾಮದೇವ್‌, ಬಾಲಕೃಷ್ಣ) - 2212 ಕೋಟಿ

ಜೂಮ್‌ ಡೆವಲಪರ್ಸ್‌ - 2012 ಕೋಟಿ

ಕಿಂಗ್‌ಫಿಶರ್‌ ಏರ್‌ಲೈನ್ಸ್‌ (ವಿಜಯ್‌ ಮಲ್ಯ) - 1943 ಕೋಟಿ

ಇದು ಆ ‘ಮನ್ನಾ’ ಅಲ್ಲ

ವಸೂಲಾಗದ ಸಾಲಗಳನ್ನು ಬ್ಯಾಂಕುಗಳು ‘ಡ್ಟಿಜಿಠಿಛಿ​ಟ್ಛ್ಛ’ ಮಾಡುತ್ತವೆ. ಹಾಗಂತ ಇದು ರೈತರು ಹಾಗೂ ವಿವಿಧ ವರ್ಗಗಳಿಗೆ ಮಾಡುವ ಸಾಲ ಮನ್ನಾ ಅಲ್ಲ. ಬ್ಯಾಂಕುಗಳು ವಸೂಲಾಗದ ಸಾಲಗಳನ್ನು ತಮ್ಮ ಬ್ಯಾಲೆನ್ಸ್‌ಶೀಟ್‌ನಿಂದ ಕೈಬಿಡಲು ಈ ಕಸರತ್ತು ನಡೆಸುತ್ತವೆ. ಆದರೆ ವಸೂಲಾತಿ ಪ್ರಕ್ರಿಯೆ ಮುಂದುವರಿಯುತ್ತದೆ. ಮುಂದೊಂದು ದಿನ ಸಾಲ ವಸೂಲಾದರೆ ಅದನ್ನು ಲಾಭ ಎಂದು ತೋರಿಸಿಕೊಳ್ಳುತ್ತವೆ. ‘ಡ್ಟಿಜಿಠಿಛಿ​ಟ್ಛ್ಛ’ ಆದ ಸಾಲಗಳನ್ನು ವಸೂಲಿ ಮಾಡಿದ ನಿದರ್ಶನಗಳಿವೆ.

ಸಂಕಷ್ಟದ ನಡುವೆಯೂ ಚಿನ್ನ ಖರೀದಿ ಜೋರು, ಎಲ್ಲವೂ ಆನ್‌ಲೈನ್ ವ್ಯಾಪಾರ!

‘ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಕೇಳಿದ್ದ ಪ್ರಶ್ನೆಗೆ 2020ರ ಫೆ.16ರಂದು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಹಾಗೂ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಸಂಸತ್ತಿನಲ್ಲಿ ಉತ್ತರ ನೀಡಲು ನಿರಾಕರಿಸಿದ್ದರಿಂದ ನಾನು ಈ ಆರ್‌ಟಿಐ ಅರ್ಜಿ ಸಲ್ಲಿಸಿದ್ದೆ. 2019ರ ಸೆಪ್ಟೆಂಬರ್‌ 30ರವರೆಗಿನ 68,607 ಕೋಟಿ ರು. ಸುಸ್ತಿಸಾಲವನ್ನು ತಾಂತ್ರಿಕವಾಗಿ ಮನ್ನಾ ಮಾಡಲಾಗಿದೆ ಎಂದು ಆರ್‌ಬಿಐನ ಮಾಹಿತಿ ಅಧಿಕಾರಿ ಅಭಯ್‌ ಕುಮಾರ್‌ ನನಗೆ ಏ.24ರಂದು ಲಿಖಿತ ಉತ್ತರ ನೀಡಿದ್ದಾರೆ’ ಎಂದು ಗೋಖಲೆ ಹೇಳಿದ್ದಾರೆ.

ಸಾಲ ಮನ್ನಾ ಮಾಡಿಸಿಕೊಂಡವರೆಲ್ಲ ಉದ್ದೇಶಪೂರ್ವಕ ಸುಸ್ತಿದಾರರಾಗಿದ್ದು, ಅವರು ಎಸಗಿದ ವಂಚನೆಯ ವಿರುದ್ಧ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಭಾರತದ ವಿವಿಧ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.