ಕನಿಷ್ಠ 10 ರೂ. ಸಾಕು ಪೋಸ್ಟ್ ಆಫೀಸ್ RD ಉಳಿತಾಯಕ್ಕೆ, ಪಡೆಯಿರಿ ಲಕ್ಷ ಲಕ್ಷ !
ಹಣ ಉಳಿತಾಯ ಮಾಡಲು ದೇಶದಲ್ಲಿನ ಎಲ್ಲಾ ಬ್ಯಾಂಕ್‌ಗಳಲ್ಲಿ ಹಲವು ಆಯ್ಕೆಗಳಿವೆ. ಆದರೆ ಯಾವುದೇ ಆತಂಕವಿಲ್ಲದೆ, ರಿಸ್ಕ್ ಇಲ್ಲದೆ, ಸುರಕ್ಷಿತವಾಗಿ ಹಣ ಉಳಿತಾಯ ಮಾಡಲು ಭಾರತೀಯ ಫೋಸ್ಟ್ ಆಫೀಸ್ ಅತ್ಯುತ್ತಮ. ಪೋಸ್ಟ್ ಆಫೀಸ್‌ಗಳಲ್ಲಿ ಉಳಿತಾಯ ಮಾಡಲು 9 ಆಯ್ಕೆಗಳಿವೆ. ಇದರಲ್ಲಿ ಆರ್‌ಡಿ( ರಿಕರಿಂಗ್ ಡೆಪಾಸಿಟ್) ಕೂಡ ಒಂದು. ಮಾರುಕಟ್ಟೆ ಅಲ್ಲೋಲ ಕಲ್ಲೋಲವಾದರೂ ನೀವು ಕೂಡಿಟ್ಟ ಹಣಕ್ಕೆ ಯಾವುದೇ ಸಮಸ್ಯೆ ಇಲ್ಲ. ಅವದಿ ಮುಗಿದರೆ ಬಡ್ಡಿ ಸಮೇತ ಹಣ ಹಿಂಪಡೆಯಬಹುದು. ಪೋಸ್ಟ್ ಆಫೀಸ್ RD ಉಳಿತಾಯ ಕುರಿತ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್‌ನಲ್ಲಿರುವ 9 ಸಣ್ಣ ಉಳಿತಾಯ ಯೋಜನೆಗಳಲ್ಲಿ RD ಕೂಡ ಒಂದು. ಈ ಸ್ಕೀಮ್‌ನಡಿ ಲಾಭ ಪಡೆಯಲು ಉದ್ದೇಶಿಸುವ ಗ್ರಾಹಕರು ಕನಿಷ್ಠ 5 ವರ್ಷ RD ಉಳಿತಾಯ ಖಾತೆ ಸಕ್ರೀಯವಾಗಿಡಬೇಕು
RD ಖಾತೆಯಲ್ಲಿ ಹಣ ಉಳಿತಾಯ ಮಾಡಲು ಮಾರುಕಟ್ಟೆ , ಬ್ಯಾಕಿಂಗ್, ಸ್ಟಾಕ್ ಮಾರ್ಕೆಟ್ ಅನುಭವ ಬೇಕಿಲ್ಲ, ನಿರ್ದಿಷ್ಟ ಹಣವನ್ನು ಪ್ರತಿ ತಿಂಗಳು ಕಟ್ಟಿದರೆ ಸಾಕು
18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆ ಪೋಸ್ಟ್ ಆಫೀಸ್ RD ಉಳಿತಾಯ ಯೋಜನೆಯಡಿ ಹೂಡಿಕೆ ಮಾಡಬಹುದು, 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ತಾಪ್ತರು ಕೂಡ ಪೋಷಕರ ಸಹಾಯದಿಂದ RD ಖಾತೆ ಹೊಂದಬಹುದು
ಪ್ರತಿ ತಿಂಗಳ ಕನಿಷ್ಟ 10 ರೂಪಾಯಿ ಕಟ್ಟುವ ಏಕೈಕ ಉಳಿತಾಯ ಯೋಜನೆ RD. ಗರಿಷ್ಠ ಮಿತಿ ನಿಗದಿಪಡಿಸಿಲ್ಲ, ಚೆಕ್ ಅಥವಾ ನಗದು ಮೂಲಕ ಪೋಸ್ಟ್ ಆಫೀಸ್ RD ಯೋಜನೆಗೆ ಹಣ ಕಟ್ಟಬಹುದು
ಪ್ರತಿ ತಿಂಗಳ ಬದಲು ಮುಂಗಡವಾಗಿ ಹಣ ಕಟ್ಟುವ ಆಯ್ಕೆಯೂ ಇದೆ. ಆದರೆ ಗರಿಷ್ಠ 6 ತಿಂಗಳ ಹಣವನ್ನು ಮುಂಗಡವಾಗಿ ಕಟ್ಟವು ಅವಕಾಶವಿದೆ
ಖಾತೆ ತೆರೆದ ಒಂದು ವರ್ಷದ ಬಳಿಕ ಉಳಿತಾಯವಾಗಿರುವ ಹಣದಲ್ಲಿ ಶೇಕಡಾ 50 ರಷ್ಟು ಹಿಂಪಡೆಯಲು ಅವಕಾಶವಿದೆ
2019ರ ಪೋಸ್ಟ್ ಆಫೀಸ್ ನಿಯಮದ ಪ್ರಕಾರ RD ಯೋಜನೆಯಲ್ಲಿ ಕೂಡಿಟ್ಟ ಹಣಕ್ಕೆ 7.2% ಬಡ್ಡಿಯನ್ನು ಪೋಸ್ಟ್ ಆಫೀಸ್ ನೀಡಲಿದೆ
ಸೆಕ್ಷನ್ 80ಸಿ ಪ್ರಕಾರ RD ಖಾತೆದಾರರ ವಾರ್ಷಿಕ ಗರಿಷ್ಠ 1.5 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಪಡೆಯಬಹುದು